ಏಕ ವ್ಯವಸ್ಥೆ
ಕವನ
ಸಂವಿಧಾನ ಏಕ ವ್ಯವಸ್ಥೆ ಯ ತತ್ವ
ಭಾರತದ ಆಡಳಿತ ಸೂತ್ರದ ಮಹತ್ವ
ನಮ್ಮ ಸಾಂಸ್ಕೃತಿಕ ಸಾಮಾಜಿಕ ವೈಭವ
ಸಮಾಜದ ರೀತಿ-ನೀತಿಗಳ ಅನುಸಂಧಾನ
ಪ್ರಜೆಗಳ ಸಾಮೂಹಿಕ ಹಿತರಕ್ಷಣಾ ಬೇಲಿ
ನೈತಿಕತೆ ಪ್ರಾಮಣಿಕತೆಯ ಕನ್ನಡಿ ತಿಳಿ
ಸ್ವಾತಂತ್ರ್ಯ ಸಮಾನತೆಯ ಆಡೊಂಬಲದ ಪುಟಗಳು
ಸತ್ಯ ಧರ್ಮ ನ್ಯಾಯದ ಪ್ರತಿಪಾದನೆಗಳು
ಸಂವಿಧಾನ ಸಹಕಾರದ ಗಟ್ಟಿ ಬೇರು
ಕಳಚಿದರೆ ಅಲ್ಲೋಲ ಕಲ್ಲೋಲ ಪ್ರಳಯ
ಮೂಢನಂಬಿಕೆ ಆಶ್ವಾಸನೆಗಳ ಕಳಚಿಹಾಕಿತು
ಕಾನೂನಿಗೆ ನವಭಾಷ್ಯ ಬರೆಯಿತು
ಪ್ರಜಾಪ್ರಭುತ್ವದ ನೆಲೆಗಟ್ಟಿನಡಿ ತಲೆಯೆತ್ತಿದೆ
ಅಸಮಾನತೆಯ ಭೂತ ದೂರ ಓಡಿದೆ
ಲಿಖಿತ ಸಂವಿಧಾನ ನಮ್ಮ ಹೆಗ್ಗಳಿಕೆಯಾಗಿದೆ
ರೂಪಿಸಿದ ಮಹನೀಯರ ನೆನೆಯಬೇಕಾಗಿದೆ
ಸಾಧಕರ ಸಾಧನೆಗೆ ತಲೆಬಾಗೋಣ
ದೇಶದ ಪ್ರಗತಿಗೆ ಸಹಕರಿಸೋಣ
ಮಕ್ಕಳ ಮನದಲಿ ಆಶಯವ ಬಿತ್ತೋಣ
ತಾಯಿ ಭಾರತಿಗೆ ಗೌರವದಿ ನಮಿಸೋಣ
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ; ಇಂಟರ್ನೆಟ್ ತಾಣ
ಚಿತ್ರ್