ಒಂದಿಷ್ಟು ಹನಿಗಳು…

ಒಂದಿಷ್ಟು ಹನಿಗಳು…

ಕವನ

ಬೆತ್ತಲಾದ ಪಾಕಿಸ್ತಾನ..

ಓ ಕುಟಿಲ

ಪಾಕಿಸ್ತಾನೀ

ಆಡಳಿತವೇ-

ಇಡೀ ಜಗತ್ತಿಗೆ

ನಿನ್ನ ನರೀ ಬುದ್ಧಿ

ತೋರಿಸಿಬಿಟ್ಟೆಯಲ್ಲೋ...

 

ಪಾಪಿ ಉಗ್ರರ

ಸಂಸ್ಕಾರದಲಿ

ಪಾಲ್ಗೊಂಡು

ಜಗತ್ತಿಗೇ ಬೆತ್ತಲಾಗಿ-

ಸಾಕ್ಷಿಯನೇ

ನೀಡಿಬಿಟ್ಟೆಯಲ್ಲೋ!

***

ರಾಷ್ಟ್ರ ಭಕ್ತಿ...

ನಾಡ ಹೆಂಚಿನ

ಮನೆಯಲ್ಲಿರುವವರು-

ತಮ್ಮ ಮಕ್ಕಳ

ರಾಷ್ಟ್ರ ಸೇವೆಗೆ

ಸೈನಿಕರಾಗಿ ಕಳಿಸಿ

ರಾಷ್ಟ್ರಭಕ್ತಿಯ ಮೆರೆದರು...

 

ಮಹಡಿ ಮನೆಯ

ಎತ್ತರೆತ್ತರಕೆ ಕಟ್ಟಿಸಿ

ಮಕ್ಕಳನ್ನು ಸಾಕಿದವರು-

ದುಶ್ಚಟ ; ದುರಭ್ಯಾಸಗಳ

ದಾಸರನ್ನಾಗಿ ಮಾಡಿ

ಅಹರ್ನಿಶಿ ಕೊರಗಿದರು!

***

ಮತ್ತೊಮ್ಮೆ ಬೆತ್ತಲೆ!... 

ಮದರಸಾ

ವಿದ್ಯಾರ್ಥಿಗಳು

ಎರಡನೇ ಹಂತದ

ಸೈನಿಕರು-

ಪಾಕ್ ರಕ್ಷಣಾ

ಸಚಿವನ ಹೇಳಿಕೆ...

 

ಅಯ್ಯೋ ಹುಚ್ಚಪ್ಪಾ...

ಹೋರಾಡಲು ನಿಮ್ಮಲ್ಲಿ

ಬಲಿತ ಯೋಧರಿಲ್ಲವೇ

ಕಲಿಯುವ ಎಳೆಯ

ವಿದ್ಯಾರ್ಥಿಗಳೇ

ಆಗಬೇಕೇ...?

***

ಜೀವಂತದಲ್ಲಿ ಇಲ್ಲದ್ದು ಸತ್ತ ಮೇಲೆ ಏಕೆ...? 

ಅಮ್ಮ

ಇರುವವರೆಗೂ

ಮನೆಯಲ್ಲಿ-

ಎಲ್ಲರೂ

ಪರಿಚಾರಿಕೆಯಂತೆ

ಕಂಡರು...

 

ಸತ್ತ ಮೇಲೆ-

ಫೋಟೋಗೆ

ಭರ್ಜರಿ ಹಾರ ಹಾಕಿ

ಪ್ರೀತಿಯ

ಹೊಳೆಯನೇ 

ಹರಿಸಿದರು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್