ಏಕದಂತ

ಏಕದಂತ

ಕವನ

ದೇವ ಗಣಪತಿ ನೀಡು ಸನ್ಮತಿ

ಚರಣಕೆರಗುವೆ ಅನುದಿನ

ಗಿರಿಜೆ ತನಯಗೆ ಮಂಗಳಾರತಿ

ಬೆಳಗಿ ಪೂಜಿಪೆ ದೇವನ

 

ಸುಮುಖ ಗಣಪನ ಉದರ ನೋಡುತ

ನಕ್ಕ ಅಣಕಿಸಿ ಚಂದ್ರನು

ಅವನ ಕುಹಕದ ಚೇಷ್ಟೆ ಸಹಿಸದೆ

ರೋಷಗೊಂಡನು ಗಣಪನು

 

ದಂತ ಒಂದನು ಎಸೆದ ಚಂದ್ರಗೆ

ಸಹಿಸಲಾಗದ ರೋಷಕೆ

ಚೌತಿ ಚಂದ್ರನ ಮಾಡಿ ದರ್ಶನ

ಕೃಷ್ಣ ಸಿಲುಕಿದ ಕಷ್ಟಕೆ

 

ಇಲಿಯನೇರುತ ಬರುವ ದೇವನು

ಮೊದಲ ಪೂಜೆಗೆ ಅಧಿಪತಿ

ಏಕದಂತನು ವಿಘ್ನ ಕಳೆಯುವ

ಭಕ್ತಿಗೊಲಿಯುವ ಗಣಪತಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್