ಏಸುಕ್ರಿಸ್ತ

ಏಸುಕ್ರಿಸ್ತ

ಕವನ

ಏಸುಕ್ರಿಸ್ತ

ವಿಶ್ವ ಶ್ರೇಷ್ಠ ಗಾರುಡಿಗ ಮಮತೆಯೊಡಲ ಏಸು ಅವ
ಜಗದ ಅಧಿಕ ಜನರ ಮನೆಯ ಮನದ ದೈವವಾದವ ||ಪ||

ದಯೆಯ ಪ್ರೀತಿ ಅಂತರಾಳ ಕೋಪ ತೋರದಾತನು
ಆಸೆಗೊಂಡು ಎಲ್ಲರನ್ನೂ ಸೆಳೆದುಕೊಂಬನಾತನು
ಕರುಣೆ ನೋಟ ಕಣ್ಣ ತುಂಬಿ ಕಾಣುವಾತನಾಸರೆ
ಸೂರ್ಯ ತಾನು ಬೆಳಗಿದಾಗ ಅರಳಿದಂತೆ ತಾವರೆ  ||೧||

ಗಗನ ಚುಂಬಿಯಾದ ಕೀರ್ತಿ ತ್ಯ್ಯಾಗ ಶೀಲ ಕ್ರಿಸ್ತಗೆ
ಶತ ಶತ ಶತಮಾನದಿಂದ ಕೊಟ್ಟುದಲ್ಲ ಈ ಧರೆ
ಎಂಥ ಮೋಡಿಗಾರನಯ್ಯಾ ಭೂಮಂಡಲ ವಿಕ್ರಮಿ
ಕೋಪವಿರದೆ ತಾಪಗೊಳದೆ ಗಳಿಕೆಯಾಯಿತೀಪರಿ ||೨||

ಎಲ್ಲಿ ಹುಡುಕಬೇಕು ಈಗ ನಿನ್ನ ಚರ್ಚಿನಲ್ಲೋ
ಇಲ್ಲ ಅಂಧಾಭಿಮಾನ ಪೂರ್ಣ ಚರ್ಚೆಯಲ್ಲೋ
ಸತ್ಪ್ರೀತಿಯ ಹೃದಯಾಳಕೆ ನೀನು ಸದಾಲಭ್ಯ
ಕರುಣಾಳುವೆ ನಿನ್ನನಲ್ಲಿ ಕಾಣುವವರಲಭ್ಯ  ||೩||

Comments