ಒಂದಿಷ್ಟು ಹನಿಗಳು…
ರಾಜ್ ನಮನ...
'ರಾಜ್' ಎಂಬ
ಮೌಲ್ಯಗಳ
ಸರದಾರ...
ಜನಮಾನಸದಲ್ಲಿ
ಬಿತ್ತಿದಿರಿ
ಮಾಲ್ಯಗಳ ಸಾರ...
ಅದ್ಭುತ ನಟನೆಯ
ರಾಜ, ರವಿತೇಜ
ವರನಟನೇ
ನಟಸಾರ್ವಭೌಮನೇ
ಮೌಲ್ಯಗಳ
ತೋರಿಸಿ ಪಾಲಿಸಿದವರೇ-
ನಿಮಗಿದೋ
ನಮ್ಮ ಸಹಸ್ರ ಸಹಸ್ರ ನಮನ!
***
ಯುದ್ಧ...ಯುದ್ಧ...
ಈ ಜಗತ್ತು
ಬಲು ಕಿಲಾಡಿ
ಮತ್ತು ಬಲು
ಬುದ್ಧಿವಂತ ಕಣ್ರೀ-
ಏನು ಮಾಡಬೇಕೆಂಬುದಕೆ
ಅದು ಸದಾ ಬದ್ಧ...
ವ್ಯವಸ್ಥೆಯ
ಕೊಬ್ಬು,ಅಹಂಕಾರ
ಕುಟಿಲತೆಗಳು
ಹೆಚ್ಚಾದಂತೆ
ಸಾರಿ ಬಿಡುತ್ತದೆ-
ಯುದ್ಧ.. ಯುದ್ಧ..ಯುದ್ಧ..!
***
ನಡುಗಿದ ಪಾಕ್..
ಭಾರತೀಯ
ಸೇನೆ
ಆರಂಭಿಸಿದೆ
ಯುದ್ಧ ಸಿದ್ಧತಾ
ಮಾಕ್
ಡ್ರಿಲ್...
ಭಯೋತ್ಪಾದನಾ
ಸ್ನೇಹಿ ಪಾಕ್ ಗೆ
ಹೃದಯ ಬಡಿತ
ಜೋರಾಗಿ
ಚಿಮ್ಮಿದೆ
ರಕ್ತ ಚಿಲ್!
***
ಆಪರೇಷನ್ ಸಿಂಧೂರ
ಆಪರೇಷನ್
ಸಿಂಧೂರ-
ಮಹಿಳಾ
ಸೈನ್ಯಾಧಿಕಾರಿಗಳೇ
ಕೊಟ್ಟಿರುವರಲ್ಲ
ದಿಟ್ಟ ಉತ್ತರ...
'ಸಿಂಧೂರ' ದ
ಸನಾತನ ಶಕ್ತಿಯ
ಅರಿವಾಯಿತೇ
ಭಯೋತ್ಪಾದಕರೇ...
ಇನ್ನೂ ಮುಂದಿದೆ
ಮಾರಿಹಬ್ಬ ಎಚ್ಚರಾ!
***
ಅವನೇ ದೇವರು..
ಈ ಜಗದಲಿ-
ದೇವರಿಲ್ಲ
ದೇವರಿಲ್ಲ...
ಎಂದು
ಕುಣಿಯಬೇಡಿರೋ
ಹುಚ್ಚಪ್ಪಗಳಿರಾ...
ನಿಮ್ಮ
ಸುತ್ತಲಿನ
ಭವ್ಯ ಪ್ರಕೃತಿಯ
ನಿರ್ಮಾಣ ಮಾಡಿ
ನಿಮಗಿತ್ತವನು
ಯಾರು ಹೇಳಬಲ್ಲಿರಾ?
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೇಟ್ ತಾಣ
