ಎಡಬಿಡಂಗಿಗಳಾದ ಬಳಕೆದಾರರಲ್ಲಿ ಹೆಚ್ಚಿನವರು ಮುಂಬೈ,ಗುಜರಾತ್,ಉತ್ತರಪ್ರದೇಶಕ್ಕೆ ಸೇರಿದವರು.ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಹೊಸ ಮೊಬೈಲ್ ಕಂಪೆನಿಗಳಿಂದ ಸೇವೆ ಪಡೆಯುವವರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.ಲೈಸೆನ್ಸ್ ರದ್ದಾದ ಕಂಪೆನಿಗಳು ನಿಯಮ ಬಾಹಿರ ಕೃತ್ಯಗಳ ಮೂಲಕ ಲೈಸೆನ್ಸ್ ಪಡೆದಿರುವುದು ಸ್ಪಷ್ಟವಾಗಿದೆ.ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮದಡಿ,ಲೈಸೆನ್ಸ್ಗ ಅರ್ಜಿ ಹಾಕುವಾಗ ಬ್ಯಾಂಕು ಗ್ಯಾರಂಟಿಯಂತಹ ಕೆಲವು ಶರ್ತಗಳನ್ನೂ ಪೂರೈಸಬೇಕಾಗುತ್ತದೆ.ಟೆಲಿಕಾಂ ಇಲಾಖೆ ಅರ್ಜಿ ಸಲ್ಲಿಸಲು ಒಂದು ದಿನದ ಅವಕಾಶ ನೀಡಿ ಪ್ರಕಟನೆ ನೀಡಿದಾಗ,ಅರ್ಜಿ ಸಲ್ಲಿಸಲು ಶಕ್ತವಾಗಿದ್ದುವೆಂದರೆ,ಅವುಗಳು ಮುಂದಾಗಿ ಪ್ರಕಟಣೆ ಬಗ್ಗೆ ಮಾಹಿತಿ ಹೊಂದಿದ್ದುವು ಎನ್ನುವುದು ಸ್ಪಷ್ಟ.ಕಂಪೆನಿಗಳು ಭ್ರಷ್ಟಾಚಾರವೆಸಗಿ,ಟೆಲಿಕಾಂ ಲೈಸೆನ್ಸ್ ಪಡೆದು,ಭಾರೀ ಲಾಭವನ್ನು ಕೊಳ್ಳೆ ಹೊಡೆದಿವೆ.ರಾಜಕಾರಣಿಗಳು ಅದರ ಅಲ್ಪ ಪಾಲನ್ನು ಪಡೆದಿದ್ದರೂ,ಬಹುಪಾಲು ಲಾಭ ಕಂಪೆನಿಗಳ ಪಾಲಾಗಿರುವುದರಲ್ಲಿ ಅನುಮಾನವಿಲ್ಲ.ಈ ಕಂಪೆನಿಗಳ ಲೈಸೆನ್ಸ್ ರದ್ದು ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಅಣ್ಣಾ ಹಜಾರೆ ಬಳಗದ ಪ್ರಶಾಂತ್ ಭೂಷಣ್ ಅವರು,ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಳಕ್ಕೆ ರಾಜಕಾರಣಿಗಳಿಗಿಂತ ಕಂಪೆನಿಗಳ ದುರಾಶೆಯೇ ಮುಖ್ಯ ಕಾರಣ.ಅವುಗಳೀಗ ತಮ್ಮ ತಪ್ಪಿಗೆ ತಕ್ಕ ಶಾಸ್ತಿ ಅನುಭವಿಸಿವೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
-------------------------------------
ಆಕಾಶ್:ಐಟಿಐಯಲ್ಲಿ ಉತ್ಪಾದನೆ
ಐಟಿಐ ಕಂಪೆನಿಯು ಆಕಾಶ್ ಟ್ಯಾಬ್ಲೆಟ್ ಸಾಧನಗಳ ಉತ್ಪಾದನೆ ಆರಂಭಿಸುವ ಸಾಧ್ಯತೆಯಿದೆ.ಎರಡೂವರೆ ಸಾವಿರ ರೂಪಾಯಿ ಬೆಲೆಯಲ್ಲಿ ಸಾಧನ ಪೂರೈಕೆಗೆ ಕೇಂದ್ರ ಸರಕಾರ ಮತ್ತೆ ಏಲಂ ಹಾದಿ ಹಿಡಿಯಲಿದ್ದು,ಸಾರ್ವಜನಿಕ ಕಂಪೆನಿಗಳು ಏಲಂ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೆಂದದು ಬಯಸಿದೆ.ಡೇಟಾವಿಂಡ್ ಕಂಪೆನಿಯ ಆಕಾಶ್ ಟುಸ್ಸೆಂದ ಹಿನ್ನೆಲಿಯಲ್ಲಿ,ಕೇಂದ್ರ ಸರಕಾರ ತನ್ನ ಟ್ಯಾಬ್ಲೆಟ್ ಸಾಧನದ ಅಪೇಕ್ಷಣೀಯ ಅಂಶಗಳಲ್ಲಿ ಬದಲಾವಣೆ ಮಾಡಿದೆ.ಮಳೆ ಬಿದ್ದರೂ ಕೆಡದ,ಎಂಟು ಗಂಟೆ ಬ್ಯಾಟರಿ ಬಾಳಿಕೆಯಿರುವ,ಹೆಚ್ಚು ಪ್ರತಿಸ್ಪಂದಿಸುವ ತೆರೆ ಹೊಂದಿರುವ ಆಕಾಶ್ ಸಾಧನಕ್ಕಾಗಿ,ಕೇಂದ್ರ ಬೇಡಿಕೆಯಿಡಲಿದ್ದು,ಸಾಧನವನ್ನು ದೇಶದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮುಂದಿನ ಎರಡು ವರ್ಷಗಳೊಳಗೆ ನೀಡುವ ಯೋಜನೆಯನ್ನದು ಪ್ರಕಟಿಸಿದೆ.ಅಂದ ಹಾಗೆ ಮುಂದಿನ ಆಕಾಶ್ ಸದ್ಯದ್ದಕ್ಕಿಂತ ಐದು ಪಟ್ಟು ವೇಗದ ಸಂಸ್ಕಾರಕವನ್ನು ಬಳಸಬೇಕೆಂದು ಸರಕಾರ ಬಯಸಿದೆ.
------------------------------------------------
ನಿಮ್ಮ ಮಿಂಚಂಚೆ ಸುರಕ್ಷಿತವೇ?
ನಿಮ್ಮ ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎಂದು ತಿಳಿಸುವ ಅಂತರ್ಜಾಲ ತಾಣವೊಂದು ಆರಂಭವಾಗಿದೆ.https://www.pwnedlist.com ವಿಳಾಸದಲ್ಲಿ ಲಭ್ಯವಿರುವ ತಾಣದಲ್ಲಿ ನಿಮ್ಮ ಮಿಂಚಂಚೆಯ ವಿಳಾಸ ಅಥವ ಬಳಕೆದಾರನ ಹೆಸರನ್ನು ನೀಡಿದರೆ,ನಿಮ್ಮ ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎನ್ನುವ ವಿವರ ಸಿಗುತ್ತದೆ.ಪೈರೇಟ್ ಬೇ,ಪೇಸ್ಟ್ ಬಿನ್ ಮುಂತಾದ ತಾಣಗಳಲ್ಲಿ ಹ್ಯಾಕ್ ಆದ ಮಿಂಚಂಚೆಯ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.ಅಂತಹ ತಾಣಗಳಿಂದ ವಿವರಗಳನ್ನು ಕಲೆ ಹಾಕಿ,ಹ್ಯಾಕ್ ಆದ ಮಿಂಚಂಚೆಯ ವಿವರಗಳನ್ನು ತಾಣದಲ್ಲಿ ಪ್ರಕಟಿಸಲಾಗುತ್ತದೆ.ಇದುವರೆಗೆ ಸುಮಾರು ನಾಲ್ಕು ದಶಲಕ್ಷಕ್ಕೂ ಹೆಚ್ಚು ಮಿಂಚಂಚೆಗಳ ವಿವರಗಳನ್ನು https://www.pwnedlist.com ತಾಣ ಸಂಗ್ರಹಿಸಿದೆ.ಒಂದು ವೇಳೆ ನಿಮ್ಮ ಮಿಂಚಂಚೆ ಹ್ಯಾಕ್ ಆಗಿದೆ ಎಂದು ಈ ತಾಣದ ಮೂಲಕ ತಿಳಿದರೆ,ಒಡನೆಯೇ ಮಿಂಚಂಚೆ ವಿಳಾಸದ ಲಾಗಿನ್ ವಿವರಗಳನ್ನು ಬದಲಿಸುವುದು ಸುರಕ್ಷಿತ.ಹೊಸ ಪಾಸ್ವರ್ಡ್ ಬಳಸಿ,ಮಿಂಚಂಚೆಯ ಮೂಲಕ ಇತರ ಖಾತೆಗಳ ಪಾಸ್ವರ್ಡ್ ಪಡೆದಿದ್ದರೆ,ಅವನ್ನೂ ಬದಲಿಸಿ ಸುರಕ್ಷಿತವಾಗಿಸಿ.
--------------------------------------------------
ಮೊಬೈಲ್ ಸ್ಕ್ಯಾನರ್
ಬ್ಯಾಟರಿ ಚಾಲಿತ,ನಿಸ್ತಂತು ಸ್ಕ್ಯಾನರ್ ಅನ್ನು ಕ್ಸೆರಾಕ್ಸ್ ಕಂಪೆನಿ ಬಿಡುಗಡೆ ಮಾಡಿದೆ.ಇದನ್ನು ಬಳಸಿ,ಚಿತ್ರ-ಪುಟವನ್ನು ಸ್ಕ್ಯಾನ್ ಮಾಡಿ,ಸ್ಕ್ಯಾನ್ ಸಂಕೇತಗಳನ್ನು ವಯರ್ಲೆಸ್ ವಿಧಾನದಿಂದ ಕಂಪ್ಯೂಟರಿಗೋ,ಕ್ಯಾಮರಾಕ್ಕೋ,ಮೊಬೈಲ್ ಸಾಧನದಲ್ಲೋ ಉಳಿಸಬಹುದು.ಸ್ಕ್ಯಾನ್ ಮಾಡಬೇಕಾದ ಚಿತ್ರ ಅಥವಾ ಪುಟವು ಸ್ಕ್ಯಾನರ್ ಮೂಲಕ ತೂರಿ ಹೋಗ ಬೇಕಾದ್ದರಿಂದ,ಪುಸ್ತಕಗಳನ್ನು ಸ್ಕ್ಯಾನ್ ಮಾಡಲಸಾಧ್ಯ.ಬೆಲೆ ಮಾತ್ರ ದೊಡ್ಡ ಸ್ಕ್ಯಾನರಿಗಿಂತಲೂ ದುಬಾರಿ-ಇನ್ನೂರೈವತ್ತು ಡಾಲರು ಬೆಲೆಯಿದಕ್ಕಿದೆ.
-------------------------------
ಫೇಸ್ಬುಕ್ ಐಪಿಓ
ಫೇಸ್ಬುಕ್ ಸಾಮಾಜಿಕ ಜಾಲತಾಣವು ಐದುದಶಲಕ್ಷ ಡಾಲರು ಮೌಲ್ಯದ ಐಪಿಓ ಮೂಲಕ ತನ್ನ ಶೇರುಗಳನ್ನು ಸಾರ್ವಜನಿಕರಿಗೆ ಮಾರಲಿದೆ.ಸುಮಾರು ಎಂಭತ್ತೈದು ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ತಾಣವು ಮೂರುವರೆ ಬಿಲಿಯನ್ ಆದಾಯವನ್ನು ಕಳೆದವರ್ಷ ಗಳಿಸಿತ್ತು.ಫೇಸ್ಬುಕ್ ತಾಣದ ನಿಜ ಮೌಲ್ಯ ಎಷ್ಟು ಎನ್ನುವುದು ಸ್ಪಷ್ಟವಿಲ್ಲ.ಜುಕರ್ಬರ್ಗ್ ಮುಖ್ಯಸ್ಥನಾಗಿರುವ ಈ ತಾಣದ ಐಪಿಓ ಬಹು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.ಇದರಲ್ಲಿ ಶೇರು ಗಿಟ್ಟಿಸದರೆ, ಭರ್ಜರಿ ಲಾಭ ಮಾಡುವ ಕನಸು ಹೂಡಿಕೆದಾರರಲ್ಲಿ ಮೂಡಿದೆ.
-------------------------------
ಮೊಬೈಲ್ ಮೂಲಕ ನೌಕರಿ
ಉದ್ಯೋಗ ವಿನಿಮಯ ಸೇವೆ ನೀಡುವ ನೌಕ್ರಿ.ಕಾಂ ಅಂತರ್ಜಾಲ ತಾಣವಿನ್ನು ಮೊಬೈಲ್ ಬಳಕೆದಾರರಿಗೆ ಸುಲಭವಾಗಿ ಲಭ್ಯವಾಗಲಿದೆ.ಆಂಡ್ರಾಯಿಡ್,ಐಫೋನ್ ಮತ್ತು ಬ್ಲಾಕ್ಬೆರ್ರಿ ಫೋನ್ಗಳಲ್ಲಿ ಅನುಸ್ಥಾಪಿಸಲಾಗುವ ತಂತ್ರಾಂಶಗಳನ್ನು ನೌಕ್ರಿ ತಾಣ ಬಿಡುಗಡೆ ಮಾಡಿದೆ.ಹೀಗಾಗಿ ಮೊಬೈಲ್ ಬಳಕೆದಾರರು,ತಮ್ಮ ಮೊಬೈಲ್ ಹ್ಯಾಂಡ್ಸೆಟ್ಗಳ ಮೂಲಕ ನೌಕ್ರಿ ತಾಣದ ಸೇವೆ ಪಡೆಯುವುದು ಸುಲಭಸಾಧ್ಯವಾಗಲಿದೆ.ನೌಕರಿಗಾಗಿ ವ್ಯಕ್ತಿ ತನ್ನ ವೈಯುಕ್ತಿಕ ವಿವರಗಳನ್ನು ತಾಣದಲ್ಲಿ ದಾಖಲಿಸಿದೊಡನೆಯೇ,ಆತ ಬಯಸಿದ ನೌಕರಿ ಒದಗಿಸುವ ಕಂಪೆನಿಗಳ ವಿವರಗಳು ಮೊಬೈಲ್ ಫೋನಿನಲ್ಲಿ ಸಿಗಲಿದೆ.ಮೊಬೈಲ್ ಬಳಕೆಯಿಂದ ನೌಕರಿ ಬೇಕಾದವರನ್ನು ಸಂಪರ್ಕಿಸಲೂ ಕಂಪೆನಿಗಳಿಗೆ ಸುಲಭವಾಗಲಿದೆ.ವಾರಕ್ಕೆ ಮೂರು ಸಲವಾದರೂ,ಉದ್ಯೋಗ ಲಭ್ಯತೆಯ ವಿವರಗಳು ಬಳಕೆದಾರನ ಮಿಂಚಂಚೆಯ ಇನ್ಬಾಕ್ಸಿಗೆ ಬರುತ್ತದೆ.ಮಾತ್ರವಲ್ಲ ಉದ್ಯೋಗವನ್ನು ಸ್ಥಳ,ಸಂಬಳ ಮತ್ತು ಹುದ್ದೆಯ ಅಧಾರದಲ್ಲಿ ಆಯ್ದುಕೊಳ್ಳಲೂ ಸಾಧ್ಯವಾಗಲಿದೆ.
Udayavani
*ಅಶೋಕ್ಕುಮಾರ್ ಎ