ಏನು ಫಲ ಮತ್ತು ಜೀವನ ಎರಡು ಕವನಗಳು

ಏನು ಫಲ ಮತ್ತು ಜೀವನ ಎರಡು ಕವನಗಳು

ಬರಹ

ಏನು ಫಲ 

ಹೆತ್ತ ತಾಯ್ತಂದೆ ಗಳ ಚಿತ್ತವ ನೋಯಿಸಿ

ನಿತ್ಯ ಧಾನವ ಮಾಡುವ ಮಕ್ಕಳಿದ್ದೇನು ಫಲ

ಸ್ನಾನ ಪಾನಕೆ ಒದಗುವ ಜಲ ತಾ

ಕಾನನದಲ್ಲಿದ್ದರೇನು ಫಲ

ಗುಟ್ಟು -ಕ್ಷಮಾ  ಗುಣ ವಿಲ್ಲದ ಹೆಣ್ಣಲ್ಲಿ

ಸೌಂದರ್ಯ-ಸಿರಿ ತಾನಿದ್ದೇನು ಫಲ

ಸತ್ಯ,ಶ್ರದ್ದೆ ಇಲ್ಲದ ಶರಣನು

ಸಾವಿರ ಜಪವನು ಮಾಡಿದರೇನು ಫಲ

ಮುಕ್ತಿ ಮಾರ್ಗವ ಕೊಡುವಾ ಶ್ರೀಹರಿಯ

ಮನದಲಿ ನೆನೆಯದ ಮನುಜನು ಬದುಕಿದ್ದೇನು ಫಲ

"ಜೀವನ"

ಹೂವ ಹಾಸಿಗೆಯೊ

ಅಲ್ಲ

ಮುಳ್ಳಿನ ಮಂಚವೂ

ಅಲ್ಲ

ಎಲ್ಲ ಸುಖ ದುಖಗಳ

ಅನುಬವಿಸಿದ ಒಳ್ಳೆಯ

ಹೃದಯದಲ್ಲಿ ಅರಳಿದ

ಕೆಂಪು ಗುಲಾಬಿ

-ಕೃಷ್ಣಮೊರ್ತಿ ಅಜ್ಜಹಳ್ಳಿ