ಒಂದಾನೊಂದು ಸಂಜೆ!
ಕವನ
ಮೈ ಮುರಿದು, ಕಣ್ಣ ಹೊಡೆದು
ಮಾಯವಾಗುವ ಕಾವ್ಯನಾಯಕಿ ಮೋಡಗಳು
ಎರಡು ಗುಟಿಕಿನ ವೀಕೆಂಡ್ ನಶಾ
ಬಹಳ ದಿನಗಳ ಮೇಲೆ ಮಾತನಾಡುತ್ತಿರುವ ಇನ್ಫಾಂಟ್ ಸಾರೋ,
ಬಲಾದುರ್ ಪಯಣವನ್ನ ಹಾಳುಮಾಡಿ
ಆತ್ಮಹತ್ಯ ಮಾಡಿಕೊ ಎಂದು ಹೆದರಿಸುತ್ತಾ..
ಹನಿ ಉದರದ ಆಗಸದಿಂದ
ಡಬ್ಬಾನಲ್ಲಿ ಕಲ್ಲು ಆಡಿಸಿದ ಸಪ್ಪಳ
ದಾಹದ ಮೇಲೆ ಕರುಣ ತೋರದ ನಿಷ್ಫಲ ಋತು
"ತಪ್ಪದೆ ಬಾ" ಎಂದು ಆಣಿ ಹಾಕಿಸಿಕೊಂಡ ಗೆಳೆಯನ
ಮನೆ ಬಾಗಿಲಿಗೆ
ಹೀಯಾಳಿಸುತ್ತಾ
ಅಪನಂಬಿಕೆಯ ಬೀಗಮುದ್ರೆ!