"ಏನು ಪ್ರಯೋಜನ??"

"ಏನು ಪ್ರಯೋಜನ??"

ಬರಹ

ಏನು ಪ್ರಯೋಜನ
ಇಲ್ಲಿ ಹೇಳಿ ಕೇಳಿ...
ಹೊಳೆಯೆಲ್ಲಾ ಕೊಳೆಯಾಗಿದೆಯಿಲ್ಲಿ
ನೆಮ್ಮದಿಯ ಬೆಳೆ ಬೆಳೆಯಲಾಗುತ್ತಿಲ್ಲವೆಲ್ಲಿ... !! |ಪ|

ಎಲ್ಲಿ ಕೇಳಲಿ ಇಲ್ಲಿ ನ್ಯಾಯವನು?
ಕಣ್ತೆರೆದರೆ ಕಾಣುವಷ್ಟೊ.. ಅನ್ಯಾಯವೇ.
ಹೋರಾಡಲು ಹೋದರೆ
’ಫ್ರೀ’ಯಾಗಿ ಸಿಗುವುದಿಲ್ಲಿ "ಗಾಂಧೀ"ಯೆಂಬ ಪಟ್ಟ |೧|

ಕೇಳಲಿ ಯಾರನ್ನು ಇಲ್ಲಿ
ಸುಗಂಧದ ವಾಸನೆ ಹೇಗಿತ್ತೆಂದು?
ಇಲ್ಲಿ ಎಲ್ಲರೂ ದುರ್ವಾಸನೆಯೆನ್ನೆ
ಉಸಿರುತ್ತಿರುವಾಗ...... |೨|

ಒಗ್ಗಟ್ಟಲ್ಲಿ ಬಲವಿದೆ ಎಂಬುದು
ಇಲ್ಲಿ ಎಳ್ಳಷ್ಟೂ ಸುಳ್ಳಲ್ಲ
ಅದೇ ದುರ್ಜನರ ಒಗ್ಗಟ್ಟೆ,
ಒಬ್ಬ ಸಾಮಾನ್ಯಂಗೆ ಶೂಲವಾಗುವುದ ಇಲ್ಲಿ ಯಾರೂ ಕೇಳಲ್ಲ |೩|

ಅಭಿವೃದ್ಧಿಯಾಗಿದೆ ದೇಶ ಒಪ್ಪುತ್ತೇನೆ
ಜನ " ಸುಧಾರಿಸಿದ್ದಾರೆಂ"ಬುದ ಕೇಳಿದ್ದೆನೆ
ಆದರೆ ನಾವೇ ಬದಲಾಗದಿರುವುದೇ ತಪ್ಪೇ..?
ಹೌದು, ತಪ್ಪೇ..
ಏಕೆಂದರೆ ನಾವೂ " ಹತ್ತರ ಕೂಟ್ಟಾಗ ಹನ್ನೊಂದು, ಪರ್ಶಿಕೊಟ್ಟಾಗ ಗೋವಿಂದ "ಎಂದಿಲ್ಲವಲ್ಲ..!! |೪|