ಒಂದಿಷ್ಟು ಝೆನ್ ಕಥೆಗಳು

ಒಂದಿಷ್ಟು ಝೆನ್ ಕಥೆಗಳು

ನಗೆ ಹಾಗೂ ಜ್ಞಾನೋದಯ

ಒಂದು ಝೆನ್ ಆಶ್ರಮದಲ್ಲಿ ಅನೇಕ ಶಿಷ್ಯಂದಿರು ತಮ್ಮ ಗುರುಗಳಿಂದ ಕಲಿಯಲು ಒಟ್ಟುಗೂಡಿದ್ದರು. ಎಲ್ಲ ಶಿಷ್ಯರಲ್ಲಿ, ಹೊಸದಾಗಿ ಬಂದ ಒಬ್ಬ ಶಿಷ್ಯನು ಹೆಚ್ಚು ಸಕ್ರಿಯನಾಗಿದ್ದನು. ಗುರುಗಳು ಏನನ್ನಾದರೂ ಬಯಸಿದಲ್ಲಿ, ಎಲ್ಲರಿಗಿಂತ ಮುಂಚಿತವಾಗಿ ತಲುಪುತ್ತಿದ್ದನು. ಗುರುಗಳು ನೀಡಿದ ಎಲ್ಲ ಕೆಲಸಗಳನ್ನೂ ಬೇಗ ಮಾಡುತ್ತಿದ್ದನು. ಅವನು ರಾತ್ರಿ ಎಲ್ಲರಿಗಿಂತ ತಡವಾಗಿ ಮಲಗುತ್ತಿದ್ದು, ಮುಂಜಾನೆ ಮೊದಲು ಎದ್ದು ದಿನನಿತ್ಯದ ಕೆಲಸಗಳಲ್ಲಿ ತೊಡಗುತ್ತಿದ್ದನು. ಇದನ್ನು ಗಮನಿಸಿದ ಗುರುಗಳು ಒಂದು ದಿನ ಅವನಿಗೆ “ಇಲ್ಲಿಗೆ ಬರುವ ಮುನ್ನ ಎಲ್ಲಿದ್ದೆ?” ಎಂದು ಕೇಳಿದರು. ಅದಕ್ಕೆ ಆ ಶಿಷ್ಯ “ ಇಲ್ಲಿಗೆ ಬರುವ ಮುನ್ನ ‘ಶಲಿಂಗ್ ಕ್ಯೂ’ ಅವರ ಬಳಿ ಅಧ್ಯಯನ ಮಾಡುತಿದ್ದೆ” ಎಂದು ಉತ್ತರಿಸಿದ.

“ಓ, ಶಲಿಂಗ್ ಕ್ಯೂ! ನಾನು ಅವರ ಬಗ್ಗೆ ಓದಿದ್ದೇನೆ. ಒಮ್ಮೆ ಸೇತುವೆಯ ಮೇಲೆ ನಡೆಯುತ್ತಿರುವಾಗ, ಅವರು ಜಾರಿ ನೀರಿನಲ್ಲಿ ಬೀಳುತ್ತಾರೆ ಅಲ್ಲವೇ?” ಗುರುಗಳು ಕೇಳಿದರು.

“ಹೌದು ಗುರುಗಳೆ” ಶಿಷ್ಯ ಉತ್ತರಿಸಿದ.

“ಆ ಸನ್ನಿವೇಶದಲ್ಲೇ ಅವರಿಗೆ ಜ್ಞಾನೋದಯವಾಯಿತು ಎಂಬುದು ನಿನಗೆ ಗೊತ್ತಾ?”

“ಅದರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಜ್ಞಾನೋದಯದ ಬಗ್ಗೆ ಒಂದು ಕವನ ಬರೆದಿದ್ದಾರೆ.”

“ಆ ಕವನ ನೆನಪಿದೆಯಾ?”

“ಹೌದು ಗುರುಗಳೆ ನೆನಪಿದೆ.”

“ಹಾಗಾದರೆ ಹೇಳು.”

"ನಾನೊಂದು ಮುತ್ತನ್ನು ಕಂಡೆ

ಧೂಳು ಮತ್ತು ಕೊಳಕು ಅದರ ಹೊಳಪನ್ನು ಬಹಳ ಕಾಲ ಆವರಿಸಿತ್ತು.

ಈಗ ಧೂಳು ಹಾರಿಹೋಗಿದೆ. ಕೊಳಕೂ ಹೋಗಿದೆ.

ಪ್ರಕಾಶ ಹುಟ್ಟಿದೆ.

ಪರ್ವತಗಳು ಮತ್ತು ನದಿಗಳು ಅದರ ಬೆಳಕಿನಿಂದ ಬೆಳಗಿವೆ."

ಆ ಕವನವನ್ನು ಹೇಳಿ ಮುಗಿಸಿದ ಮರುಕ್ಷಣವೇ, ಗುರುಗಳು ಜೋರಾಗಿ ನಕ್ಕುಬಿಟ್ಟರು.

ಶಿಷ್ಯನಿಗೆ ಗೊಂದಲವಾಯಿತು.”ಈ ಕವನದಲ್ಲಿ ನಗುವಂತಹ ವಿಷಯವೇನಿದೆ? ಗುರುಗಳು ಏಕೆ ನಕ್ಕರು?”. ಎಷ್ಟೇ ಯೋಚಿಸಿದರೂ ಕೂಡ ಅವನಿಗೆ ಉತ್ತರ ದೊರಕಲಿಲ್ಲ. ಆ ರಾತ್ರಿ ಅವನ ನಿದ್ರೆ ಹಾಳಾಯಿತು. ಮರುದಿನ ಮುಂಜಾನೆ ಏಳುತ್ತಲೇ ಗುರುಗಳನ್ನು ಹುಡುಕುತ್ತಾ ಬಂದು ಕೇಳಿದ.

“ಗುರುಗಳೇ, ನಿನ್ನೆ ಆ ಕವಿತೆಯನ್ನು ನಾನು ನಿಮಗೆ ಹೇಳಿದಾಗ ನೀವು ಯಾಕೆ ನಕ್ಕಿದ್ದು?"

ಗುರುಗಳು "ನೀನು ಕೋಡಂಗಿಗಿಂತ ಕಡೆ" ಎಂದರು.

"ಏನು?"

"ಹೌದು, ಕೋಡಂಗಿಗಳು ಇತರರನ್ನು ನಗಿಸುತ್ತಾರೆ, ಆದರೆ ಯಾರಾದರೂ ನಗುತ್ತಿದ್ದರೆ ನೀನು ಭಯಭೀತರಾಗುತ್ತೀಯ". ಇದನ್ನು ಹೇಳುತ್ತಾ ಅವರು ಮತ್ತೆ ಜೋರಾಗಿ ನಗಲು ಪ್ರಾರಂಭಿಸಿದರು.

ಗುರುಗಳ ಆ ನಗುವಿನಿಂದಾಗಿ ಶಿಷ್ಯನಿಗೆ ಜ್ಞಾನೋದಯವಾಯಿತು. 

***

ಜೀವಿತಾವಧಿಯಲ್ಲಿ ಒಂದು ನಗು

ಭೂಮಿಯ ಮೇಲಿನ ತನ್ನ ಕೊನೆಯ ದಿನದವರೆಗೂ ಮೊಕುಗೆನ್ ಗೆ ಎಂದಿಗೂ ನಗುವುದು ತಿಳಿದಿರಲಿಲ್ಲ. ಅವನ ಸಮಯವು ಕಳೆದುಹೋದಾಗ ಅವನು ತನ್ನ ನಿಷ್ಠಾವಂತರಿಗೆ ಹೇಳಿದನು: "ನೀವು ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ನನ್ನ ಅಡಿಯಲ್ಲಿ ಅಧ್ಯಯನ ಮಾಡಿದ್ದೀರಿ. ಝೆನ್ ಬಗ್ಗೆ ನಿಮ್ಮ ನಿಜವಾದ ವ್ಯಾಖ್ಯಾನವನ್ನು ನನಗೆ ತೋರಿಸಿ. ಇದನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಪಡಿಸುವವರು ನನ್ನ ಉತ್ತರಾಧಿಕಾರಿಯಾಗುತ್ತಾರೆ ಮತ್ತು ನನ್ನ ನಿಲುವಂಗಿ ಮತ್ತು ಬಟ್ಟಲನ್ನು ಸ್ವೀಕರಿಸುತ್ತಾರೆ. "

ಎಲ್ಲರೂ ಮೊಕುಗೆನ್ ನ ತೀವ್ರ ಮುಖವನ್ನು ನೋಡಿದರು, ಆದರೆ ಯಾರೂ ಉತ್ತರಿಸಲಿಲ್ಲ.

ಎಂಚೋ ಎಂಬಾತ ತನ್ನ ಗುರುವಿನ ಬಳಿ ಬಹಳ ಹೊತ್ತು ಇದ್ದ ಶಿಷ್ಯ, ಹಾಸಿಗೆಯ ಪಕ್ಕದಲ್ಲಿ ತೆರಳಿದನು. ಅವರು ಔಷಧದ ಕಪ್ ಅನ್ನು ಕೆಲವು ಇಂಚುಗಳಷ್ಟು ಮುಂದಕ್ಕೆ ತಳ್ಳಿದರು. ಅದು ಅವನ ಆಜ್ಞೆಗೆ ಉತ್ತರವಾಗಿತ್ತು.

ಗುರುಗಳ ಮುಖ ಇನ್ನಷ್ಟು ತೀವ್ರವಾಯಿತು. "ನಿಮಗೆ ಅರ್ಥವಾಗಿದೆಯೇ?" ಅವನು ಕೇಳಿದ.

ಎಂಕೋ ಕೈ ಚಾಚಿ ಕಪ್ ಅನ್ನು ಮತ್ತೆ ಹಿಂದಕ್ಕೆ ಸರಿಸಿದ.

ಮೊಕುಗೆನ್ ನ ವೈಶಿಷ್ಟ್ಯಗಳ ಮೇಲೆ ಸುಂದರವಾದ ನಗು ಮುರಿಯಿತು. "ನೀವು ರಾಸ್ಕಲ್," ಅವರು ಎಂಚೋಗೆ ಹೇಳಿದರು. "ನೀವು ನನ್ನೊಂದಿಗೆ ಹತ್ತು ವರ್ಷ ಕೆಲಸ ಮಾಡಿದ್ದೀರಿ ಮತ್ತು ನನ್ನ ಇಡೀ ದೇಹವನ್ನು ಇನ್ನೂ ನೋಡಿಲ್ಲ. ನಿಲುವಂಗಿಯನ್ನು ತೆಗೆದುಕೊಂಡು ಬೌಲ್ ತೆಗೆದುಕೊಳ್ಳಿ. ಅವು ನಿಮಗೆ ಸೇರಿವೆ."

***

ಕನಸಿನ ಅರ್ಥ ಬೇರೆಯೇ ಇತ್ತು! 

ಜ್ಞಾನೋದಯಕ್ಕಾಗಿ ಬಹಳ ಹಂಬಲಿಸುತ್ತಿದ್ದ ಒಬ್ಬ ಮನುಷ್ಯನಿಗೆ ಒಂದು ರಾತ್ರಿ ಕನಸು ಬಿತ್ತು. ಕನಸಿನಲ್ಲಿ ಆತ ಜ್ಞಾನವನ್ನು ಹುಡುಕುತ್ತ ಕಾಡಿನಲ್ಲಿ ಓಡಾಡುತ್ತಿದ್ದ.
ಮರುದಿನ ಮುಂಜಾನೆ ಆತ ಆ ಕಾಡನ್ನು ಹುಡುಕುತ್ತ ಹೊರಟ. ದಾರಿಯಲ್ಲಿ ವಿಶ್ರಾಂತಿಗಾಗಿ ಆತ ಒಂದು ಮರದ ಕೆಳಗೆ ಕುಳಿತುಕೊಂಡಾಗ ಹತ್ತಿರದಲ್ಲಿ ಅವನಿಗೆ ಬಂಡೆಯ ಕೆಳಗೆ ಒಂದು ನರಿ ಮಲಗಿರುವುದು ಕಾಣಿಸಿತು. ಆ ನರಿಗೆ ಕಾಲುಗಳಿರಲಿಲ್ಲ. ಕಾಲುಗಳಿಲ್ಲದ ನರಿ ಹೇಗೆ ಬದುಕಬಲ್ಲದು? ಆಹಾರ ಹೇಗೆ ಹುಡುಕಿಕೊಳ್ಳುತ್ತದೆ ಎಂದು ಆ ಮನುಷ್ಯ ವಿಚಾರ ಮಾಡುತ್ತಿರುವಾಗಲೇ ಒಂದು ಆಶ್ಚರ್ಯ ಗಮನಿಸಿದ.

ಒಂದು ಭಾರೀ ಸಿಂಹ, ನರಿಯ ಹತ್ತಿರ ಬಂದು ಮಾಂಸದ ತುಣುಕುಗಳನ್ನು ಎಸೆದು ಹೋಯಿತು. ಈ ಘಟನೆಯನ್ನು ನೋಡುತ್ತಿದ್ದಂತೆಯೇ ಆ ಮನುಷ್ಯನಿಗೆ ಏನೋ ಹೊಳೆದಂತಾಯಿತು. ಭಗವಂತನಿಗೆ ನನ್ನನ್ನು ಪೂರ್ತಿಯಾಗಿ ಸಮರ್ಪಿಸಿಕೊಂಡು ಬಿಟ್ಟರೆ ಸಾಕು, ಅವ ನನ್ನ ಎಲ್ಲ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಾನೆ. ಇದೇ ಮನುಷ್ಯ ಬದುಕಿನ ಯಶಸ್ಸಿನ ಗುಟ್ಟು ಎಂದು ಆತ ಧೃಡವಾಗಿ ನಿಶ್ಚಯ ಮಾಡಿದ.

ಎರಡು ವಾರಗಳ ನಂತರ ಹಸಿವಿನಿಂದ ಬಳಲುತ್ತ, ನರಳುತ್ತ ಮಲಗಿದ್ದ ಆ ಮನುಷ್ಯನಿಗೆ ಇನ್ನೊಂದು ಕನಸು ಬಿತ್ತು. ಕನಸಿನಲ್ಲಿ ಒಂದು ಭಾರಿ ದೊಡ್ಡ ದನಿ ಕೂಗಿಕೊಂಡಿತು,
“ಹುಚ್ಚಾ , ಆ ಕನಸಿನ ಅರ್ಥ ಸಿಂಹದಂತಾಗು ಎಂದು!”

***

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ