ಒಂಟಿತನ

ಒಂಟಿತನ

ಕವನ

ದೇವರು ನೀಡಿದ ಶಿಕ್ಷೆ ಎನ್ನಲ್ಲೆ

ದೇವನು ಮಾಡುವ ಪರೀಕ್ಷೆ ಎನ್ನಲ್ಲೆ

 

ಮಾತೆಯ ಮಮತೆ ಸಿಗಲಿಲ್ಲ

ಪಿತನ ಪ್ರೇಮವೂ ಸಿಗಲಿಲ್ಲ

ನಾನು ಕಣ್ತೆರೆಯುವ ಮುನ್ನ

ಆ ದೇವ್ರು ನೀಡಿದ ನನಗೆ ಒಂಟಿತನ

!!ದೇವರು ನೀಡಿದ ಶಿಕ್ಷೆ ಎನ್ನಲ್ಲೆ!!

 

ಹರೆಯದಲ್ಲಿ ನೀಡಿದ ಮನಮೆಚ್ಚಿದವರನ್ನು

ಸಂಸಾರದಲ್ಲಿ ಜೊತೆಗೆ ಸಾಗುವ ಹಕ್ಕಿಯನ್ನು

ಮಧ್ಯದಲ್ಲಿ ತಂದಿಟ್ಟ ಮರಣ ಶಾಸನವನ್ನ

ಒಂಟಿ ಜೀವಕ್ಕೆ ಉಳಿದಿದ್ದು ಬರಿ ಒಂಟಿತನ

!!ದೇವರು ನೀಡಿದ ಶಿಕ್ಷೆ ಎನ್ನಲ್ಲೆ!!

 

ಹೆತ್ತವರು ಕೇಳಿ ಸಂಭ್ರಮ ಪಡುವ ಸಮಯ

ಮಗುವು ಅಮ್ಮ ಎಂದು ಅಳುವ ವಿಷಯ

ಹೆತ್ತಮಗು ಬೆಳೆದು ಬದುಕಿ ಬಿಟ್ಟು ಹೋರಟರೆ ಹೆತ್ತವರನ್ನ 

ಹೆತ್ತವರ ಭಾರವಾದ ಜೀವನಕ್ಕೆ ಸಿಕ್ಕಿದ್ದು ಒಂಟಿತನ

!!ದೇವರು ನೀಡಿದ ಶಿಕ್ಷೆ ಎನ್ನಲ್ಲೆ!!

 

ಮಾತಾಪಿತರ ಅಕಾಲಿಕ ಅಗಲಿಕೆ ಅನಾಥ ಮಕ್ಕಳ ಜೀವಕ್ಕೆ ಒಂಟಿತನ

ಮಕ್ಕಳ ನಿರ್ಲಕ್ಷ್ಯದ ತೇಗಳಿಕೆ ಹೆತ್ತು ಹೊತ್ತು ಸಾಕಿದ ಜೀವಕ್ಕೆ ಒಂಟಿತನ

ಪತಿಯ ಗೈರು ಹಾಜರಿಯು ಸತಿಯ ಜೀವಕ್ಕೆ ಒಂಟಿತನ

ಸತಿಯ ಸಾವಿನ ಕ್ಷಣವೂ ಪತಿಯ ಜೀವಕ್ಕೆ ಒಂಟಿತನ

!!ದೇವರು ನೀಡಿದ ಶಿಕ್ಷೆ ಎನ್ನಲ್ಲೆ!!

 

ಬಂಧುಗಳು ಇಲ್ಲದ ಬದುಕು ಒಂಟಿತನ

ಸ್ನೇಹವು ಇಲ್ಲದ ಮನಸ್ಸಿಗೆ ಒಂಟಿತನ

ಪ್ರೀತಿ ಇಲ್ಲದ ಜೀವಕ್ಕೆ ಒಂಟಿತನ

ವಿಶ್ವಾಸ ಇಲ್ಲದ ವ್ಯಕ್ತಿಯ ವ್ಯಕ್ತಿತ್ವಕ್ಕೆ ಒಂಟಿತನ

!!ದೇವರು ನೀಡಿದ ಶಿಕ್ಷೆ ಎನ್ನಲ್ಲೆ!!

 

-ತುಂಬೇನಹಳ್ಳಿ ಕಿರಣ್ ರಾಜು ಎನ್

ಚಿತ್ರ: ಇಂಟರ್ನೆಟ್ ತಾಣ

 

ಚಿತ್ರ್