ಏನಾದ್ರೂ ಉಳಿಯಲಿಲ್ಲ ತಾನೆ...?

ಏನಾದ್ರೂ ಉಳಿಯಲಿಲ್ಲ ತಾನೆ...?

ಮೂರು ತಿಂಗಳ ಮಗುವನ್ನು ಆಯಾಳ ಬಳಿ ಬಿಟ್ಟು ಜಾಬ್ ಗೆ ಹೋಗುವ ತಾಯಿಯ ಬಳಿ ಆಯಾ ಕೇಳುತ್ತಾಳೆ..

"ಏನಾದರೂ ಬಿಟ್ಟಿಲ್ಲ ತಾನೆ? ಪರ್ಸು, ಕೀಲಿಕೈ, ಎಲ್ಲಾ ತೆಗೆದು ಕೊಂಡೆ ಅಲ್ವಾ..?

ಈಗ ಅವಳು ಹೌದು ಎಂದು ಹೇಗೆ ಅಂದಾಳು… ಓಡುತ್ತಾ ಓಡುತ್ತಾ ಸಕಲವನ್ನೂ ಪಡೆಯುವ ಆಕಾಂಕ್ಷೆಯಲ್ಲಿ

ಅವಳು ಯಾರಿಗಾಗಿ ಇದನ್ನೆಲ್ಲಾ , ಮಾಡುತ್ತಿದ್ದಾಳೋ ಅದು ಈಗ ಅಲ್ಲೇ ಉಳಿದು ಹೋಗಿದೆ...

*

ಮದುವೆಯಲ್ಲಿ ಮದುಮಗಳನ್ನು ಬೀಳ್ಕೊಡುತ್ತಲೇ ಛತ್ರ ಖಾಲಿ ಮಾಡುತ್ತಿದ್ದಾಗ ಮದುಮಗಳ ಅತ್ತೆ ಕೇಳಿದಳು.. "ಅಣ್ಣಾ,ಏನೂ ಉಳಿದಿಲ್ಲ ತಾನೆ...? ಚೆಕ್ ಮಾಡು ಸರಿಯಾಗಿ...!"

ಅಪ್ಪ ಚೆಕ್ ಮಾಡಲು ಹೋದಾಗ ವಧುವಿನ ರೂಮಿನಲ್ಲಿ ಕೆಲವು ಒಣಗಿದ ಹೂವುಗಳು ಬಿದ್ದಿದ್ದವು. ಎಲ್ಲವೂ ಹಿಂದೆ

ಉಳಿದು ಹೋಯಿತು..‌ 25 ವರ್ಷ ಯಾವ ಹೆಸರು ಹಿಡಿದು ಕರೆಯುತ್ತಿದ್ದನೋ ಪ್ರೀತಿಯಿಂದ… ಆ ಹೆಸರು ಹಿಂದೆ

ಉಳಿದು ಹೋಗಿತ್ತು ಮತ್ತು ಆ ಹೆಸರಿನ ಮುಂದೆ ಗರ್ವದಿಂದ ಜೋಡಿಸುತ್ತಿತ್ತೋ ಆ ಹೆಸರೂ ಕೂಡ ಹಿಂದೆ ಉಳಿದು ಹೋಯಿತು ಈಗ...

"ಅಣ್ಣಾ, ನೋಡಿದೆಯಾ..? ಏನೂ ಬಿಟ್ಟಿಲ್ಲಾ ತಾನೆ?

ಅತ್ತೆಯ ಈ ಪ್ರಶ್ನೆಗೆ ಕಣ್ಣಿಂದ ಬಂದ ನೀರನ್ನು ಮುಚ್ಚಿಡುತ್ತಾ ತಂದೆ ಅತ್ತೆಗೆ ಏನೂ ಹೇಳಲಿಲ್ಲ… ಆದರೆ ಎದೆಯಲ್ಲಿ ಒಂದೇ ದ್ವನಿಯಿತ್ತು.. ಸಕಲವೂ ಇಲ್ಲೇ ಉಳಿದು ಹೋಯಿತು..!

*

ಬಹಳ ಭರವಸೆಯಿಂದ ಮಗನನ್ನು ಓದಿಗಾಗಿ ವಿದೇಶಕ್ಕೆ ಕಳಿಸಿದ್ದೆ, ಮತ್ತವನು ಓದಿ ಅಲ್ಲೇ ಸೆಟಲ್ ಆಗಿಬಿಟ್ಟ.

ಮೊಮ್ಮಗನ ಜನನವಾದಾಗ ಬಹಳ ಕಷ್ಟದಿಂದ 3 ತಿಂಗಳು ವೀಸಾ ಸಿಕ್ಕಿತ್ತು ಮತ್ತೆ ವಾಪಸ್ಸು ಹೊರಡುವಾಗ

ಮಗ ಪ್ರಶ್ನಿಸಿದ. "ಎಲ್ಲಾ ಚೆಕ್  ಮಾಡಿದ್ಯಾ ಏನಾದ್ರೂ ಉಳಿದು ಹೋಯ್ತಾ...? ಏನೆಂದು ಉತ್ತರಿಸಲಿ… ಈಗ ಬಿಟ್ಟುಹೋಗಲು ಉಳಿದಿದ್ದಾದರೂ ಏನು?

*

ಸೇವಾ ನಿವೃತ್ತಿಯ ಸಂಜೆ ಪೀ.ಎ. ನೆನಪು ಮಾಡಿದ… "ಚೆಕ್ ಮಾಡಿಕೊಳ್ಳಿ ಸರ್...! ಏನಾದರೂ ಉಳಿದು ಹೋಯ್ತಾ...?

ಸ್ವಲ್ಪ ತಡೆದು ಮತ್ತೆ ಯೋಚಿಸಿದೆ ಇಡೀ ಜೀವನವೆಲ್ಲಾ ಇಲ್ಲೇ ಬಂದು ಹೋಗುವುದರಲ್ಲಿ ಕಳೆದು ಹೋಯಿತು.. ಈಗ ಇನ್ನೇನು ಉಳಿದು ಹೋಗಿರಬಹುದು..?

*

ಸ್ಮಶಾನದಿಂದ ತಿರುಗಿ ಬರುವಾಗ ಮಗ ಮತ್ತೊಮ್ಮೆ ಕತ್ತು ತಿರುಗಿಸಿದ ಮತ್ತೊಮ್ಮೆ ಹಿಂದೆ ನೋಡುವುದಕ್ಕಾಗಿ.. ತಂದೆಯ ಚಿತೆಯ ಉರಿಯುತ್ತಿರುವ ಬೆಂಕಿ ನೋಡಿ ಮನ ತುಂಬಿ ಬಂದಿತ್ತು. ಓಡುತ್ತಾ ಹೋದ ತಂದೆಯ ಮುಖದ ಛಾಯೆ ಹುಡುಕುವ ಅಸಫಲ ಪ್ರಯತ್ನ ಮಾಡಿದ ಹಿಂದಿರುಗಿ ವಾಪಸ್ಸು ಬಂದ.

ಗೆಳೆಯ ಕೇಳಿದ… ಏನಾದ್ರೂ ಉಳಿದು ಹೋಗಿತ್ತಾ..?

ತುಂಬಿದ ಕಣ್ಣುಗಳಿಂದ ಹೇಳಿದ. ಇಲ್ಲ ಏನೂ ಉಳಿದಿಲ್ಲ ಈಗ… ಮತ್ತೇನು ಉಳಿದಿದೆಯೋ… ಅದು ಸದಾ ನನ್ನ ಜೊತೆಗಿರುತ್ತದೆ...!

*

ಒಮ್ಮೆ ಸಮಯ ಮಾಡಿಕೊಂಡು ಯೋಚಿಸಿ, ಬಹುಶಃ… ಕಳೆದ ಸಮಯ ನೆನಪಾದರೆ, ಕಣ್ಣು ತುಂಬಿ ಬಂದರೆ ಮತ್ತು… ಇಂದು ಮನ ತುಂಬಿ ಬದುಕುವ ಗುರಿ ಸಿಕ್ಕಿ ಬಿಡಲಿ...! ಎಲ್ಲ ಗೆಳೆಯರಿಗೆ ಇದನ್ನೇ ಹೇಳಲು ಬಯಸುತ್ತೇನೆ.

ಗೆಳೆಯರೇ ಯಾರಿಗೆ ಗೊತ್ತು ಈ ಬದುಕಿನ ಸಂಜೆ ಎಂದು ಆಗಿಬಿಡುತ್ತದೋ..! ಅದಕ್ಕೆ ಹಾಗಾಗುವ ಮೊದಲು

ಆಲಿಂಗಿಸಿ ಬಿಡು, ಪ್ರೀತಿಯ ಎರಡು ಮಾತಾಡಿ ಬಿಡು. ಏಕೆಂದರೆ ಏನೂ ಬಿಟ್ಟು ಹೋಗಬಾರದು...!

ಯೋಚಿಸುತ್ತಾ ಉಳಿದು ಬಿಡಬಾರದು, ಏನಾದ್ರೂ ಉಳಿದು ಹೋಗಲಿಲ್ಲ ತಾನೆ..

ಕರ್ನಾಟಕ ರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು 

(ಸಂಗ್ರಹಾನುವಾದ) - ಚಂದಿಕಾ ಹೊಳ್ಳ, ಬೆಳ್ತಂಗಡಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ