ಏಲಿಯನ್ಸ್ಗಗಳ ಜಗತ್ತಿನಲ್ಲಿ...ನಾವು ನೀವು

ಏಲಿಯನ್ಸ್ಗಗಳ ಜಗತ್ತಿನಲ್ಲಿ...ನಾವು ನೀವು

ಶರತ್ ಲೋಹಿತ್ ವಿನೀತ್ ರೋಹಿತ್ ನಾಲ್ವರು ಪ್ರಾಣ ಸ್ನೇಹಿತರು.ಅವರ ಮನೆಗಳಲ್ಲು ಅಷ್ಟೇ ಅವರ ಅಪ್ಪ ಅಮ್ಮ ಎಲ್ಲರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತಿದ್ದರು.ಅವರ ಆಟ ಪಾಟ ಊಟ ನಿದ್ರೆ ಯಾರ ಮನೆಯಲ್ಲಾದರು ನೆಡೆಯುತಿತ್ತು.ಅವರ ಮನೆಯಲ್ಲಿ ಇವರ ಮನೆಯಲ್ಲಿ ಅವರು ಹೀಗೆ ನೆಡೆಯುತಿತ್ತು.ಇವರೆಲ್ಲ ಈಗ ತಾನೆ ಎಸೆಸೆಲ್ಸಿ ಮುಗಿಸಿ ರಿಸಲ್ಟ್ ಗಾಗಿ ಕಾಯುತಿದ್ದರು.ಅವರದು ದಕ್ಷಿಣ ಕನ್ನಡ ಜಿಲ್ಲೆಯ ದಟ್ಟ ಕಾಡಿನ ನಡುವಿನ ನಡುವೆ ಹರಿಯುವ ನೇತ್ರಾವತಿ ನದಿಯ ದಡದಲ್ಲಿನ ಒಂದು ಸುಂದರ ಪುಟ್ಟ ಸ್ವರ್ಗ ಸೀಮೆಯಂತಹ ಊರು.ಇವರೆಲ್ಲ ಒಂದು ದಿನ ಕೂತು ಮಾತಾಡುತಿದ್ದರು.ಶರತ್:ನಮಗೆ ಇನ್ನು ಕಾಲೇಜ್ ಶುರುವಾಗೋಕೆ ಒಂದೂವರೆ ತಿಂಗಳಿದೆ ಅಲ್ಲೀವರೆಗೆ ಟೈಂಪಾಸ್ ಮಾಡೋದು ಕಷ್ಟ.ಅದ್ಕೆ ಯಾವ್ದಾದ್ರು ಊರಿಗೆ ಟ್ರಿಪ್ ಹೋಗೋಣ ಕಣ್ರೋ.

ಲೋಹಿತ್:ಹೂ ಕಣೋ ನಾವೆಲ್ಲ ಯಾಕೆ ಸಕಲೇಶಪುರದತ್ರ ಇರೋ ಬಿಸಿಲೆ ಫಾರೆಷ್ಟ್ ಗೆ ಚಾರಣ ಹೋಗಿಬರೋಣ ಏನಂತೀರಾ?

ವಿನೀತ್:ಆಯ್ತು ಕಣೋ ನಾವೆಲ್ಲ ಮನೇಲಿ ಕೇಳಿ ಹೇಳ್ತೀವಿ.ಮುಂದಿನ ಸೋಮವಾರ ಹೊರಡೋಣ.ಅಯ್ತು ಎಲ್ಲ ಮನೇಲಿ ಟ್ರಿಪ್ ಅಂತ ಮಾತ್ರ ಹೇಳಿ.ಚಾರಣ ಅಂತ ಹೇಳ್ಬೇಡಿ ಅಂಗಂದ್ರೆ ಮನೇಲಿ ಕಳಿಸಲ್ಲ.
ರೋಹಿತ್:ಅಯ್ತು ಆಯ್ತು..ನಾನು ಶರತ್ ನಾಳೆ ಸಿಟಿಗೋಗಿ ಬೇಕಾಗಿರೋ ವಸ್ತುನ ತರ್ತೀವಿ.ಅಂಗೆ ನೀವ್ಯಾರು ದುಡ್ಡಿಗೆ ತಲೆಕೆಡುಸ್ಕೋಬೇಡಿ.ನಾನಿದ್ದೀನಿ ಅಂದ.ರೋಹಿತ್ ಊರಿನಲ್ಲಿ ಅತ್ಯಂತ ಸಿರಿವಂತರ ಮನೆಯ ಮಗನಾಗಿದ್ದ.
ಎಲ್ಲರು ಅಂದುಕೊಂಡಂತೆ ಮನೆಯಲ್ಲಿ ಹೇಳಿ ಒಪ್ಪಿಸಿದರು.ರೋಹಿತ್ ಶರತ್ ಪಟ್ಟಣಕ್ಕೆ ಬಂದು ಒಳ್ಳೆಯ ಟಾರ್ಚು ಟೋಪಿ ಶೂಸ್ ರೋಪ್  ಅಗತ್ಯ ವಸ್ತುಗಳನ್ನು ತಂದರು
ಎಲ್ಲರು ಅಂದುಕೊಂಡಂತೆ ಆ ದಿನ ಬೆಳಗ್ಗೆ ಬೇಗನೆ ಹೊರಟರು.ಅಪ್ಪ ಅಮ್ಭನ ಆಶೀರ್ವಾದ ಪಡೆದು ಅವರಿಂದ ಬೀಳ್ಕೊಂಡರು.ಬಹಶಃ ಅದೇ ಅವರ ಕೊನೆಯ ಬಿಳ್ಕೋಡುಗೆ ಅನಿಸುತ್ತದೆ.ಎಲ್ಲರು ಬಿಸಿಲೆ ಅರಣ್ಯವನ್ನು 12 ಘಂಟೆಗೆ ತಲುಪಿದರು.ಅಲ್ಲೇ ಅವರಿಗೊಂದು ವಿಷಯ ಮರೆತುಬಿಟ್ಟೆವಲ್ಲಾ ಎನಿಸಿತು.ಅವರು ಬಿಸಿಲೆ ಘಾಟ್ ನಲ್ಲಿ ಪಕ್ಕದಲ್ಲಿ ನೆಟ್ಟಿದ್ದ ಬೋರ್ಡು ಕಾಣಿಸಿತು.ಅದು ಅರಣ್ಯ ಇಲಾಖೆಯ ಫಲಕ.ಫಲಕದಲ್ಲಿ ಅತಿಕ್ರಮ ಪ್ರವೇಶ ಅಪರಾಧ.ಚಾರಣ ಮಾಡುವವರು ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದಿತ್ತು.
ವಿನೀತ್:ಏನ್ರೋ ಇದು.ಈಗೇನೊ ಮಾಡದು.
ಶರತ್:ನಡಿರೋ ಅದುಕೆಲ್ಲ ತಲೆ ಕೆಡುಸ್ಕೋಬಾರದು.
ಅಷ್ಟರಲ್ಲಿ ಅವರಿಗೆ ಎದುರಿನಿಂದ ಬರುತಿದ್ದ ಚಾರಣದ ಗುಂಪೊಂದು ಬರುತಿತ್ತು.ಅವರು ಇವರನ್ನು ಕಂಡು ಚಾರಣದ ವಿಷಯ ಹಂಚಿಕೊಂಡು ತಾವು ಕೂಡ ಅನುಮತಿ ಇಲ್ಲದೆ ಹೋಗಿ ಬಂದಿದ್ದಾಗಿ ತಿಳಿಸಿ ಹೋದರು.
ಲೋಹಿತ್:ನೊಡುದ್ರಾ.ನಡಿರೋ ಇನ್ನೇನು ನಡಿರಿ ನಡಿರಿ.
ಎಲ್ಲರು ಒಂದಾಗಿ ಮಾತಾಡುತ್ತ ನೆಡೆದರು.
ದಾರಿ ಸಾಗುತ್ತ ಸಾಗುತ್ತ ಅವರು ಕಾಡಿನ ಮಧ್ಯ ಭಾಗಕ್ಕೆ ಬಒದರು.ಅವರಿಗೆ ಅಲ್ಲಲ್ಲಿ ಕಡಿದಿರುವ ಮರದ ಬೊಡ್ಡೆಗಳು ಕಾಣಿಸಿದವು.ಇವೆಲ್ಲ ಕಾಡುಗಳ್ಲರ ಕೈಚಳಕ ಎ೦ದು
ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.ಅವರು ಅಲ್ಲಲ್ಲಿ ಹುಲಿ ಹೆಜ್ಜೆ ಗುರುತು ಆನೆ ಲದ್ದಿ ಎಲ್ಲ ಕ೦ಡರು,,,,,ಮನುಷ್ಯ ಮತ್ತು ಆನೆಗಳ ನಡುವಿನ ಸ೦ಘರ್ಷ
 ಅಲ್ಲಿ ಸಾಮನ್ಯ ಎ೦ದು ಅರಿತು ನ್ನೆಡೆದರು...
ಶರತ್ಃನಮಗೆ ಆನೆ ಎದುರು ಬ೦ದ್ರೆ ಎನ್ರೋ ಮಾಡೋದು?
ವಿನೀತ್ಃ ಅಳುತ್ತಾ ಕೂತ್ಕೊಳೊ ಆನೆ ಪಾಪ ಅ೦ತ ಬಿಟ್ಟು ಬಿಡುತ್ತೆ..
ಎಲ್ಲರು ನಕ್ಕರು.
ರೋಹಿತ್ಃಕಣಿ ಕೇಳು ಆನೆ ಬ೦ದ್ರೆ ತಿರುಗಿ ನೋಡದೆ ಓಡಿ ಹೋಗುದು ಅ೦ದ,
ಲೋಹಿತ್ಃಇಲ್ಲ ಕಣ್ರೋ ಆನೆಗಳ ಬಗ್ಗೆ ಇನ್ನೊ೦ದು ವಿಷಯ ಇದೆ.ಅವು ಸುಮ್ ಸುಮ್ನೆ ಯಾರ್ ಮೇಲು ದಾಳಿ ಮಾಡಲ್ಲ..ಕೆಲವು ಸ೦ದರ್ಭದಲ್ಲಿ ಅವು ದಾಳಿ ಮಾಡಲು
ಬ೦ದಾಗ ಅವಕ್ಕೆ ಬೆನ್ನು ತಿರುಗಿಸಿ ಓಡಬಾರದು..ಅಕ್ಕ ಪಕ್ಕ ತಿರುವು ಮುರುವು
ಓಡಿದರೆ ಅಪಾಯ ಇರುವುದಿಲ್ಲ ಹಾಗು ತಗ್ಗಿಗೆ ಓಡಿದರೆ ಅವಕ್ಕೆ ಓಡಲು ಕಷ್ತವಾಗುತ್ತದೆ..ಹಾಗೆ ಎದುರು ಓಡಿದಾಗ ತಕ್ಷಣಾ ಬಲಕ್ಕೆ ಎಡಕ್ಕೆ ತಿರುಗಿ ಓಡಿದರೆ ಆನೆಗಳು
ನಮ್ಮ೦ತೆಯೆ ತಿರುಗಲಾಗದೆ ಬಿಟ್ಟು ಹೋಗುತ್ತವೆ ಹಾಗು ನಾವು ಬೇಗ
ತಪ್ಪಿಸಿಕೊೞಬಹುದು ಎ೦ದು ನಮ್ಮ ತಾತ ಹೇಳುತಿದ್ದರು ಎ೦ದ..
ಶರತ್ಃ ತಾವ್ ತು೦ಬಾ ತಿಳ್ಕೊ೦ಡಿದ್ದೀರಾ ಅ೦ತ ಹೇಳಿದ..
ಎಲ್ಲರು ನೆಡೆದು ಕೊನೆಗೆ ಹೊಳೆ ದಡಕ್ಕೆ ಬ೦ದರು ಅಲ್ಲಿ ವಿಶಾಲವಾದ ಜಾಗವಿತ್ತು..ಮರ ಗಿಡಗಳಿಲ್ಲದ ಬಯಲು ಪ್ರದೇಶ.ಕಾಡಿನೊಳಗೆ ಕ೦ಡ ಆ ಬಯಲು ಪ್ರದೇಶ
ಇವರ ಈ ದಿನದ ವಸತಿಗೆ ಸೂಕ್ತವಾಗಿತ್ತು..
ಸ೦ಜೆ ವೇಳೆಗೆ ಎಲ್ಲರು ಕಟ್ಟಿಗೆ ಗುಡ್ಡೆ ಹಾಕಿ ಬೆ೦ಕಿ ಹೊತ್ತಿಸಿ  ಬೆಳಕು ಮೂಡಿಸಿದರು..
ಆ ದಿನ ರಾತ್ರಿ ಎಲ್ಲರು ಕೆಂಪುಹೊಳೆ ಪಕ್ಕದ  ವಿಶಾಲವಾದ ಜಾಗದಲ್ಲಿ ಟೆಂಟ್ ಹಾಕಿದರು.ಅವರೆಲ್ಲಾ ಮೊದಲೇ ತಂದಿದ್ದ ಬ್ರೆಡ್ ಜಾಮ್ ಬಿಸ್ಕೆಟ್ ಜ್ಯೂಸ್ ಕುಡಿದು ಹೊಟ್ಟೆ ತುಂಬಿಸಿಕೊಂಡರು.
ರೋಹಿತ್:ಅಬ್ಬಾ ಟೆಂಟ್ ಹಾಕಿ ಹೊಟ್ಟೆ ತುಂಬಿಸ್ಕೊಂಡ್ವಿ.ಟೈಂ ಆಯಿತು.ಕಟ್ಟಿಗೆ ಜೋಡ್ಸಿ ಬೆಂಕಿ ಜೋರು ಮಾಡಿ ಯಾವ ಹುಳ ಹುಪ್ಪಟೆನು ಬರಲ್ಲ.
ವಿನೀತ್:ಹು ಕಣೋ,ಮಲಕಳ್ರೋ ಎಲ್ಲ ಬೆಳಗೆ ನಾವ್ ಚಾರಣ ಶುರು ಮಾಡಣ.
ಎಲ್ಲರೂ ಅಸುನೀಗಿದವರಂತೆ ಮಲಗಿಕೊಂಡರು.ಬೆಳಗಿನಿಂದ ನೆಡೆದು ನೆಡೆದು ಸುಸ್ತಾಗಿದ್ದರಿಂದ ಹಾಗೆ ಮಲಗಿದ್ದರು.ಹೊರಗೆ  ಕಟ್ಟಿಗೆಯಿಂದ ಹಾಕಿದ್ದ ಬೆಂಕಿ ಇನ್ನು ಕಿಚ್ಚಿನಿಂದ ಉರಿಯುತಿತತ್ತು.ಮಧ್ಯರಾತ್ರಿ 1.00ದಾಟಿತ್ತು.ಡಡಾರ್ ಗಡಾರ್ ಎನ್ನುವ ಶಬ್ದ ಆಕಾಶ ಸೀಳಿಕೊಂಡು ಬಂದಿತು.ದೈತ್ಯಾಕಾರದ ಆಕೃತಿಯೊಂದು ಭೂಮಿಗೆ ಸಮೀಪವಾಗತೊಡಗಿತು..ಮಿಂಚಿನಂತ ಬೆಳಕೊಂದು ಇವರು ಮಲಗಿದ್ದ ಟೆಂಟ್ ಸೀಳಿಕೊಂಡು ಇವರ ಮೇಲೆ ಕಣ್ಣು ಕೋರೈಸುವಂತೆ ಬೀಳುತಿತ್ತು.ಆದರೆ ಅದ್ಯಾವುದರ ಪರಿವೆಯೆ ಇಲ್ಲದೆ ಮಲಗಿದ್ದ ಇವರಿಗೆ ಎಚ್ಚರವಾಗಿರಲಿಲ್ಲ.ಆಕೃತಿ ಭೂಮಿ ಸಮೀಪಿಸುತಿದ್ದಂತೆ ಬೆಳಕಿನ ಶಾಖಕ್ಕೆ ಟೆಂಟ್ ಉರಿದುಹೋಗುವಷ್ಟು ಬಿಸಯಾಯಿತು.ಆ ಶಾಖದ ತಾಪಕ್ಕೆ ವಿನೀತ್ ಎಚ್ಚರಗೊಂಡು ತನ್ನ ಕಣ್ಣನ್ನು ತಾನೆ ನಂಬಲಾರದಾದ.ಸೂರ್ಯನ ಬೆಳಕು ಬಿದ್ದಿರುವಷ್ಟು ಪ್ರಕಾಶಮಾನವಾಗಿತ್ತು.ಏನಿದು ಆಶ್ಚರ್ಯ ಎಂದು ಸ್ನೇಹಿತಯನ್ನು ಎಬ್ಬಿಸಿದ.ಆದರೆ ಅವರ್ಯಾರು ಎಚ್ಚರವಾಗಲೇ ಇಲ್ಲ.ಅವರು ಆ ಬಿಸಿ ವಾತವರಣದಲ್ಲು ಕೊರಡಿನಂತೆ ಬಿದ್ದಿದ್ದರು.ಏನಿದು ಎಂದು ಆಚೆ ಬಂದು ನೋಡಿದ.
ಅಲ್ಲಿನ ಆ ದೃಶ್ಯ ನೋಡಿ ಒಮ್ಮೇಲೆ ಮುಕ್ಕೋಟಿ ದೇವತೆಗಳು ಇತಿಹಾಸ ವಿಜ್ಞಾನ ಖಗೋಳಶಾಸ್ಥ್ರ ಎಲ್ಲವು ನೆನಪಾದಂತಾಯಿತು.ಆದರೆ ಅದೆಲ್ಲ ನಿಜವೇ.....,?
 ಕಣ್ಣೆದುರಿಗೆ ಕಾಣುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ ಸತ್ಯವೇ ಅನಿಸತೊಡಗಿತು.
ಅದೇನೆಂದರೆ.
 
 
 
 (ಏಲಿಯನ್ಸ್ ಗಳ ಚಿತ್ರಕ್ಕಾಗಿ ಹುಡುಕಾಡಿದೆ..ಆದರೆ ಯಾವ ಏಲಿಯನ್ಸ್ ಗಳು ತಮ್ಮ ಫೋಟೊ ಫೋಸ್ ನೀಡಲು ಒಪ್ಪಲಿಲ್ಲ..ನಿಮ್ಮ ಬಳಿ ಏನಾದರು ಅವುಗಳ ಫೋಟೊ ಇದ್ದರೆ ನನಗೆ ಕೊಡಿ.ಹಾಕುತ್ಟೆನೆ.)

 

Comments