ಏಕಾಕ್ಷರೀ
ಬರಹ
ಏಕಾಕ್ಷರಿಯನ್ನು ಯಾಕೆ ಬರೆಯಬಾರದು ಅಂತ ಅನ್ನಿಸಿತು. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.
ಮುಂಚಿತವಾಗಿ ಇದರ ಪರಿಸರದ ಬಗ್ಗೆ ಒಂದು ಸಣ್ಣ ಪರಿಚಯ ಮಾಡಿಕೊಡುವೆ.
ಸುಬ್ಬು ಸುಬ್ಬಕ್ಕ ಅವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದಾರೆ. ಪುಟ್ಟ ಹುಡುಗ (ನನ್ನ ಮಗನೇ ಇನ್ಯಾರೂ ಅಲ್ಲ ) ತಾನೂ ಅವರೊಂದಿಗೆ ಊಟ ಮಾಡುವೆನೆಂದು ಹಟ ಹಿಡಿದು ಕುಳಿತಿರುವನು. ಎಲ್ಲರ ಗಮನ ತನ್ನೆಡೆಗೇ ಸೆಳೆಯಬೇಕೆಂಬ ಹಂಬಲ ಅವನದ್ದು. ಅದಕ್ಕೆ ಹೀಗೆ ಹೇಳುತ್ತಿದ್ದಾನೆ.
ಮಮ್ಮ ಮಮ್ಮ ಮಮ್ಮು ಮಮ್ಮು
ಮಾಮಾ ಮಾಮೀ ಮೂಮೂ ಮಮ್ಮು
ಮಾಮಾ ಮಾಮಾ ಮಮ್ಮು ಮೈ ಮೈ
ಮಾಮೀ ಮಾಮೀ ಮಾಮಾ ಮಮ್ಮು
ಅಮ್ಮ ಊಟ ಹಾಕು
ಸುಬ್ಬಿ ಸುಬ್ಬಕ್ಕ ಅವರಿಗೆ ಊಟವನ್ನು ಬಾಯಿಗೆ ಹಾಕಿಕೋಬೇಕು ಎಂದು
ಮಾಮಾ ಎಲ್ಲೋ ನೋಡುತ್ತಾ ಊಟವನ್ನು ಮೈ ಮೇಲೆ ಹಾಕಿಕೊಳ್ತಿದ್ದೀಯ ಎಂದು ಎಚ್ಚರಿಕೆ - ಪಾಪ ಅವನಿಗೇನು ಗೊತ್ತು ಮಾಮನ ಜ್ಞಾನ ಎಲ್ಲಿದೆ ಎಂದು
ಮಾಮಿ ಮಾಮನಿಗೆ ಊಟ ಮಾಡುವುದನ್ನು ಹೇಳಿ ಕೊಡು ಎಂದು