ಒಂದಿಷ್ಟು ಹನಿಗಳು…

ಒಂದಿಷ್ಟು ಹನಿಗಳು…

ಕವನ

ತೆಂಗಿಗೆ ಡಿಮ್ಯಾಂಡ್ 

ಎಳನೀರಿನ

ಬಳಕೆ ಹೆಚ್ಚಳ;

ರಾಜ್ಯದಲ್ಲಿ

ಹಣ

ಕೊಡ್ತೀವಂದ್ರು

ಸಿಗ್ತಿಲ್ಲ ತೆಂಗು...

 

ತೆಂಗು

ಇಲ್ಲದ

ಅಡುಗೆ-

ಕಳೆದು

ಕೊಳ್ಳುವುದೇ

ತನ್ನ ರಂಗು!

***
ಪ್ರೀತಿಯ ಸೌಧ.. 

ಕಟ್ಟಬೇಕಿತ್ತು

ನಾವು-

ಸಂಬಂಧ ಸ್ನೇಹಗಳ

ಸುಂದರ

ಪ್ರೀತಿಯ

ಇಟ್ಟಿಗೆಗಳ ಸೌಧ...

 

ಅದು-

ಮುರಿದು 

ಕುಸಿಯುವುದೇ

ವ್ಯಾವಹಾರದ

ಕಲ್ಲುಗಳ

ಭಾರದಿಂದ!

***

ಎಲ್ಲಿ ಹಣದಾನಂದ? 

ಅಂದು-

ದುಡಿದ ಹಣ ಜೇಬಲಿಟ್ಟು

ಝಣ ಝಣ ಸದ್ದನು

ಮಾಡಿ-ನೋಡಿ

ಆನಂದಿಸುತ್ತಿದ್ದುದೇ

ನಮ್ಮ ಸೌಭಾಗ್ಯ...

 

ಇಂದು-

ಎಲ್ಲವೂ ಆನ್ ಲೈನ್

ಗೂಗಲ್ ಪೇ

ಮಾಡಿ- ಹಣವ 

ನೋಡದಿರುವುದೇ

ಇಂದಿನವರ ದೌರ್ಭಾಗ್ಯ!

***

ಜೀವನ ಕುದುರೆ.. 

ಈ ಜೀವನ ಕುದುರೆಗೆ

ಅದೇನು ಸೊಕ್ಕು?

ಹೇಳಿದ ಮಾತನು

ಕೇಳದೆ- 

ಹಿಡಿಯುವುದು

ತನ್ನದೇ ಟ್ರ್ಯಾಕು...

 

ಅರಿಷ್ಡ್ವರ್ಗಗಳ

ಚಾಟಿ ಏಟು;

ನೀತಿ ಪಾಠಗಳ ಮನನ 

ಆದ ಮೇಲೆಯೇ- 

ಬೀಳುವುದು ಇದರ

ದುರಹಂಕಾರಕ್ಕೆ ಬ್ರೇಕು!

***

ಎಚ್ ಎಂ ಪಿ ವಿ 

ಸುನಾಮಿಯನು

ತಂದು

ಜನರ

ನಡುಗಿಸಿದ

ಕೊರೋನಾ

ಹೋಯ್ತು...

 

ಈಗ-

ಛಳಿಯಲಿ

ನಡುಗಿಸುವ

ಎಚ್ ಎಂ ಪಿವಿ

ವೈರಸ್ ಬಂತೇ

ಡುಂ ಡುಂ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್