ಒಂದಿಷ್ಟು ಹನಿಗಳು…
ಏರಿಕೆ...
ಸಿಹಿ ಸುದ್ಧಿ-
ಕರ್ನಾಟಕ
ರಾಜ್ಯದಲ್ಲಿ
ಹೆಣ್ಮಕ್ಕಳ
ಸಂಖ್ಯೆ
ಏರಿಕೆ...
ಮತ್ತೆ-
ಗಂಡ್ಮಕ್ಕಳ
'ವಧು ಅನ್ವೇಷಣೆ'
ಪ್ರಕ್ರಿಯೆ
ಇನ್ನು ಮುಂದೆ
ಚುರುಕೇ...?
***
ಸಕ್ಕರೆಯ ನಾಡಿನ ಅಕ್ಕರೆಯ ಸಂಭ್ರಮ....
ಸಕ್ಕರೆಯ
ನಾಡಿನಲಿಂದು-
ಕನ್ನಡ
ಸಂಭ್ರಮದ
ಒಡ್ಡೋಲಗವ
ನೋಡುವ ಬಾರಾ...
ಕನ್ನಡದ ಮಕ್ಕಳು
ನಾವೆಲ್ಲ ಸೇರಿ
ಎಳೆಯೋಣ-
ಅಕ್ಕರೆಯ
ಕನ್ನಡಮ್ಮನ
ಸಂಭ್ರಮದ ತೇರಾ!
***
ಕನ್ನಡಮ್ಮನ ದೇವಾಲಯ
ಬಾಡೂಟ-
ನಿಜಕ್ಕೂ
ಆರೋಗ್ಯಪೂರ್ಣ;
ಇದು ಊಟದ ಸಂಸ್ಕೃತಿ
ಇರಬಹುದು
ಪ್ರಗತಿಪರರೇ...
ಸಾಹಿತ್ಯ ಸಮ್ಮೇಳನ-
ಕನ್ನಡಮ್ಮನ ದೇವಾಲಯ;
ಇಲ್ಲಿ ಇಂತಹ ಆಹಾರ
ಸೇವಿಸದಿರುವುದು
ಭಾರತೀಯ ಸಂಸ್ಕೃತಿ-
ನೆನಪಿಟ್ಟುಕೊಳ್ಳಿರೇ!
***
ಅಪ್ಗ್ರೇಡ್ ಲಂಚ
ಸರ್ಕಾರೀ
ಅಧಿಕಾರಿಗಳು-
ಫೋನ್ ಪೇ
ಗೂಗಲ್ ಪೇನಲ್ಲಿ
ಲಂಚ
ಸ್ವೀಕಾರ...
ಇನ್ನು-
ಕರಾರುವಾಕ್ಕಾಗಿ
ಹೇಳಬಹುದು ಬಿಡಿ
ಲಂಚದ
ಹಣದ
ವ್ಯವಹಾರ!
***
ಭಾರತೀಯ ನಮಸ್ಕಾರ
ಕೈಜೋಡಿ
ನಮಸ್ಕರಿಸುವುದು-
ಅದೆಂತಹ
ಪ್ರಭಾವಶಾಲೀ
ಭಾರತೀಯ
ಸಂಪ್ರದಾಯ...
ಅದಕೆಂದೇ ಇರಬೇಕು-
ಈ ರಾಜಕಾರಣಿಗಳ
ಇಡೀ ಕುಲಕೇ-
ತುಂಬಿ ಹರಿಯುವುದು
ಸಂಪದ್ಭರಿತ
ಆದಾಯ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
