ಒಂಟಿ ಹೃದಯದ ..ಒಂಟಿ ಹೂವೂ
******
ಸಮಯ ಸಿಕ್ಕಿದೆ ಒಲವ
ನಿವೇದಿಸಲು ಆದರೆ,
ಹೃದಯ ಸಾಲದು
ಇನ್ನೊಂದು ಪ್ರೀತಿಭರಿಸಲು
ಪ್ರೀತಿಗೆ ಹಲವು ಮುಖ
ಒಮ್ಮೆ ಅವಳಲ್ಲಿ ಇನ್ನೊಮ್ಮೆ
ಇವಳಲ್ಲಿ ಕಾಣಿಸುತ್ತದೆ
ಅವಳಿಗೂ ಅಷ್ಟೆ ಒಮ್ಮೆ ನನ್ನಲ್ಲಿ
ಇನ್ನೊಮ್ಮೆ ಅವನಲ್ಲಿ
******
ದೂರದಲ್ಲಿ ಕೋಗಿಲೆ ಕೂಗು
ಹತ್ತಿರದಲ್ಲಿ ಮಕ್ಕಳ ಕಲರವ
ಆದ್ರೂ ಮೌನರಾಗ
ಕಾಡಿನ ಅಂಚಿನಲ್ಲಿ ನಿಂತಾಗ
ಅನುಭವಕ್ಕೆ ಬರೊ ಹಾಗೆ ಆ
ಒಂದು ಕೂಗು
ಕಾಡು ಮರೆಯಾಗುತ್ತಿದೆ
ನಾಡು ಬೆಳೆಯುತ್ತಿದೆ ಕಾಡಿನೊಳಗಿನ
ಆ ಅನುಭವ ಈಗ ಇಲ್ಲದಾಗಿದೆ
ಕೋಗಿಲೆ ಕೂಗುತ್ತಿದೆ ಮಕ್ಕಳ
ಆಟವಾಡುತ್ತಿದ್ದಾರೆ. ದೂರದ ಆ
ಒಂಟಿ ಮರದ ಬಳಿ...
*******
ಹೂ ಒಂದೇ ಪರಿಮಳ ಒಂದೆ
ನಾ ಕಂಡ ಆ ಪುಷ್ಟ ಬೇರೆ ಯಾರು
ಅಲ್ಲ ಅದು ನೀನೇ ಒಂಟಿ ತೋಟದ
ಒಂಟು ಹೂ
ಮಾಲಿ ಇಲ್ಲ. ಬೇಲಿನೂ ಇಲ್ಲ.
ಕಾಡ ಮಲ್ಲಿಗೆಯಂತೆ ಸೊಂಪಾಗಿ
ಅಂಗಳದಲ್ಲಿ ಬೆಳೆದವಳು ನೀನು.
ನಾ ನೋಡಿದೆ ನಿನ್ನ, ಪೋಷಿಸೋ
ಪ್ರಯತ್ನ ಮಾಡಿದೆ. ನೀನೋ ಮನ
ಬಂದಂತೆ ಬೆಳೆದವಳು. ಬೆಳದು ಮನೆ
ಮಾಳಿಗೆನೂ ಏರಿದೆ.
ಅಮ್ಮ ನಿನ್ನ ಪ್ರೀತಿಸಿದಗಳು.
ಯಾಕೋ ನೀನೇ ಬಾಡಿ ಹೋದೆ.
ನಾನೂ ಕಮರಿ ಹೋಗೋ ಪರಿವೇ
ಇಲ್ಲದೇ
*********
ಅವಳು ಹೂವಾದಳು.
ನಾನು ಜೇನಾದೆ ತುಂಬಿಯ
ಫಲದಿಂದ
ನಮ್ಮಲ್ಲಿ ಒಲವು ಶುರುವಾಗಿದ್ದು
ಅವಳಿಂದಲೇ. ನನಗೆ ಅದು ತಡವಾಗಿ
ತಾಕಿತು ಅಷ್ಟೇ.
ನಾನೂ ದಿನಗಳದಂತೆ ಹೂವಾದೆ,
ನನ್ನ ಪ್ರೀತಿ ತುಂಬಿಕೊಂಡು ಮಲಗಿದ
ಅವಳ ಗೋರಿ ಮೇಲೆ..
-ರೇವನ್
Comments
ಉ: ಒಂಟಿ ಹೃದಯದ ..ಒಂಟಿ ಹೂವೂ