ಏಕೀ ಮುನಿಸು?

ಏಕೀ ಮುನಿಸು?

ಕವನ

ದೂರನು ತಂದರು ನಾರೀ ಮಣಿಗಳು

ಕೇಳುತ ಸುಮ್ಮನೆ ಹೇಗಿರಲಿ

ಅವರುಗಳೆದುರಲಿ ನಿನ್ನನು ಬೈದೆನು

ಮುನಿಸನು ಕಳೆಯುವ ನಿಟ್ಟಿನಲಿ

 

ನನ್ನಯ ಮುದ್ದಿನ ಕಂದನ ಜರೆವೆನೆ

ಅರಿಯೆಯ ಮಾತೆಯ ಮನಸನ್ನು

ಮುನಿಸನು ತೊರೆಯುತ ನಸುನಗು ಹೊಮ್ಮಲಿ

ಈತರ ಕೋಪವು ಸಾಕಿನ್ನು

 

ಮಡಿಲಲಿ ಕೂರಿಸಿ ಮುದ್ದಿಸಿ ನಿನ್ನನು

ನೀಡುವೆ ಸುಮಧುರ ನವನೀತ

ಕೂತಿರು ಇಲ್ಲಿಯೆ ಅಲ್ಲಿಹ ಗುಮ್ಮನು

ಬರುವನು ಮಕ್ಕಳ ಹಿಡಿವಾತ

 

ಅಣ್ಣನ ಜೊತೆಯಲಿ ಆಡುತ ಬಳಲಿದೆ

ಎಲ್ಲಿಗೆ ಹೋದನು ಬಲರಾಮ

ಇಬ್ಬರು ಜೊತೆಯಲಿ ಬೆಣ್ಣೆಯ ಮೆಲ್ಲಿರಿ

ಸುಮ್ಮನೆ ಕುಳಿತಿರಿ ಆರಾಮ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ ಕೃಪೆ ಅಂತರ್ಜಾಲ) 

ಚಿತ್ರ್