ಏಕಾಂತ

ಏಕಾಂತ

ಕವನ

 ಈಗೀಗ ನನಗೇಕೋ                                                          

ಈ ಏಕಾಂತವು ಅತಿಯೆನಿಸುತ್ತಿದೆ

ನನ್ನ ವ್ಯಕ್ತಿತ್ವದ ಅಸ್ಥಿತ್ವವು
ಹಂತ ಹಂತವಾಗಿ ನಶಿಸುತ್ತಿದೆ
 
ನನ್ನೊಳಗಿನ ನನ್ನ ಲೋಕದಲಿ
ನನಗೆ ನನ್ನೊಡನೆಯೇ ಒಡನಾಟವು
ಹೇಗೆ ನೀಡಲಿ ನಿನ್ನ ಪ್ರೆಶ್ನೆಗಳಿಗುತ್ತರ
ನನಗಿಲ್ಲಿದೆ ನನ್ನದೇ ಹುಡುಕಾಟವು
 
"ಮನುಷ್ಯ ಸಂಘ ಜೀವಿ" ನೀನೆನ್ನಲು
ಸಾಂಗತ್ಯದ ಮಂತ್ರವ ನಾ ಪಠಿಸಿದೆ
ಕೃತಕ ನಗುವಿನ ಈ ಸಂತೆಯಲಿ
ನೋಡು! ಎಲ್ಲೆಲ್ಲೂ ಏಕಾಂತವೇ ನೆಲೆಸಿದೆ
 
ಸ್ವಾರ್ಥಗಳ ಮೀರಿದ ಒಲವ ಕಡಲಲ್ಲಿ
ತೇಲಾಡಲು ಮನವೀಗ ಬಯಸುತ್ತಿದೆ 
ಈಗೀಗ ನನಗೇಕೋ 
ಈ ಏಕಾಂತವು ಅತಿಯೆನಿಸುತ್ತಿದೆ
 
                                     -ಶಫಿ ಸಲಾಂ
                                      ಬಹರೈನ್  

Comments