ಒಂದಿಷ್ಟು ಮುಕ್ತಕಗಳು...

ಒಂದಿಷ್ಟು ಮುಕ್ತಕಗಳು...

ಕವನ

ಮನೆ ಮಠವ ತೊರೆಯುತಲಿ ತಿರುಗುತಲೆ ಇದ್ದರದು

ತೆನೆ ಬರದು ಮನೆಯೊಳಗೆ ನೀಯೆಂದು ತಿಳಿಯು|

ಬನದಲ್ಲಿ ಕುಳಿತರದು ಸುಖ ಶಾಂತಿ ಲಭಿಸದದು

ಮನವನದಿ ನೀ ನೆಲೆಸು --- ಛಲವಾದಿಯೆ||

*

ಹೆಸರು ಗಳಿಸಲ್ ಏಕೆ ಹೋರಾಡುವಿಯೊ ನೀನು

ಕೆಸರು ಮೆತ್ತಿಸಿಕೊಳ್ಳಬೇಕೇನು ಮುಖದಿ|

ಮುಸುಕಾದ ಬರಹಗಳು ಬೆಳಕನ್ನು ನೀಡುವವೆ

ಕಸಕಿಂತ ಕಡೆಯದುವು --- ಛಲವಾದಿಯೆ||

*

ಗಡಿಗಡಿಗೆ ನೆಮ್ಮದಿಯ ಕಳೆಯುತಲೆ ಸಾಗದಿರಿ

ದಡದಡನೆ ಶಬ್ದವನು ಮಾಡಿದರೆ ಸುಖವೆ

ಹೊಡೆಹೊಡೆದು ತೃಪ್ತಿಯಲಿ ಉಂಡರದು ಫಲಿಸುವುದೆ

ಗುಡುಗುಡುಗೆ ನೆಮ್ಮದಿಯೊ ---ಛಲವಾದಿಯೆ ||

-ಹಾ ಮ ಸತೀಶ ಬೆಂಗಳೂರು

*

ತಿರುಗುತಲಿ ನಡೆಯುತಲಿ ಅಲೆಯುತ್ತ ಸಾಗುತಿರೆ

ಮರುಮರುಗಿ ತನುವನ್ನು ಬಳಲಿಸುತ ನೀನು/

ಕರಗುತಲಿ ಕೊರಗುತಲಿ  ಹಪಹಪಿಸೆ ನೋವಿನೊಳು

ಧರೆಯಲ್ಲಿ ಬೀಳದಿರು- ಕೃಷ್ಣಕಾಂತೆ//

*

ಸಜ್ಜನರ ಸಂಗದಲಿ ಗಂಧದಂತಾಗುತಲಿ

ಮಜ್ಜನದ ಪರಿಮಳವ ಹಬ್ಬಿಸುತ ಸಾಗು/

ಕಜ್ಜವನು ಕೈಗೊಳುತ ನಿಯಮದಲಿ ಬದುಕಿನೊಳ್

ಮಜ್ಜಿಗೆಯ ರುಚಿಯಾಗು-ಕೃಷ್ಣಕಾಂತೆ//

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟನೆಟ್ ತಾಣ

ಚಿತ್ರ್