ಒಂಟಿ ನಾನು ಎಂಬ ಭಾವ

ಒಂಟಿ ನಾನು ಎಂಬ ಭಾವ

ಬರಹ

ಒಂಟಿ ನಾನು ಎಂಬ ಭಾವ
ಹಿಂಡುತಿಹುದು ನನ್ನ ಜೀವ
ಬಿಕ್ಕುತಿಹುದು ನನ್ನ ಬದುಕು ಕಾರ್ಮೋಡ ಕವಿದು
ಬಿಕ್ಕುತಿಹುದು ನನ್ನ ಬದುಕು ಕಾರ್ಮೋಡ ಕವಿದು

ಸೋ ಎಂದು ಸುರಿದ ಮಳೆಯಲ್ಲಿ ನೆನೆವಾಗ
ಕಣ್ಣ ಹನಿಯು ಮಳೆಹನಿಯಾಗಿ ತುಟಿಮೇಲೆ ಬಂದಾಗ
ನಿನ್ನ ನೆನಪು ಮತ್ತೆ ಕಾಡುತಿಹುದು
ಎನ್ನ ಮನವು ಮತ್ತೆ ಕೇಳುತಿಹುದು
ನಿನ್ನ ಹೆಸರು... ತುಟಿಮೇಲೆ ಮತ್ತೆ ಬಂದಿಹುದು

ನಿನ್ನ ಮಂತ್ರ ಆರಿದ ಹೋಮವಾಗಿ
ನನ್ನ ಪತ್ರ ರಕ್ತದೊಕುಳಿಯಾಗಿ
ಹೃದಯ ವೀಣೆ ಮತ್ತೆ ಮೀಟಿದೆ
ಮೊಗ್ಗು ಒಂದು ಬಾಡಿಹೋಗಿದೆ
ನಿನ್ನ ನೆನಪಾಗಿ... ಕಣ್ಣೀರು ಮತ್ತೆ ಹರೆಯುತಿದೆ

ಕಾಣದ ಹೂನಗೆಗೆ
ಕೇಳದ ಮೌನದ ಮಾತಿಗೆ
ಹೃದಯದ ಸ್ವಾಗತ