ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

ಐತಿಹಾಸಿಕ ಬೀಜಿಂಗ್ ಮಹಾಕ್ರೀಡಾಕೂಟ, ನಡೆಸಿಕೊಟ್ಟ, ’ ಬೀಜಿಂಗ್ ಒಲಂಪಿಕ್ಸ್”, ವಿಧ್ಯುಕ್ತವಾಗಿ ಚಾಲನೆಯಾಯಿತು !

ಬರಹ

ಐತಿಹಾಸಿಕ ೨೯ ನೇ ಸಮ್ಮರ್ ಒಲಿಂಪಿಕ್ ಮಹಾಕ್ರೀಡಾಕೂಟಕ್ಕೆ ಚೀನಾ ಪ್ರಧಾನಿ ಜಿಂಟಾವೋ ವಿಧ್ಯುಕ್ತ ಚಾಲನೆ ನೀಡಿದರು. ಇಂದು ರಾತ್ರಿ ೮ ಗಂಟೆಗೆ(ಚೀನಾ ಕಾಲಮಾನ ಪ್ರಕಾರ) (ಭಾರತದ ಕಾಲಮಾನದ ಪ್ರಕಾರ, ಸಾ. ೫-೪೫ ಕ್ಕೆ)ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು. ಶ್ರೀಮಂತ ನಾಗರಿಕತೆಯನ್ನು ಹೊಂದಿರುವ ಹಾಗೂ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿರುವ ಜೀನಾದ ರಾಜಧಾನಿ ಬೀಜಿಂಗ್ ನಲ್ಲಿ ಏರ್ಪಡಿಸಲಾಗಿರುವ ವರ್ಣರಂಜಿತ ಅದ್ಧೂರಿಯ ಉದ್ಘಾಟನೆ ಸಮಾರಂಭದಲ್ಲಿ ದೇಶ ವಿದೇಶದ ಅನೇಕ ಪ್ರಮುಖರು ಭಾಗವಹಿಸಿದ್ದರು. ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್, ಬ್ರಿಟನ್ ಪ್ರಧಾನಿ ಬ್ರೌನ್, ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟೀನ್, ಭಾರತದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂತಾದ ಗಣ್ಯರು ವರ್ಣರಂಜಿತ ಕಾರ್ಯಕ್ರಮವನ್ನು ವೀಕ್ಷಿಸಿದರು. ೨೦೦೮ ರ ಆಗಸ್ಟ್, ೮ ರಂದು, ರಾತ್ರಿ, ಚೈನದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ಒಂದೇ ಜಗತ್ತು, ಒಂದೇ , ಕನಸು' ಅಧಿಕೃತ ಧ್ಯೇಯವಾಕ್ಯವನ್ನು ಸಾರಲಾಯಿತು. ಚೀನಾದ ಖ್ಯಾತ ಗಾಯಕ, ’ಲ್ಯೂ” ಹಾನ್ ಮತ್ತು ಬ್ರಿಟನ್ ನ ಖ್ಯಾತ , ಗಾಯಕಿ ’ಸರಹಾ ಬ್ರೈಟ್ ಮ್ಯಾನ್, ’ ಒಲಿಂಪಿಕ್ಸ್ ಧ್ಯೇಯ ಗೀತೆಗಳನ್ನು ಹಾಡಿದರು. ಬೀಜಿಂಗ್ ಒಲಂಪಿಕ್ಸ್ ಅಧಿಕೃತ ಚಾಲನೆಗೂ ಮೊದಲು ಸಂಜೆ ೫-೪೫ ರಿಂದ ೭ಘಂಟೆಯವರೆಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ೭.೫೬ ರಿಂದ ಕ್ಷಣಗಣನೆ ಆರಂಭವಾಗಿ, ಸರಿಯಾಗಿ ೮ ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಂಡಿತು, ರಾತ್ರಿ ೧೧-೩೦ ರ ವರೆಗೆ ಸಾಂಸ್ಕೃತಿಕ ನಡೆಯಲಿದೆ. ಸ್ವಾಗತ ಸಮಾರಂಭ, ಒಲಿಂಪಿಕ್ ರಿಂಗ್ ಪ್ರದರ್ಶನ, ರಾಷ್ಟ್ರೀಯ ಧ್ವಜಾರೋಹಣ, ರಾಷ್ಟ್ರಗೀತೆ ಹಾಡುವುದು ಈ ಕಾರ್ಯಕ್ರಮಗಳು ಕೇವಲ ಕೆಲವೇ ನಿಮಿಷಗಳಲ್ಲಿ ಮುಗಿದವು. ನಂತರ ಒಂದು ಗಂಟೆ ನಡೆದ ಕಾರ್ಯಕ್ರಮದಲ್ಲಿ ’ಆಧುನಿಕ ಹಾಗೂ ಪ್ರಾಚೀನ ಚೀನಾದ ಸಾಂಸ್ಕ್ರತಿಕ ಲೋಕ,’ ಚೀನಾ ನಾಗರಿಕತೆಯನ್ನು ಸಾರುವ,’ ತೈಲ ವರ್ಣ ಚಿತ್ರಗಳಪ್ರದರ್ಶನ ’, ಹಾಗೂ ’ಆಧುನಿಕ ಸಾಂಸ್ಕ್ರತಿಕಲೋಕ ’ ಪ್ರೇಕ್ಷಕರನ್ನು ರಂಜಿಸಿದವು. ಸುಮಾರು ೧೫,೦೦೦ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೀಜಿಂಗ್ ನಲ್ಲಿ ನಡೆಯಲಿರುವ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮಗಳನ್ನು, ಡಿಡಿ ಸ್ಪೋರ್ಟ್ಸ್ ನಲ್ಲಿ ಹಾಗೂ ಡಿಡಿ ನ್ಯಾಷನಲ್ ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಯಿತು. ಚೈನದ ಬಳಿಕ ಒಲಿಂಪಿಕ್ ನಲ್ಲಿ ಭಾಗವಹಿಸಲಿರುವ ಹೆಚ್ಚು ಆಟಗಾರರು ಅಮೆರಿಕದವರು. ಈ ಬಾರಿ, ನಮ್ಮ ’ಟ್ರಂಪ್ ಕಾರ್ಡ್,’ ಎಂದು ಹೇಳಿಕೊಂಡು ಹೆಮ್ಮೆಪಡುತ್ತಿದ್ದ, ಹಾಕೀತಂಡ ನ-ಪಾಸಾಗಿ, ಪಂದ್ಯದಿಂದ ಹೊರಗುಳಿದದ್ದು, ನಮ್ಮೆಲ್ಲರಿಗೂ ಕಸಿವಿಸಿ, ಹಾಗೂ ಬೇಸರ ತಂದಿದೆ.

೧. ಗನ್ ಪೌಡರ್ ಆವಿಷ್ಕರ್ತ, ಚೀನಾ ತನ್ನ ಸುಡು-ಮದ್ದು ಪ್ರದರ್ಷನದಲ್ಲಿ, ಸಾಂಕೇತಿಕವಾಗಿ ಗನ್ ಪೌಡರ್ ಬಳಸಿತ್ತು.

೨. ೫೬ ಮಕ್ಕಳು, ತಮ್ಮದೇಶದ ಧ್ವಜವನ್ನು ಬೀಸುತ್ತಾ, ತಮ್ಮರಾಷ್ಟ್ರಗೀತೆಗೆ ದನಿಗೂಡಿಸಿದರು. ೫೬ ಜನಾಂಗಗಳು ಚೈನಾದೇಶದಲ್ಲಿವೆ.

೩. ಚೈನದ ಕನ್ ಫ್ಯೂಷಿಯಸ್ ರವರ ಸಂದೇಶ ಸಾರುವ ಗೀತೆ, " ದೂರದ ಮಿತ್ರರು ಬಂದಿಹರು ; ನಮಗೆಷ್ಟು ಸಂಭ್ರಮ " ಹಾಡಿ ಎಲ್ಲರನ್ನೂ ಸ್ವಾಗತಮಾಡಿದರು.

೪. ಲೇಸರ್ ಬೆಳಕಿನ ಚಿತ್ತಾರದ ಸ್ವಾಗತಗೀತೆ, ಯನ್ನು ಫೌ ಎಂಬ ಅವರ ಪ್ರಾಚೀನ ವಾದ್ಯವೃಂದದ ಜೊತೆ ನುಡಿಸಿದರು. ೨೦೦೮ ರ ಒಲಂಪಿಕ್ ಕ್ರೀಡೆ, ೨೦೦೮ ಜನ ಫೌ ಪಕ್ಕ-ವಾದ್ಯಗಾರರಿಂದ, ೨೦೦೮ ಕ್ರೀಡಾಳುಗಳ ಸಹಾಯದಿಂದ ಪ್ರದರ್ಶನ ಕಂಡಿತು.

-ಕೃಪೆ : ದಟ್ಸ್ ಕನ್ನಡ ವಾರ್ತೆ, ಹಾಗೂ ಸುದ್ದಿಮಾಧ್ಯಮಗಳಿಂದ.