ಒಂದಿಷ್ಟು ಹನಿಗಳು…
ಹಣದ ಬಿಡ್ಡಿಂಗ್!
ಆಮ್ ಆದ್ಮಿ
ಪಕ್ಷದಿಂದ
ದಿಲ್ಲಿ
ಮಹಿಳೆಯರಿಗೆ-
ಮಾಸಿಕ
ಎರಡು ಸಾವಿರದ..ನೂರು...
ಬಂಪರ್
ಮಹಿಳೆಯರೇ ಬಂಪರ್-
ರಾಜಕೀಯ ಹಣದ
ಬಿಡ್ಡಿಂಗ್ನಲಿ ನೀವೆಲ್ಲಾ
ಹತ್ತಬಹುದು
ಕನಸಿನ ತೇರು!
***
2050ರಲ್ಲಿ....
ಫ್ಲೈಯಿಂಗ್
ಪಾರ್ಟಿ
ಸರ್ಕಾರದಿಂದ-
ಹೆಣ್ಣು ಮಕ್ಕಳಿಗೆ
ವಿಮಾನ ಪ್ರಯಾಣ
ಫ್ರೀ.. ಫ್ರೀ.. ಫ್ರೀ....
ಬ್ರೆಕಿಂಗ್ ನ್ಯೂಸ್-
ಹೆಣ್ಣು ಮಕ್ಕಳೇ ಇಲ್ಲದ
ಕರ್ನಾಟಕ!
ಅವರನು ಹುಡುಕಲು
ಫ್ಲೈಟ್ ಹತ್ತಿದ ಗಂಡಸರು-
ಥ್ರಿಲ್.. ಥ್ರಿಲ್.. ಥ್ರಿಲ್!!
***
ಥಿಯರಿ ಮತ್ತು ಪ್ರಾಕ್ಟಿಕಲ್
ಥಿಯರಿಯ ಜನ-
ಕಷ್ಟಪಟ್ಟು
ಸೃಷ್ಟಿ ರಹಸ್ಯವ
ಕಂಡುಹಿಡಿಯಲು
ಜೀವಮಾನವಿಡೀ
ಕಷ್ಟಪಟ್ಟರೆ...
ಈ ಬುದ್ಧಿವಂತ
ಪ್ರಾಕ್ಟಿಕಲ್ ಜನ
ಮಾತ್ರ ಅದರ-
ಪ್ರಯೋಜನ ಪಡೆದು
ಲಾಭ ಮಾಡಿ
ಸುಖಿಸುತ್ತಿರುವರೇ!?
***
ಪಾಪದ ಹಣ
ಪಾಪದ ಹಣ
ಎಂದು ಹರಿಯಿತೋ-
ಅಂದೇ
ಹುಟ್ಟಿದ
ಈ ಸಮಾಜದಲಿ
ರೌಡಿ...
ಪ್ರಾಮಾಣಿಕವಾಗಿ
ದುಡಿದು
ತಿನ್ನಲು
ಈ ಜನಕೆ-
ಬಂದಿರುವುದೇನೋ
ಧಾಡಿ?
***
ಚಿಮ್ಮಿದ ಚಿಲುಮೆ
ಗಜೇಂದ್ರಗಡದಲ್ಲಿ-
ಅತ್ತೆ-ಸೊಸೆಯರ
ಗೃಹಲಕ್ಷ್ಮಿ ಹಣದಿಂದ
ಜಮೀನಿನಲ್ಲಿ
ಬೋರ್ವೆಲ್-
ಎಂಥಾ ಒಲುಮೆ...
ನೀರು ಚಿಮ್ಮಿದ
ಬೋರ್ವೆಲ್;
ಅತ್ತೆ-ಸೊಸೆಯರ
ಸೌಹಾರ್ದತೆ ಕಂಡ
ಮುಖ್ಯಮಂತ್ರಿಗಳಿಗೆ-
ಸಂತೃಪ್ತಭಾವದ ಚಿಲುಮೆ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
