ಏನದು ಎಕ್ಸ್ ಪೆಕ್ಟೇಷನ್ನು?
'ಪರ್ವಾಗಿಲ್ಲ, ಆದ್ರೆ ಎಕ್ಸ್ ಪೆಕ್ಟೇಷನ್ನ ಮೀಟ್ ಮಾಡ್ಲಿಲ್ಲ' ಸಿನಿಮಾ ನೋಡಿ ಬಂದ ನನ್ನ ಗೆಳೆಯ ಹೇಳಿದ್ದು.
ಇದನ್ನು ತುಂಬಾ ಸಲ ಕೇಳಿದ್ದೀನಿ.ಆದರೆ ಕೊನೆಗು ಅರ್ಥವಾಗದ್ದು ಇವರು ಚಿತ್ರ ನೋಡಲು ಹೋಗಿದ್ದಾ?
ಅಥವಾ ತಮ್ಮ ನಿರೀಕ್ಷೆಯನ್ನು ಚಿತ್ರ ಮುಟ್ಟಿದೆಯಾ ಎಂದು ಪರೀಕ್ಷೆ ಮಾಡಲಾ? ಎಂಬುದು.
ಹೋಗಿ ಚಿತ್ರ ನೋಡಿ ಅಲ್ಲೇನಿದೆ ಸವಿಯೋದು ಬಿಟ್ಟು ಎಷ್ಟು ಫೈಟ್ಸ್ ಇದೆ? ಸೆಂಟಿಮೆಂಟ್ ಎಷ್ಟಿದೆ? ಹಾಸ್ಯ
ಎಷ್ಟಿದೆ? ಕ್ಲೈಮಾಕ್ಸ್ ಹೇಗಿದೆ? ಇದನ್ನೇ ವಿಚಾರಿಸುತ್ತಾ ಕೂಡುತ್ತಾರಾ ಇವರುಗಳು ಅಂತಾ ಅನಿಸಿದ್ದುಂಟು.
ಚಿತ್ರ ಸವಿಯೋದಿರಲಿ ಇವರ ಲೆಕ್ಕಾಚಾರದಲ್ಲೇ ಸಮಯ ಕಳೆದು ಹೋಗಿರುತ್ತೆ.
ಅದು ಯಾವ ಚಿತ್ರವೇ ಇರಲಿ ಹೋಗುವ ಮುಂಚೆ ಅದರ ಬಗ್ಗೆ ವಿಚಾರಿಸಿ ಚೆನ್ನಾಗಿದೆ ಅಂತ ತಿಳಿದ ಮೇಲೆಯೇ
ನಾನು ನೋಡುವುದು.ಆಗಾಗ ಬೇಸರವಾದರೆ ಹಾಗೆಯೇ ಭೇಟಿ ನೀಡಿರುತ್ತೇನೆ.ಇಲ್ಲದಿದ್ದರೆ ಸಮಯ,ಹಣ,
ತಲೆ ಎಲ್ಲವೂ ಹಾಳು. ಹೇಗೂ ಆ ಚಿತ್ರ ನೋಡಲಿದ್ದೀರಿ ಎಂದಾಗ ಈ ಎಕ್ಸ್ ಪೆಕ್ಟೇಷನ್ ಹಾಳು ಮೂಳು ಎಲ್ಲಾ
ಯಾಕೆ? ಹೋಗಿ ಚೆನ್ನಾಗಿದೆ ಅನ್ನಿಸಿದರೆ ಖುಷಿ ಪಡೋದು ತಾನೆ?
ಯಾವ ಹೀರೋ ಇರಲಿ,ಡೈರೆಕ್ಟರ್ ಇರಲಿ ಒಂದು ಹಿಟ್ ಚಿತ್ರ ಕೊಟ್ಟರೆ ಪ್ರತಿ ಬಾರಿ ಅದನ್ನೇ ಬಯಸುವುದು
ತಪ್ಪಲ್ಲವೇ?ನಿಮ್ಮಲ್ಲಿ ಕೇಳೋದಿಷ್ಟೆ..ಯಾವ ಚಿತ್ರವೇ ಇರಲಿ ನಿಮ್ಮ ಮನಸಿನ ಸ್ಲೇಟನು ಖಾಲಿ ಮಾಡಿ ನೋಡಿ.
ಚಿತ್ರವನ್ನು ಚೆನ್ನಾಗಿ ಆಸ್ವಾದಿಸಿ.ಒಳ್ಳೆಯದೇನೇನಿದೆಯೋ ಎಲ್ಲವನ್ನೂ ತೆಗೆದುಕೊಳ್ಳಿ, ಹಿಡಿಸದಿದ್ದಲ್ಲಿ ಎದ್ದು ಬನ್ನಿ.
ನಿಮ್ಮ ನಿರೀಕ್ಷೆಯ ಜೊತೆ ಗಣಿತಾಭ್ಯಾಸ ಮಾತ್ರ ಮಾಡದಿರಿ..