ಒಂದಿಷ್ಟು ಹನಿಗಳು…
ವಿಶ್ವಮಾನವ ಸಂದೇಶ
ಧರ್ಮವಿರಲಿ
ಅಂತರಂಗದಲಿ;
ಸೌಹಾರ್ದತೆಯಿರಲಿ
ಬಹಿರಂಗದಲಿ
ಅಂತರಂಗ-ಬಹಿರಂಗದ
ಬೆಸುಗೆಯಿರಲಿ...
ಈ ಭೂಮಿ-
ಎಲ್ಲರ ಮನೆ
ಇಲ್ಲಿದೆ ಎಲ್ಲರಿಗೂ
ಸಮಾನ ಹಕ್ಕು
ವಿಶ್ವಮಾನವ ಸಂದೇಶ
ಎಲ್ಲರೆದೆಯಲಿರಲಿ!
***
ಅಕ್ಷಯ ತೃತೀಯ
ಶ್ರೀಕೃಷ್ಣ-
ದ್ರೌಪದಿಗೆ
ಕೊಟ್ಟ
ಪಾತ್ರೆಯಿಂದ
ಆಗಿದ್ದು
ಅಕ್ಷಯ...
ಈಗ
ಏರುತ್ತಿರುವ
ಬಂಗಾರವ
ಕೊಳ್ಳಹೋದರೆ-
ನಿಮ್ಮ ಹಣವೆಲ್ಲಾ
ಪೂರ್ಣ ಕ್ಷಯ!
***
ಇದು ಕಣಣ್ಣಾ ಭಾರತೀಯ ಸೈನ್ಯದ ತಾಕತ್ತೂ…
ಮಾಡಿದ್ದುಣ್ಣೋ
ಮಹರಾಯ-
ಸಿಪಾಯಿ
ದಂಗೆ
ಪಾಕ್ ಗೆ
ಶಾಕ್...
ಪಾಕ್ ಸೈನ್ಯದಲಿ
ತಲ್ಲಣ-
ಧಾಳಿ ಭೀತಿಯಿಂದ
ಸೇನಾ
ಮುಖ್ಯಸ್ಥ
ಕೊಕ್!
***
ಅಪಾರ್ಟ್...ಮೆಂಟ್..
ಬೆಂಗಳೂರಿನ
ಸಂಕೀರ್ಣ ವಸತಿ-
ಎಲ್ಲಾ
ಗಲ್ಲಿಗಲ್ಲಿಗಳಲೂ
ಅಪಾರ್ಟ್ ಮೆಂಟ್ಗಳು
ತಲೆಯೆತ್ತಿ...
ಮಾನವ
ಸಂಬಂಧಗಳೇ
ತಮ್ಮಸಹಜ ಗುಣಗಳ
ಕಳೆದುಕೊಂಡು
Apart ಆಗಿ
ತಲೆತಗ್ಗಿಸಿವೆಯಲ್ಲ!
***
ನಡುಗಿದ ಗಂಡಸರು!
ರಾಜ್ಯದಲ್ಲಿ ಪೊಲೀಸರಿಗೇ
ಇಲ್ಲ ಸ್ವಯಂ ರಕ್ಷಣೆ-
ಪೊಲೀಸ್
ಮಹಾನಿರ್ದೇಶಕರನ್ನೇ
ಕೊಂದ
ಮಹಾ ಪತ್ನಿ...
ಈ ವಿಷಯ
ಕೇಳಿದ
ಗಂಡಸರು-
ಕಡು ಬೇಸಿಗೆಯಲ್ಲೂ
ನಡುಗಿ
ಆದರಂತೆ ಚಟ್ನಿ!
***
ಬಂಗಾರದ ಹುಚ್ಚು
ಒಂದೇ ದಿನ
ಮೂರು ಸಾವಿರ
ಕೋಟಿ ರೂ.
ಚಿನ್ನದ
ವಹಿವಾಟು-
ಏನಿದು ಹುಚ್ಚು...
ನಾಗರೀಕತೆಯ
ಕಟ್ಟಿ ಬೆಳಸಿದ್ದು
ಚಿನ್ನವಲ್ಲವೋ ಬೆಪ್ಪಾ...
ಮಹಾನ್ ಕಬ್ಬಿಣ!
ಮಾನವನ ಬೆಳವಣಿಗೆಯ
ಬೆನ್ನೆಲುಬಿನ ಕೆಚ್ಚು!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
