ಐತಿಹಾಸಿಕ ಚಿತ್ರದುರ್ಗ...
ಕವನ
ಕರ್ನಾಟಕದ ರಾಜ್ಯದಲ್ಲಿ
ಚಿತ್ರದುರ್ಗವೊಂದು ಇರುವುದು ಇಲ್ಲಿ
ಕೋಟೆ ಕಟ್ಟಿದ ರಾಜರು ಇಲ್ಲಿ
ಪಾಳೇಗಾರರು ಆಳಿದರಿಲ್ಲಿ
ಬಿಚ್ಚುಗತ್ತಿ ಭರಮಣ್ಣ ನಾಯಕ
ದಳವಾಯಿ ಮುದ್ದಣ್ಣ ಅಮರಳಾದ
ವೀರವನಿತೆ ಓಬವ್ವ ನಾಡಿಗೆ ಕೀರ್ತಿ ತಂದನು
ಮದಕರಿ ನಾಯಕ
ಆಳಿ ಮೆರೆದರು ಇತಿಹಾಸ ಬರೆದರು
ಥಳುಕಿನ ವೆಂಕಣ್ಣಯ್ಯ ತ. ರಾ. ಸುಬ್ಬರಾಯರು
ಬರೆದರು ಗತ ವೈಭವವ "ದುರ್ಗಾಸ್ತಮಾನ"ದಲ್ಲಿ
ಮುರುಘ ರಾಜೇಂದ್ರರು ಮಠವ ಕಟ್ಟಿದರಿಲ್ಲಿ
ತಾಯಿ ಉಚ್ಛಂಗಿಯ ಏಕನಾಥೇಶ್ವರಿಯ ಆಶೀರ್ವಾದದಲ್ಲಿ
ಮುರುಘ ಮಠವು ವಿಧ್ಯಾ ಕಾಶಿಯು
ಮೊಳಕಾಲ್ಮುರು ರೇಶಿಮೆ ತಾಣವು
ಜೋಗಿಮಟ್ಟಿ, ಚಂದ್ರವಳ್ಳಿ ಪ್ರವಾಸಿ ತಾಣವು
ಕಲ್ಲು ಬಂಡೆ ಗುಡ್ಡಗಳ ನಾಡಿದು
ಕೋಟೆ ನಾಡು ಸಿದ್ದರಬೀಡು
-ಎಸ್ ನಾಗರತ್ನ ಚಿತ್ರದುರ್ಗ
ಚಿತ್ರ ಕೃಪೆ: ಇಂಟರ್ನೆಟ್
ಚಿತ್ರ್