ಏಕೆ ಸೋತಿತು ಈ ಮನ

ಏಕೆ ಸೋತಿತು ಈ ಮನ

ಏಕೆ ಸೋತಿತು ಈ ಮನ?
-------------------------------
ಏಕೆ ಸೋತಿತು ಈ ಮನ?
ನಿನ್ನ ಕಂಡ ಮೊದಲ ಕ್ಷಣ|
ಜನ್ಮ ಜನ್ಮಾಂತರದ ಬಂಧವೊ
ಈ ಜನ್ಮದ ಹೊಸಾ ಮೈತ್ರಿಯೊ ||

ಯಾರನು ಒಪ್ಪದಿದ್ದ ಈ ಮನ
ನಿನ್ನ ನೋಡಲೇಕೆ
ಅನ್ನಿಸುತಿದೆ ಒಂಟಿತನ|
ಎಲ್ಲರಲ್ಲೂ ಏನೂ ಕೊರತೆ
ಕಾಣುತ್ತಿದ್ದ ಈ ಮನ
ಏಕೆ ಬಯಸುತಿದೆ ನಿನ್ನ ಗೆಳೆತನ||

ಏಷ್ಟೋ ಹದಿಹರೆಯದ
ಹೆಣ್ಣುಗಳ ಧ್ವನಿಯ ಕೇಳಿಯು
ಕೇಳದಂತಿರುತ್ತಿದ್ದ ಈ ಮನ
ಆತೊರೆಯುತಿದೇಕೆ
ತಿಳಿಯಲು ನಿನ್ನ ಚಲನವಲನ||

ಲಕ್ಷ ನೋಟಗಳು ನಿನ್ನ ಚೆಲುವ
ಬಣ್ಣಿಸಿರಬಹುದು|
ಸಾವಿರಾರು ಹೃಉದಯಗಳು
ನಿನ್ನ ಪ್ರೀತಿಸೆ ಆಸಿಸಿರಬಹುದು|
ಆದರೆ ನಾನು ಮಾತ್ರ ನಿನ್ನ
ಮನಸಾರೆ ಪ್ರೀತಿಸಿ
ಆರಾಧಿಸುವೆ ಹೃಉದಯದಲಿ||

ಸಾಕು ನಿನ್ನ ಈ ಒಂಟಿಜೀವನ ನಡಿಗೆ
ನಾ ಬರುವೆ ನಿನ್ನ ಜೋತೆಯಾಗೆ|
ಆರಿಸಿಕೊ ಎನ್ನ, ನಾ ಬರುವೆ
ಜೀವನಪೂರ್ತಿ ಬಾಳಸಂಗಾತಿಯಾಗಿ ನಿನ್ನ||

*ಜಾನಕಿತನಯಾನಂದ.