ಏನಿದು IRC (Internet Relay Chat)?

ಏನಿದು IRC (Internet Relay Chat)?

ಬರಹ

IRC - ಸಿಂಪಲ್ಲಾಗಿ ಹೇಳ್ಬೇಕಂದ್ರೆ ಅದು ಸಮುದಾಯ ತನ್ನ ಕೆಲವೊಂದು ವಿಷಯಗಳ ಚರ್ಚೆಗೆಂದೇ ರೂಪಿಸಿಕೊಂಡ ಚಾಟ್ ರೂಮ್ ಅನ್ನ ಬಹುದು. ಆದ್ರೆ ಇಲ್ಲಿ ಚಾಟ್ ರೂಮಿನಲ್ಲಿ ಸಮುದಾಯದ್ದೇ ಆದ ಕೆಲವು ನೀತಿ ನಿಯಮಗಳು, ಕಟ್ಟಳೆಗಳಿದ್ದು, ಭಾಗಿಗಳು ಬೇಡದ ವಿಷಯ ಪ್ರಸ್ತಾಪ ಮಾಡಿದಾಗ ಅವರನ್ನು ಹೊರದೂಡುವ ಮಾಡರೇಟರ್ಗಳೂ ಇರುತ್ತಾರೆ.

ಇದು ನಿಮ್ಮ ಜಿಟಾಕ್, ಯಾಹೂ ಚಾಟ್ ರೀತಿಯೇ ಕೆಲಸ ಮಾಡಿದ್ರೂ ಸ್ವಲ್ಪ ಭಿನ್ನತೆಗಳಿವೆ.
೧) ಇಲ್ಲಿ ನಿಮ್ಮ ಸಮುದಾಯದಲ್ಲಿ ಆನ್ಲೈನ್ ಇರುವ ಎಲ್ಲರಿಗೂ ನೀವು ಚಾಟ್ ರೂಮ್ ನಲ್ಲಿ ಕಳಿಸಿದ ಸಂದೇಶಗಳು ಕಾಣಿಸುತ್ತವೆ.
೨) ಯಾರಿಗಾದರೂ ಖಾಸಗಿ ಸಂದೇಶ ಕಳಿಸಬೇಕೆಂದರೆ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ ಸಂದೇಶ ಕಳಿಸಬೇಕು.
೩) ನೀವು IRC ನಲ್ಲಿ ಮಾತಾಡಿದ್ದೆಲ್ಲಾ (ಖಾಸಗಿ ಸಂದೇಶಗಳನ್ನು ಹೊರತು ಪಡಿಸಿ) ಇಂಟರ್ನೆಟ್ನಲ್ಲಿ ಉಳಿದುಕೊಳ್ಳುತ್ತದೆ. ಮುಂದೆ ಯಾರಾದರೂ ನಾವು ಮಾತಾಡಿದ್ದ ವಿಷಯದ ಬಗ್ಗೆ ಸರ್ಚ್ ಮಾಡಿದಾಗ ನಮ್ಮ ಚಾಟ್ ಕಾಣಿಸಿಕೊಂಡಲ್ಲಿ ಆಶ್ಚರ್ಯವಿಲ್ಲ.
೪) ಇದು ಸಮುದಾಯದಲ್ಲಿನ ಕೆಲಸಗಳಲ್ಲಿ ನೀವು ಹೇಗೆ ಭಾಗಿಯಾಗಿದ್ದಿರಿ, ನಿಮ್ಮ ಕೊಡುಗೆಗಳೇನು ಅನ್ನೋದನ್ನು ಇತರರು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
೫) ಮಾತು ಹಳಿ ತಪ್ಪಿ ಎಲ್ಲಿಗೋ ಹೊರಟರೆ, ನಿಮ್ಮ ಹೆಸರಿನಲ್ಲಿ ಉಳಿದುಕೊಳ್ಳುವ ಲಾಗ್ ನಿಮಗೆ ತೊಂದರೆಯಾದರೂ ಆಗಬಹುದು.

ಇಷ್ಟೆಲ್ಲಾ ಪಾಸಿಟೀವ್ ಮತ್ತು ನೆಗೆಟೀವ್ ವಿಷಯಗಳಿದ್ದೂ ಯಾಕೆ ನಮಗೆಲ್ಲಾ IRC ಇಷ್ಟ ಅಂದ್ರೆ, ಟೆಕಿಗಳಿಗೆ ಇಂತಹ ಸ್ವತಂತ್ರ ಪರಿಸರದಲ್ಲಿ ತಮ್ಮಲ್ಲಿರುವ ಚಾತುರ್ಯವನ್ನು ತೋರಿಸಲಿಕ್ಕೆ, ಗೊತ್ತಿಲ್ಲದ ವಿಷಯಗಳನ್ನು ಆ ಕ್ಷೇತ್ರದಲ್ಲಿನ ಪರಿಣಿತಿಹೊಂದಿದವರ ಬಳಿ ಸುಲಭವಾಗಿ ಮಾತನಾಡಿಸಿ ಕಲಿಯಲಿಕ್ಕೆ ಇದು ತಕ್ಕುದಾದ ಮಾಧ್ಯಮ ಆಗಿರೋದು. IRC ಗೆ ಲಾಗಿನ್ ಆಗೋದು, ರೆಜಿಸ್ಟರ್ ಆಗೋದು ಇತ್ಯಾದಿ ಒಮ್ಮೆ ಕಲಿಯಬೇಕಾದ ಸಂಗತಿ. ನಂತರ ಅದರಲ್ಲಿ ನಿಷ್ಟಿಂತೆಯ, ತಲೆ ನೋವಿಲ್ಲದ ಅಲೆದಾಟ.

irc.freenode.net ಸರ್ವರ್ ನಲ್ಲಿ #kannada ಚಾನಲ್ ಪ್ರವೇಶಿಸಿ. ನಮ್ಮಲ್ಲನೇಕರನ್ನ ನೀವು ಬೇಟಿ ಮಾಡಬಹುದು. ಅದರಲ್ಲಿ ನನ್ನ ನಿಕ್ ನೇಮ್ (ಅಡ್ಡ ಹೆಸರು ಅನ್ನ ಬಹುದು) techfiz
ನೀವೂ ನಿಮಗೆ ಇಷ್ಟ ಬಂದ ಲಾಗಿನ್ ಹೆಸರನ್ನು ಅಲ್ಲಿಟ್ಟುಕೊಳ್ಳಬಹುದು.

ಇದನ್ನು ಅರ್ಥಮಾಡಿಕೊಳ್ಲಿಕ್ಕೆ ಕಷ್ಟ ಆಗಿದ್ರೆ, ಮತ್ತೆ ಕೆಲವು ಪ್ರಶ್ನೆಗಳನ್ನು ಕೇಳಿ. ಹಾಗೇ ಪಿಡ್ಜಿನ್ (http://pidgin.im) ಮೆಸೆಂಜರ್ ಉಪಯೋಗಿಸಿ ನೋಡಿ. ಅಲ್ಲಿ, IRC, ನಿಮ್ಮ ಜೀಟಾಕ್, ಯಾಗೂ, AOL ಇತ್ಯಾದಿ ಚಾಟ್ ಅಕೌಂಟುಗಳಿಗೆ ಒಂದೇ ಸಲ ಲಾಗಿನ್ ಆಗಬಹುದು. ಅದೂ ಒಂದೊಂದೇ ಅಕೌಂಟಲ್ಲ. ನಿಮಗಿಷ್ಟ ಬಂದಷ್ಟು ಐ.ಡಿಗಳಿಗೆ ಲಾಗಿನ್ ಆಗಬಹುದು. ಬೇರೆಲ್ಲಾ ಮೆಸೆಂಜರ್ ಗಳಿಗಿಂತ ಕಡಿಮೆ ಮೆಮೋರಿ ಇದು ತಿನ್ನುತ್ತೆ.