*ಒಂದಾಗುವುದೆಂದು...?!*

*ಒಂದಾಗುವುದೆಂದು...?!*

ಕವನ

ಅನ್ಯಾಯ ಪ್ರತಿಭಟಿಸೊ

ಕೈಗಳಿಗೆ ಕೋಳವಿದೆ

ನಡುವೆ ಅನ್ಯಾಯ

ಗಹಗಹಿಸಿ ನಗುವುದಿಂದು...!

 

ಕಣ್ಣ ಮುಂದೆಯೆ ನರರು

ನರಕವನು ಕಾಣುತಿರೆ

ತುಟಿ ತೆರೆಯಲಾರದೆಯೆ

ಮೂಕನಾಗಿರುವೆ...!

 

ಕಂಬಿಗಳ ನಡುವಿನಲಿ

ಬಲವುಳ್ಳ ತೋಳಿಹುದು

ಬಲವೆಲ್ಲ ಹುದುಗಿಹುದು

ಬಂಧನದ ನಡುವೆ...!

 

ಅಟ್ಟ ಹಾಸದ ಕೇಕೆ

ವಿಜೃಂಭಿಸಿ ಮೆರೆಯುತಿರೆ

ಅಸಹಾಯಕವು ಈ ನನ್ನ

ಕೈಗಳೆರಡು...!

 

ಹಣವುಳ್ಳ ದರ್ಪದಲಿ

ಮೆರೆಯುತಿರೆ ಜಗವೆಲ್ಲ

ಬಣಗುಡುತಲಿಹುದಲ್ಲಿ

ನ್ಯಾಯ ಬಿಂದು...!

 

ಮುಷ್ಟಿ ಬಿಗಿ ಹಿಡಿಯುತಲಿ

ಭ್ರಷ್ಟರನು ಹೊಡೆಯುವರೆ

ಸಮಷ್ಟಿ ಒಂದಾಗುವುದು

ಎಂದೊ ಅರಿಯೆ...?!

-*ಜನಾರ್ದನ ದುರ್ಗ*

 

ಚಿತ್ರ್