ಎಲ್ಲ ರಾಗವನರಿತ....
ಕವನ
-೧-
ಎಲ್ಲ ರಾಗವನರಿತ
ಗಾನ ಚತುರ
ನನ್ನ ಜೊತೆಗಾರ
ಆದರೆ
ಅನುರಾಗದ ಜಾಡನರಿಯದೆ
ಉಳಿದ
ನನ್ನಿಂದ ದೂರ
-೨-
ನನಗೆ ಸಿಗಲಿಲ್ಲ ಒಬ್ಬ
ಸೀತೆಗೆ ಸಿಕ್ಕ ರಾಘವ
ರಾಧೆಗೆ ಸಿಕ್ಕ ಮಾಧವ
ಆದರೆ
ನನಗೆ ಸಿಕ್ಕಿದವ
ಒಬ್ಬ ದಾನವ
-೩-
ಪ್ರಿಯ,
ಕೊರಳಿಗೆ ಮುತ್ತಿನ ಮಾಲೆ
ಕಿವಿಗೆ ಚಿನ್ನದ ಓಲೆ
ಕೂಳಿಗೆ ಬೆಳ್ಳಿಯ ತಟ್ಟೆ
ಇವೆಲ್ಲವ ನನಗೆ ಕೊಟ್ಟೆ
ಆದರೆ
ಎದೆಗೆ ಬೇಕಾದ ಒಲವನ್ನ
ಕೊಡುವುದನ್ನೇಕೆ
ಮರೆತುಬಿಟ್ಟೆ
-ಮಾಲು
Comments
ಇಷ್ಟವಾಯಿತು.
ಇಷ್ಟವಾಯಿತು.