ಏಡ್ಸ್ ಬಗ್ಗೆ ಅರಿವು

ಏಡ್ಸ್ ಬಗ್ಗೆ ಅರಿವು

ಬರಹ

ಏಡ್ಸ್....ಮಹಾಮಾರಿ.... ಮಾನವನನ್ನು ಕಾಡುವ ಪೆಡಂಭೂತ....

ಮಿತ್ರರೇ,

ಇಂದು ವಿಶ್ವ ಏಡ್ಸ್ ದಿನ. ಏಡ್ಸ್ ಎಂಭ ಮಹಾಮಾರಿಯನ್ನು ನಮ್ಮ ದೇಶದಿಂದ ಅಲ್ಲ ನಮ್ಮ ಪ್ರಪಂಚದಿಂದಲೇ ಹೊರದಬ್ಬಲು ನಾವೆಲ್ಲ್ರರೂ ಇಂದು ಸಂಕಲ್ಪಿಸಬೇಕಾಗಿದೆ.

ನಮ್ಮ ದೇಶದಲ್ಲಿ ಇಂದು ಸರಿಸುಮಾರು ೨.೫೦ ಕೋಟಿಗೂ ಅಧಿಕ ಮಂದಿ ಈ ರೋಗ ಪೀಡಿತರಿದ್ದಾರೆ. ಪ್ರಥಮ ಬಾರಿಗೆ ೧೯೮೭ರಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡ ಈ ಮಹಾಮಾರಿ ಇಂದು ದೇಶದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಮುಖ್ಯವಾಗಿ ನಮ್ಮ ಜನಗಳಿಗೆ ಈ ರೋಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದೇ ಈ ಮಾರಿ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಬಹುದು.

ನಮ್ಮ ಜನರು ಈ ರೋಗ ಕೇವಲ ಲ್ವೆಂಗಿಕ ಸಂಪರ್ಕದಿಂದ ಮಾತ್ರ ಬರುವ ರೋಗ ಎಂಬ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಇದು ತಪ್ಪು.

ಈ ರೋಗದ ಬಗ್ಗೆ ಜನರಲ್ಲಿ ಇಂದಿನ ಯುವಕರು, ವಿದ್ಯಾರ್ಥಿಗಳು ಅರಿವು ಮೂಡಿಸುವುದು ಅಗತ್ಯವಾಗಿದೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet