ಏಳಾಯ್ತು...ವರುಷ ಏಳಾಯ್ತು

ಏಳಾಯ್ತು...ವರುಷ ಏಳಾಯ್ತು

ಬರಹ

ಏಳಾಯ್ತು...ವರುಷ ಏಳಾಯ್ತು

ಏಳಾಯ್ತು...ಏಳಾಯ್ತು...
ಏಳು ಬೀಳುಗಳಿಂದ ಏಳಾಯ್ತು.
ಏಳೇಳು ಜನುಮದಲು
ನೀನು ನನಗೆ ನಾನು ನಿನಗೆ
ಎಂದು ಹೇಳಾಯ್ತು

ಏಳು ಸಮುದ್ರದ ಹರವು-ವಿಸ್ತಾರದಷ್ಟು
ಪ್ರೀತಿ ಮಾಡೋಣ...
ಭೀತಿ ಇರದೇ..ನಗುತಾ ಬಾಳೋಣಾ
ನಗೋಣ.. ನಗಿಸೋಣ...
'ನಗ'ದ ಕಡೆ ಮುಖ ಮಾಡದೆ
ಬಂಗಾರದ ಬಾಳು ಬಾಳೋಣ

'ಅಷ್ಟ' ಬಂದಿದೆ ಅಷ್ಟೈಶ್ವರ್ಯ ತರದೇ?
ತಂದೇ ತರುವುದು ಎಂಬ
ನಂಬಿಕೆಯಲಿ ಬಾಳೋಣ
ನಂಬಿದ ದೈವ ಕೈ ಕೊಡದು

ಕಂದ ಬಂದಿದೆ ಹರುಷ ತಂದಿದೆ
ಕನಸು ನನಸಾಗಿದೆ
ನನಸಲಿ ತೇಲುವ.. ಮೂವರು ಸೇರಿ!
ಮೂಲೋಕದಲೂ ಸಿಗದ ಆನಂದದಲಿ ನಲಿಯೊಣ
ನೋಡುವವರು ಮೂಗ ಮೇಲೆ
ಬೆರಳಿಟ್ಟು ಬೆಪ್ಪಾಗುವಂತೆ
ಚಂದದ ಬಾಳು ಬಾಳೋಣಾ

ಹಿರಿಯರಿಗೆ ಬಾಗಿ, ಕಿರಿಯರಿಗೆ ಮಾದರಿಯಾಗಿ
ಬಾಳಿ ಬದುಕೋಣ..ಬಾಳಿದರೆ ಹೀಗೇ ಬದುಕಬೇಕು ಎಂದು ತೋರಿಸೋಣ.

-ಸಂಕೇತ್ ಗುರುದತ್ತ
ಹೈದರಾಬಾದ್