ಏಕೆ ಈ ನಕಾರಾತ್ಮಕ ದೃಷ್ಟಿಕೋನ ?
ಏಕೆ ಈ ನಕಾರಾತ್ಮಕ ದೃಷ್ಟಿಕೋನ ?
( ನಮ್ಮ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಪ್ರಬಂಧ )
ನಮ್ಮ ದೇಶದ ಮಾಧ್ಯಮಗಳು ಏಕೆ ಇಷ್ಟು ನಕಾರಾತ್ಮಕ ಭಾವನೆವುಳ್ಳವಾಗಿದೆ? ನಮ್ಮ ಸಾಧನೆಗಳು, ನಮ್ಮ ಬಲವನ್ನು ಗುರುತಿಸಲು ನಮ್ಮ ಮಾಧ್ಯಮಗಳಿಗೆ ಅಷ್ಟೇಕೆ ಮುಜುಗರ? ನಾವು ಒಂದು ಮಹಾನ್ ರಾಷ್ಟ್ರ, ನಮ್ಮ ಸಫಲತೆಯ ಕಥೆಗಳು ಎಷ್ಟೂ ಇವೆ. ಆದರೆ ನಾವು ಅವನ್ನ ಗುರುತಿಲು ನಿರಾಕರಿಸುತ್ತೇವೆ. ಏಕೆ? ನಾವು ಹಾಲಿನ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ನಾವು ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ನಿಮರ್ಾಣದಲ್ಲಿ ಮೊದಲನೆಯವರಾಗಿದ್ದೇವೆ. ನಾವು ಗೋದಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಎರಡನೆಯ ಸ್ಥಾನದಲ್ಲಿದ್ದೇವೆ. ಡಾ. ಸುದರ್ಶನ್ರವರನ್ನು ನೋಡಿ, ಅವರು ಅನಿವಾಸಿ ಜನಾಂಗದ ಹಳ್ಳಿಯನ್ನು ಒಂದು ಸ್ವಾವಲಂಬಿ ಘಟಕವನ್ನಾಗಿ ಮಾಡಿದ್ದಾರೆ.
ಹೀಗೆ ನಮ್ಮ ಲಕ್ಷಗಟ್ಟಲೆ ಸಾಧನೆಗಳಿವೆ. ಆದರೆ ನಮ್ಮ ಮಾಧ್ಯಮದವರು ಕೇವಲ ಕೆಟ್ಟ ಸುದ್ದಿಗಳನ್ನ ನಮ್ಮ ವಿಫಲತೆಗಳನ್ನ ಮತ್ತು ದುರದೃಷ್ಟಕರ ಘಟನೆಗಳ ಬಗ್ಗೆ ಹೆಚ್ಚು ವರದಿ ಮಾಡುತ್ತಿರುತ್ತಾರೆ.
ಒಮ್ಮೆ ನಾನು ಟೆಲ್ ಆವಿವ್ನಲ್ಲಿ ಇಸ್ರೇಲಿ ವಾತರ್ಾ ಪತ್ರಿಕೆಯನ್ನು ಓದುತ್ತಿದ್ದೆ. ಹಿಂದಿನ ದಿನ ಆದೇಶದಲ್ಲಿ ಹಮಾಸ್ ಉಗ್ರಾಗಾಮಿಗಳು ಅನೇಕ ಬಾಂಬ್ ದಾಳಿ ಮಾಡಿ ಸಾವು ನೋವುಗಳು ಉಂಟಾಗಿದ್ದವು. ಆದರೆ ನಾನು ಓದಿನ ವೃತ್ತ ಪತ್ರಿಕೆಯ ಮೊದಲನೆಯ ಪುಟದಲ್ಲಿ ಒಬ್ಬ ಜಿವ್ ಮಹನೀಯನು ಐದು ವರ್ಷಗಳಲ್ಲಿ ತನ್ನ ಮರುಭೂಮಿ ಸ್ವದೇಶವನ್ನು ಒಂದು ಫಲಗಳ ತೋಟವನ್ನಾಗಿ ಧಾನ್ಯದ ಕಣಜವನ್ನಾಗಿ ಮಾಡಿದ ಸಮಾಚಾರ ಕೊಡಲಾಗಿತ್ತು. ಈ ಒಂದು ರೋಮಾಂಚಕಾರಿ ಚಿತ್ರವು ಎಲ್ಲರನ್ನೂ ಎಚ್ಚರಿಸಿತ್ತು. ಆ ಪತ್ರಿಕೆಯ ಒಳಗಿನ ಪುಟದಲ್ಲಿ ಬೇರೆ,ಬೇರೆ ವಾತರ್ೆಗಳ ಮಧ್ಯದಲ್ಲಿ ಹಿಂದಿನ ದಿನದಲ್ಲಿ ನಡೆದ ಬಾಂಬ್ ದಾಳಿ, ಸಾವು ನೋವುಗಳ ಬಗ್ಗೆ ಕೊಡಲಾಗಿತ್ತು.
ಭಾರತದಲ್ಲಿ ವಾತರ್ಾಪತ್ರಿಕೆ ಮುಂತಾದ ಮಾಧ್ಯಮಗಳಲ್ಲಿ ಕೇವಲ ಸಾವು, ನೋವುಗಳು, ಕೊಲೆ ಸುಲಿಗೆ, ಭಯೋತ್ಪಾದನೆಯ ಬಗ್ಗೆಯೇ ಹೆಚ್ಚು ಓದುತ್ತೇವೆ. ನಾವೇಕೆ ಅಷ್ಟು ನಕಾರಾತ್ಮಕ ದೃಷ್ಟಿಕೋನವುಳ್ಳವರಾಗಿದ್ದೇವೆ? ತಿಳಿಯುತ್ತಿಲ್ಲ.
ಇನ್ನೊಂದು ವಿಷಯ, ಪರದೇಶದ ವಸ್ತುಗಳ ಬಗ್ಗೆಯೇ ನಮಗೇಕೆ ಅಷ್ಟು ಯೋಚನೆ ಮತ್ತು ವ್ಯಾಮೋಹ? ಪರದೇಶದ ಶಟರ್ುಗಳು ಬೇಕು? ಪರದೇಶದ ತಂತ್ರಜ್ಞಾನ ಬೇಕು? ಸ್ವಾವಲಂಬನೆಯಿಂದಲೇ ಸ್ವಾಭಿಮಾನ ಬೆಳೆಯುತ್ತದೆ ಎಂಬ ಅರಿವು ನಮಗೇಕಿಲ್ಲ?
ನಾನು ಹೈದರಾಬಾದಿನಲ್ಲಿ ಭಾಷಣ ಮುಗಿಸಿ ಈಚೆ ಬರುತ್ತಿದ್ದಾಗ ಒಬ್ಬ ಹದಿನಾಲ್ಕು ವರ್ಷದ ಬಾಲಕಿ ನನ್ನ ಆಟೋಗ್ರಾಫ್ ಕೇಳಿ ಬಂದಳು. ನಾನು ಆ ಬಾಲಕಿಯನ್ನು ನಿನ್ನ ಜೀವನದ ಗುರಿ ಏನು? ಎಂದು ಕೇಳಿದೆ. ಆಗ ಆ ಬಾಲಕೆ ನಾನು ಅಭಿವೃದ್ದಿ ಹೊಂದಿದ ಭಾರತದಲ್ಲಿ ಇರ ಬಯಸುತ್ತೇನೆ. ಅಂತ ಹೇಳಿದಳು. ಆ ಬಾಲಕಿಗೋಸ್ಕರ ನಾವು ಮತ್ತು ನೀವು ಒಂದು ಅಭಿವೃದ್ದಿ ಹೊಂದಿದ ಭಾರತವನ್ನು ನಿಮರ್ಿಸಬೇಕಾಗಿದೆ. ಭಾರತವು ಪ್ರಗತಿರಹಿತ ದೇಶವಲ್ಲ ಎಂದು ನೀವು ಘಂಟಾಘೋಷವಾಗಿ ಹೇಳಬೇಕು.
ನಿಮಗೆ ಹತ್ತು ನಿಮಿಷ ಪುರುಸೊತ್ತು ಎದೆಯೇ? ಹಾಗಿದ್ದರೆ ಖಾರವಾದ ಕೆಲವು ಮಾತುಗಳನ್ನು ಹೇಳಲು ಅವಕಾಶ ಕೊಡಿ. ನಿಮ್ಮ ದೇಶಕ್ಕಾಗಿ ಹತ್ತು ನಿಮಿಷ ಕೊಡಿ.
ನಮ್ಮ ಸಕರ್ಾರದಲ್ಲಿ ದಕ್ಷತೆಯಿಲ್ಲ. ನಮ್ಮ ಕಾನೂನು ಬಹಳ ಹಳೆಯದು. ನಮ್ಮ ನಗರ ಪಾಲಿಕೆಗಳು ಕಸವನ್ನು ಸರಿಯಾಗಿ ತೆಗೆಯುವುದಿಲ್ಲ. ನಮ್ಮ ಪೋನುಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಮ್ಮ ಏರ್ಲೈನ್ ಪ್ರಪಂಚದಲ್ಲಿಯೇ ಬಃಳ ಕನಿಷ್ಠವಾದುದ್ದು, ಹಾಗೆ, ಹೀಗೆ ಎಂದು ಹೇಳುತ್ತೀರಿ.
ಆದರೆ ಅದಕ್ಕಾಗಿ ನೀವು ಏನು ಮಾಡುತ್ತಿದ್ದೀರಿ? ಸಿಂಗಾಪುರಕ್ಕೆ ಹೋಗುತ್ತಿರುವ ಒಬ್ಬ ಪ್ರಯಾಣಿಕ ನೊಡನೆ ನೀವು ಮಾತಾಡಿ. ಮಾತು ಮುಗಿಸುವ ಮುನ್ನ ಜಗತ್ತಿನಲ್ಲಿಯೇ ಒಂದು ಉತ್ತಮವಾದ ವಿಮಾನ ನಿಲ್ದಾಣವನ್ನು ನೀವು ಕಾಣುತ್ತೀರಿ. ನೀವು ಸಿಂಗಪುರದಲ್ಲಿ ಒಂದು ಸಿಗರೇಟ್ ತುಂಡನ್ನು ರಸ್ತೆಯಲ್ಲಿ ಬಿಸಾಡುವಂತಿಲ್ಲ. ಅವರ ಸುರಂಗ ಮಾರ್ಗಗಳನ್ನು ನೋಡಿ ನೀವು ಹೆಮ್ಮೆಪಡುತ್ತೀರಾ. ನೀವು ಸಾಯಂಕಾಲ 5 ಗಂಟೆಯಿಂದ 8 ಗಂಟೆಯವರೆಗೆ ಆರ್ಚಡರ್್ ರಸ್ತೆ ಮಾರ್ಗವಾಗಿ ಹೋಗಲು 5 ಸಿಂಗಾಪುರ ಡಾಲರ್ (ಅಂದಾಜು ರೂಪಾಯಿ 60) ಕೊಡುತ್ತೀರಿ. (ಅದು ಮಾಹಿಮ್ನ ಕ್ರಾಸ್ವೇ ಆಥವಾ ಪೆದ್ದರ್ ರೋಡ್ ಇದ್ದ ಹಾಗೆ ಇದೆ.) ನೀವು ಒಂದು ವೇಳೆ ರೆಸ್ಟೋರೆಂಟ್ಗಳಲ್ಲಿ ಇಲ್ಲವೇ ಷಾಪಿಂಗ್ ಮಾಲ್ ಗಳಲ್ಲಿ ಬಹಳ ಸಮಯ ಕಳೆದಿದ್ದರೆ. ನೀವು ಯಾರೇ ಆಗಿರಲಿ ನಿಮ್ಮ ಸ್ಥಾನಮಾನ ಏನೇ ಇರಲಿ ಪಾಕರ್ಿಂಗ್ ಸ್ಥಳಕ್ಕೆ ಬಂದು ನಿಮ್ಮ ಪಾಕರ್ಿಂಗ್ ಕಾರ್ಡನ್ನು ಪಂಚ್ ಮಾಡಬೇಕಾಗುತ್ತದೆ ಆದರೆ ಅದಕ್ಕೆ ಸಿಂಗಾಪುರದಲ್ಲಿ ನೀವು ಏನೂ ಮಾತಾಡುವುದಿಲ್ಲ, ಮಾತಾಡುತ್ತೀರಾ? ದುಬೈನಲ್ಲಿ ರಮ್ ಜಾನ್ ಸಮಯದಲ್ಲಿ ನೀವು ಸಾರ್ವಜನಿಕ ಸ್ಥಳಗಳಲ್ಲಿ ಏನನ್ನೂ ತಿನ್ನುವ ದೈರ್ಯ ಮಾಡುವುದಿಲ್ಲ. ನೀವು ಜಿದ್ದಾದಲ್ಲಿ ನಿಮ್ಮ ತಲೆಯ ಮೇಲೆ ಟೋಪಿ, ರುಮಾಲ ವಗೈರೆ ಇಲ್ಲದೆಯೇ ಹೊರಗೆ ಹೋಗುವ ಸಾಹಸ ಮಾಡುವುದಿಲ್ಲ. ಲಂಡನ್ನಲ್ಲಿ ನಿಮ್ಮ ಎಸ್.ಟಿ.ಡಿ. ಕರೆಗಳನ್ನು ಐ.ಎಸ್.ಟಿ.ಡಿ ಕರೆಗಳನ್ನು ಬೇರೆಯವರ ಲೆಕ್ಕಕ್ಕೆ ಬಿಲ್ಲು ಮಾಡಲು ಯಾವ ಟಿಲಿಪೋನ್ ಅಧಿಕಾರಿಗೂ ಲಂಚರೂಪದಲ್ಲಿ ಹತ್ತು ಪೌಂಡ್(ರೂ. 650) ಕೊಡುವ ಸಹಸ ಮಾಡುವುದಿಲ್ಲ. ವಾಷಿಂಗ್ಟನ್ ನಲ್ಲಿ ನೀವು 55 ಮೈಲು(88 ಕಿ.ಮೀ.) ವೇಗಕ್ಕಿಂತ ಹೆಚ್ಚಿಗೆ ಹೋಗುವ ಸಾಹಸ ಮಾಡುವುದಿಲ್ಲ ಮತ್ತೆ ಟ್ರಾಫಿಕ್ ಪೋಲೀಸ್ರಿಗೆ ನಾನು ಯಾರು ಗೊತ್ತೇ? ನಾನು ಇಂಥವರ ಮಗ, 2 ಕಾಸು ತಗೋ ಮತ್ತೆಹೋಗು ಎಂದು ಹೇಳುವ ಸಾಹಸವನ್ನು ಮಾಡುವುದಿಲ್ಲ.
ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ನ ಬೀಚುಗಳಲ್ಲಿ ಎಳೆನೀರಿನ ಚಿಪ್ಪುಗಳನ್ನು ನಿಯಮಿತ ಸ್ಥಳವಲ್ಲದೇ ಬೇರೆ ಎಲ್ಲಿಯು ಬಿಸಾಕುವಂತಿಲ್ಲ. ಟೋಕಿಯೋದಲ್ಲಿ ರಸ್ತೆಯ ಮೇಲೆ ನೀವು ಪಾನ್ ಹಾಕಿಕೊಂಡು ಉಗುಳುವಂತಿಲ್ಲ. ಬೋಸ್ಟನ್ನಲ್ಲಿ ನಕಲಿ ಮಾಕ್ರ್ಸಕಾಡರ್್ ಅಥವಾ ಸುಳ್ಳು ಸಟರ್ಿಫಿಕೇಟ್ಗಳನ್ನು ಕೊಳ್ಳುವುದಿಲ್ಲ. ಪರದೇಶದಲ್ಲಿ ನಿಯಮಗಳನ್ನು ಪಾಲಿಸುವಂತಹ ನೀವು ನಿಮ್ಮ ದೇಶದಲ್ಲಿ ಮಾತ್ರ ನಿಯಮಗಳನ್ನು ಪಾಲಿಸುವುದಿಲ್ಲ. ನೀವು ಭಾರತ ಭೂಮಿಯ ಮೇಲೆ ಬಂದಾಕ್ಷಣವೇ ರಸ್ತೆಗಳ ಮೇಲೆ ಕಾಗದದ ತುಂಡನ್ನು ಎಸೆಯುತ್ತೀರಿ. ಪರದೇಶಗಳಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಇರುವ ನೀವು ಅದೇ ರೀತಿ ನಿಮ್ಮ ದೇಶದಲ್ಲಿ ಏಕೆ ನಡೆಯುವುದಿಲ್ಲ?
ಒಂದು ಸಲ ಒಂದು ಸಂದರ್ಶನದಲ್ಲಿ ಮುಂಬೈಯ ಪ್ರಖ್ಯಾತ ಮಾಜಿ ಮುನಿಸಿಪಲ್ ಕಮಿಷನರ್ರಾದ ತಿನೈಕರ್ ಒಂದು ವಿಚಾರವನ್ನು ವ್ಯಕ್ತಪಡಿಸಿದರು. ಅವರು ಹೇಳಿದರು, ಸಾಹುಕಾರರ ನಾಯಿಗಳು ಬೀದಿಯಲ್ಲಿ ಓಡಾಡಿ ಎಲ್ಲಾ ಕಡೆ ಮಲವಿಸರ್ಜನೆ ಮಾಡಿ ಗಲೀಜು ಮಾಡುತ್ತವೆ. ಮತ್ತೆ ಅದೇ ಸಾಹುಕಾರ ಜನರು ಕಾಲ್ದಾರಿಗಳಲ್ಲಿ ಬಹಳ ಹೊಲಸು ಇದೆ ಎಂದು ಮುನಿಸಿಪಲ್ ಅಧಿಕಾರಿಗಳ ಅದಕ್ಷತೆ ಬಗ್ಗೆ ಟೀಕಿಸುತ್ತಾರೆ. ಅವರು ಅಧಿಕಾರಿಗಳಿಂದ ಏನನ್ನು ಅಪೇಕ್ಷಿಸುತ್ತಾರೆ? ಪೊರಕೆಯನ್ನ ಹಿಡಿದುಕೊಂಡು ಪ್ರತಿಸಲ ಅವರ ನಾಯಿಗಳು ಮಲವಿಸರ್ಜನೆ ಮಾಡಿ ಗಲೀಜು ಮಾಡಿದಗ ಗುಡಿಸಬೇಕು ಎಂದು ಅಪೇಕ್ಷಿಸುತ್ತಾರೆಯೇ? ಅಮೆರಿಕಾದಲ್ಲಿ ಮತ್ತು ಜಪಾನ್ ನಲ್ಲಿ ವಾಯುವಿಹಾರಕ್ಕೆ ಹೋದಾಗ ದಾರಿಗಳಲ್ಲಿ ಮಲವಿಸರ್ಜನೆ ಮಾಡಿದಾಗ ಅವರೇ ಅದನ್ನು ಸ್ವಚ್ಚಗೊಳಿಸುತ್ತಾರೆ. ಆದರೆ ಭಾರತದಲ್ಲಿ ನಾಗರೀಕರು ಆ ರೀತಿ ಮಾಡುತ್ತಾರೆಯೇ? ಹೌದು ನಿಜವಾಗಿಯೂ ಆ ಮುನಿಸಿಪಲ್ ಕಮಿಷನರ್ ಹೇಳಿದುದರಲ್ಲಿ ಅರ್ಥವಿದೆ.
ನಾವು ಸರಕಾರವನ್ನು ಚುನಾಯಿಸಲು ಮತಗಟ್ಟೆಗಳಿಗೆ ಹೋಗುತ್ತೇವೆ. ಆದರೆ ಆಮೇಲೆ ನಮ್ಮ ಜವಾಬ್ದಾರಿಗಳನ್ನೆಲ್ಲಾ ಕಳಚಿ ಹಾಕಿಬಿಡುತ್ತೇವೆ. ನಾವು ಆರಾಮವಾಗಿ ಕುಳಿತುಕೊಂಡು ಸಕರ್ಾರವೇ ನಮಗೆ ಎಲ್ಲವನ್ನೂ ಮಾಡಬೇಕೆಂದು ಬಯಸುತ್ತೇವೆ. ಆದರೆ ಅದಕ್ಕೆ ನಾವು ಕೊಡುವ ಸಹಕಾರ ಮಾತ್ರ ಸೊನ್ನೆ. ನಾವು ಸಕರ್ಾರ ಕಸವನ್ನು ಗಲೀಜನ್ನು ಸ್ವಚ್ಚ ಮಾಡಬೇಕೆಂದು ಬಯಸುತ್ತೇವೆ. ಆದರೆ ನಾವೇ ಎಲ್ಲೆಡೆ ಕಸವನ್ನು ಹರಡುತ್ತಾ ಹೋಗುತ್ತೇವೆ. ಒಂದು ತುಂಡು ಕಾಗದವನ್ನೂ ನಾವು ತೆಗೆದು ಕಸದ ತೊಟ್ಟಿಗೆ ಹಾಕುವುದಿಲ್ಲ. ರೈಲ್ವೆ ಇಲಾಖೆಯವರು ಸ್ವಚ್ಚವಾದ ಶೌಚಾಲಯಗಳನ್ನು ಬಾತ್ ರೂಮ್ ಗಳನ್ನು ಪ್ರಯಾಣಿಕರಿಗೆ ಒದಗಿಸಬೇಕೆಂದು ನಾವು ಬಯಸುತ್ತೇವೆ. ಆದರೆ ನಾವು ಮಾತ್ರ ಬಾತ್ ರೂಮ್ ಗಳನ್ನು ಶೌಚಾಲಯಗಳನ್ನು ಸರಿಯಾಗಿ ಉಪಯೋಗಿಸುವುದನ್ನು ಕಲಿತುಕೊಳ್ಳುವುದಿಲ್ಲ.
ಇಂಡಿಯನ್ ಏರ್ಲೈನ್ಸ್ ಮತ್ತು ಏರ್ ಇಂಡಿಯಾದವರು ಒಳ್ಳೆ ಆಹಾರ ಮತ್ತು ಸ್ವಚ್ಚವಾದ ಶೌಚಾಲಯಗಳನ್ನು ಒದಗಿಸಬೇಕು ಎಂದು ನಾವು ಬಯಸುತ್ತೇವೆ. ಆದರೆ ಸಂದರ್ಭ ಸಿಕ್ಕಾಗ ನಾವೇ ಅವುಗಳ ಸಾಮಾನುಗಳನ್ನು ಕಳವು ಮಾಡುವುದನ್ನು ಬಿಡುವುದಿಲ್ಲ. ಈ ಮಾತು ಸಾರ್ವಜನಿಕರಿಗೆ ಸೇವೆ ಮಾಡಬೇಕಾಗಿರುವ ನಿಮಿತ್ತ ಸಿಬ್ಬಂದಿ ವರ್ಗಕ್ಕೂ ಅನ್ವಯಿಸುತ್ತದೆ. ಸಮಾಜದಲ್ಲಿ ಸ್ತ್ರೀಯರಿಗೆ ಸಂಬಂದಿಸಿದ ಜ್ವಲಂತ ಸಮಸ್ಯೆಗಳಾದ ವರದಕ್ಷಿಣೆ. ಹೆಣ್ಣು ಭ್ರೂಣಹತ್ಯೆ ವಿಚಾರ ಬಂದಾಗ ನಾವು ಮನೆಯಲ್ಲಿ ಡ್ರಾಯಿಂಗ್ ರೂಮ್ ನಲ್ಲಿ ಕುಳಿತು ಜೋರಾಗಿ ಭಾಷಣ ಬಿಗಿಯುತ್ತೇವೆ ಆದರೆ ನಾವೇ ಮನೆಯಲ್ಲಿ ಅದರ ವಿರುದ್ದವಾಗಿ ನಡೆದುಕೊಳ್ಳುತ್ತೇವೆ. ನಾವೊಬ್ಬರು ವರದಕ್ಷಿಣೆ ತೆಗಿದುಕೊಳ್ಳದಿದ್ದರೆ ಏನಾಗುತ್ತದೆ? ಇಡೀ ವ್ಯವಸ್ಥೆಯೇ ಬದಲಾಗಬೇಕು ಎಂದು ನೆಪ ಹೇಳುತ್ತೇವೆ. ಆದರೆ ವ್ಯವಸ್ಥೆಯನ್ನು ಬದಲು ಮಾಡಬೇಕಾದವರು ಯಾರು?
ವ್ಯವಸ್ಥೆ ಯಾರನ್ನು ಒಳಗೊಂಡಿದೆ? ನಮ್ಮ ದೃಷ್ಟಿಯಲ್ಲಿ ವ್ಯವಸ್ಥೆಯೆಂದರೆ ನಮ್ಮ ನೆರೆಹೊರೆ ಇತರ ಗೃಹಸ್ಥರು, ನಗರಗಳು, ಸಮಾಜ ಮತ್ತು ಸಕರ್ಾರ ಆಆದರೆ ಆ ವ್ಯವಸ್ಥೆಯನ್ನು ಸುಧಾರಿಸಲು ನಮ್ಮ ನಿಮ್ಮ ಪಾತ್ರದ ವಿಷಯ ಬಂದಾಗ ನಾನಲ್ಲ, ನೀನಲ್ಲ, ಎಂದು ಹೇಳಿಬಿಡುತ್ತೇವೆ. ಸಮಾಜದ ವ್ಯವಸ್ಥೆಯನ್ನು ಸುಧಾರಿಸಲು ನಮ್ಮಿಂದ ಒಂದು ಸಕಾರಾತ್ಮಕ ಕೊಡುಗೆಯ ವಿಚರ ಬಂದಾಗ ನವು ದೂರ ಸರಿದು ಒಬ್ಬ ಮಿಸ್ಟರ್ ಕ್ಷೀನ್ ವ್ಯಕ್ತಿ ಒಂದು ಅದ್ಬುತ ಪವಾಡ ಮಾಡಿ ಸುಧಾರಿಸಬೇಕೆಂದು ಬಯಸುತ್ತವೆ. ಇಲ್ಲವೇ ಸಾಕಪ್ಪ ಎಂದು ಬೇರೆ ದೇಶಗಳಿಗೆ ಓಡಿ ಹೋಗುತ್ತೇವೆ.
ಸೋಮಾರಿ ಅಂಜುಬುರುಕರಂತೆ ಭಯಭೀತರಾಗಿ ಅಮೇರಿಕಾಕ್ಕೆ ಓಡಿಹೋಗಿ ಅವರ ವ್ಯವಸ್ಥೆಯನ್ನು ಗುಣಗಾನ ಮಾಡುತ್ತಾ ಅವರ ವೈಭವದಲ್ಲಿ ಮೆರೆಯಲು ಹೋಗುತ್ತೇವೆ. ನ್ಯೂಯಾಕರ್್ನಲ್ಲಿ ಅಭದ್ರತೆ ಕಂಡಾಗ ಲಂಡನ್ಗೆ ಓಡಿಹೋಗುತ್ತೇವೆ. ಇಂಗ್ಲೆಂಡಿನಲ್ಲಿ ನಿರುದ್ಯೋಗ ಉಂಟಾದಾಗ ಗಲ್ಫ್ ದೇಶಗಳಿಗೆ ಪಲಾಯನ ಮಾಡುತ್ತೇವೆ. ಗಲ್ಫ್ ದೇಶಗಳಲ್ಲಿ ಯುದ್ದ ಶುರುವಾದಾಗ ಭಾರತ ಸಕರ್ಾರವು ಅಲ್ಲಿಯ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆಕದುಕೊಂಡು ಬರುವ ಪ್ರಯತ್ನ ಮಾಡಬೇಕೆಂದು ಅಪೇಕ್ಷಿಸುತ್ತೇವೆ. ಪ್ರತಿ ಒಬ್ಬರೂ ದೇಶವನ್ನು ನಿಂದನೆ ಮಾಡುವುದನ್ನು ದಬ್ಬಾಳಿಕೆ ಮಾಡುವುದನ್ನು ಕಲಿತುಕೊಂಡಿದ್ದೇವೆ. ಆದರೆ ಯಾರೊಬ್ಬರೂ ವ್ಯವಸ್ಥೆಯನ್ನು ಸುಧಾರಿಸಲು ಪೂರಕವಗುವ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ. ನಾವು ನಮ್ಮ ಆತ್ಮಸಾಕ್ಷಿಯನ್ನು ಹಣಕ್ಕಾಗಿ ಅಡ ಇಟ್ಟವರಾಗಿದ್ದೇವೆ.
ಪ್ರಿಯ ಭಾರತೀಯರೇ, ಈ ಪ್ರಬಂಧವು ತೀವ್ರವಾಗಿ ವಿಚಾರ ಪ್ರಚೋದಕರವಾಗಿದೆ. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಆತ್ಮಸಾಕ್ಷಿಯು ನಮ್ಮನ್ನು ಚುಚ್ಚುತ್ತದೆ ಕೂಡಾ ಹೌದು, ನಾನು ಅಂದಿನ ಅಮೆರಿಕಾದ ಅದ್ಯಕ್ಷ ಜೆ.ಎಫ್.ಕೆನಡಿ ಅಮೆರಿಕಾ ದೇಶವಾಸಿಗಳಿಗೆ ಹೇಳಿದ ಮಾತನ್ನು ನಮಗೆ ಭಾರತೀಯರಿಗೆ ಅನ್ವಯಿಸಿಕೊಂಡು ಹೇಳುತ್ತಿದ್ದೇನೆ.
ಎಸ್ಸೆಮ್ಮೆಸ್ನಲ್ಲಿ ಬರೇ ನಗೆ ಚಟಾಕಿಗಳು ಅಥವಾ ಇ-ಮೇಲ್ನಲ್ಲಿ ನಿರೂಪಯೋಗಿ ಪತ್ರಗಳನ್ನು ಕಳಿಸುವ ಬದಲು ಪರಿವರ್ತನೆಯನ್ನು ತರಲು ಪ್ರತಿಯೊಬ್ಬ ಭಾರತೀಯನಿಗೂ ಇದನ್ನು ತಲುಪಿಸಿ.
(ಅನುವಾದ: ಬಿ. ನರಸಿಂಹ ಶೆಟ್ಟಿ)
ಸಂಗ್ರಹ: ವಿದ್ಯಾಧರ. ಸಿ.ಎ.
ಕೃಪೆ: 'ಸುಧಾ' ವಾರಪತ್ರಿಕೆ. ದಿ. 12 ಜನವರಿ, 2006
Comments
ಉ: ಏಕೆ ಈ ನಕಾರಾತ್ಮಕ ದೃಷ್ಟಿಕೋನ ?
In reply to ಉ: ಏಕೆ ಈ ನಕಾರಾತ್ಮಕ ದೃಷ್ಟಿಕೋನ ? by abdul
ಉ: ಏಕೆ ಈ ನಕಾರಾತ್ಮಕ ದೃಷ್ಟಿಕೋನ ?