ಏಕೆ ಹೀಗೇಕೆ..

ಏಕೆ ಹೀಗೇಕೆ..

ಈ ಪ್ರಶ್ನೆ ಅನೇಕರಿಗೆ ಮೂಡಿದೆ..ಸುಮಾರು ಮೂರುವರುಷದ ಹಿಂದೆ ಅನುಕಂಪ ಆಧಾರಿತ ಮತಗಳ ಅಲೆಯಲಿ
ತೇಲಿ ದಡ ಸೇರಿ ಹಾಗೂ ಹೀಗೂ ಮಾಡಿ(ಇತಿಹಾಸ ಮರುಕಳಿಸುತ್ತಲೇ ಇದೆ..) ಅಧಿಕಾರದ ಗದ್ದುಗೆ ಏರಿದಾಗ ಜನ
ಆಸೆಯಿಂದ ಕಾದಿದ್ರು.ಉದ್ಧಾರ ಕುರ್ಚಿ ಏರಿದವರೇನೋ ಆದ್ರು ಆದ್ರೆ ಕುರ್ಚಿ ಮೇಲೆ ಕೂರಿಸಿದವರು ಕಂಗಾಲಾಗಿದ್ದಾರೆ.
ಇಲ್ಲಿ ಆಕ್ರೋಶವಿದೆ..ಹಾಗೆಯೇ ಆ ಅನುಕಂಪದ ಅಲೆ ನಿಧಾನವಾಗಿ ಕರಗುತ್ತಿದೆ. ನೆವಗಳು ಬೇಕಾದಷ್ಟಿರಬಹುದು...
೬೦ ವರ್ಷ ಆಳಿದ ಕಾಂಗ್ರೆಸ್ಸು, ಅದರ ರೀತಿ ನೀತಿಗಳು..ಮೊದಲಬಾರಿ ಅಧಿಕಾರ ದಕ್ಕಿದ್ದು ಅನುಭವ ಇಲ್ಲ ಇತ್ಯಾದಿ.
ಒಂದರೆಗಳಿಗೆ ಮನ್ನಿಸುವ. ಆದರೆ ಈ ಮೂರುವರ್ಷದಲ್ಲಿ ಬಿಜೆಪಿ ಮಾಡಿದ್ದೇನು..ಒಂದಾದರೂ ಸಾಧನೆಯನ್ನು ಹೆಮ್ಮೆಯಿಂದ ಬೊಟ್ಟು ಮಾಡಿ ತೋರುವಂತಿಲ್ಲ. ಮೂರು ವರ್ಷ ಸಾಕಾಗಿಲ್ಲವೇ ..ಅನ್ನ ಆಗಿದ್ದು ಒಂದಗಳು ಹಿಚುಕಿದರೆ
ಗೊತ್ತಾಗುತ್ತದೆ. ಈಗಾಗಲೇ ಅದೇನು ಬೇಯುತ್ತಿದೆ ಎಂದು ಎಲ್ಲ ತಿಳಿದಾಗಿದೆ. ಏನೂ ಇಲ್ಲದ ಶೂನ್ಯ ಒಂದೇ ಈ
ಮೂರುವರ್ಷದ ಸಾಧನೆ.

ಯಾಕೆ ಹೀಗೆ ಈ ಪ್ರಶ್ನೆಗೆ ಉತ್ತರ ಕೊಡುವನಾಯಕರಿಲ್ಲ. ಮುಖ್ಯ ಅಂದರೆ ತನಗೆ ದಕ್ಕಿದ ಅವಕಾಶ ಲಾಭ್ದಾಯಕ
ಮಾಡಿಕೊಳ್ಳಲು ಬಿಜೆಪಿ ಸೋತಿದೆ. ಇದು ಆ ಪಕ್ಷದ ಹಿರಿಯನಾಯಕರಿಗು ಗೊತ್ತು. ಇದೇ ರೀತಿ ಮುಂದುವರೆದರೆ
ಜನ ಈ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಮುಳುಗಿಸುತ್ತಾರೆ. ಇಲ್ಲಿ ಕೆಲಸ ಮಾಡದೇ ಮಾತಾಡುವ
ನಾಯಕರಿದ್ದಾರೆ. ಜಾತಿ ಪ್ರಾಂತ ಹೀಗೆ ಮಂತ್ರಿಗಳು ಬಟವಾಡೆಯಾಗಿದ್ದಾರೆ. ಜನಸೇವೆಗೆ ಮಂತ್ರಿಗಿರಿ ಅವಶ್ಯ
ಅನ್ನೋರೀತಿ ಇದೆ. ಈ ಮಂತ್ರಿಗಿರಿ ಗಳಿಸಲು ಉಳಿಸಲು ಅದೆಷ್ಟು ಕಸರತ್ತುಗಳು ಕರಾಮತ್ತುಗಳು.ಹಿಂದೆ ಎಂದೂ
ಕಾಣದ ಅಸಹ್ಯ ರಾಜಕೀಯ ದೊಂಬರಾಟಗಳು. ಒಂದು ವಿಚಿತ್ರ ಸನ್ನಿವೇಶ ವಿದೆ,ಮಂತ್ರಿಮಂಡಲ ವಿಸ್ತರಣೆ ಅಂದ್ರೆ
ಸಾಕು ಬಿಜೆಪಿಯಲ್ಲಿ ಭೂಕಂಪನ ಆಗುತ್ತದೆ.ಇನ್ಮುಂದೆ ಅಧಿಕಾರ ಸಿಕ್ಕುವುದೇ ಇಲ್ಲ ಎಂದು ಇವರು ಭಾವಿಸಿದಂತಿದೆ
ಅದಕೆ ಇರಬೇಕು ಮಂತ್ರಿಗಿರಿ ಗಳಿಸಲು ಯಾವ ಮಟ್ಟಕ್ಕೂ ಇಳಿಯಲು ಇವರು ಸಜ್ಜಾಗಿದ್ದಾರೆ.ಇದೆಲ್ಲ ನೋಡಿಕೊಂಡು
ಮುಖ್ಯಮಂತ್ರಿಗಳು ಆರಾಮಾಗಿದ್ದಾರೆ.ಅವರೇ ಪುತ್ರ ವ್ಯಾಮೋಹ ರೋಗಕ್ಕೆ ಬಲಿಯಾಗಿ ಸಣ್ಣಗಾಗಿದ್ದಾರೆ ಇನ್ನು
ಸರಕಾರಕ್ಕೆ ಮದ್ದು ಅರೆಯುವ ವ್ಯವಧಾನ ಎಲ್ಲಿ.

ಹಾಗಾದರೆ ಕಾಲ ಮಿಂಚಿಹೋಯಿತೆ ಇದು ಕೇವಲ ಐದು ವರ್ಷದ ಸರಕಾರವೇ... ಬಿಜೆಪಿಯ ದಕ್ಷಿಣಭಾರತದ
ಹೆಬ್ಬಾಗಿಲು ಮುಚ್ಚಿಹೋಯಿತೆ ಹೌದು ಅಂತನೇ ಹೇಳಬೇಕು. ಬದಲೀ ನಾಯಕತ್ವದ ಬಗ್ಗೆ ಆ ಪಾರ್ಟಿಯ
ಹಿರಿಯರು ಗಮನ ಹರಿಸುವುದು ಒಳಿತು. ಅವರೆಲ್ಲ ತಿಂದು ತೇಗಿದ್ದಾರೆ ನಾ ಯಾಕೆ ಮಾಡಬಾರದು ಅನ್ನುವ
ಮುಖ್ಯಮಂತ್ರಿ ಮುಂದಿನ ಚುನಾವಣೆಗೆ ಖಂಡಿತ ವೋಟು ತರಲಾರರು,ಈ ಸತ್ಯ ಆ ಪಾರ್ಟಿಯ ಚಿಂತಕರು
ಮನಗಾಣಲೇಬೇಕು.

Comments