ಒಂದಿಷ್ಟು ಹನಿಗಳು…
ಹಾಲಿ v/s ಮಾಜಿ
ಭಗ್ನ ಪ್ರೇಮಿ-
ಮಾಜಿ
ಪ್ರೇಯಸಿಯ
ಕಾರಿಗೆ
ಬೆಂಕಿಯಿಟ್ಟ
ರೌಡಿ...
ಹಾಲಿ
ಪ್ರೇಯಸಿಗೆ
ಎಲ್ಲರೂ
ಪ್ರೇಮದ ಮಳೆ
ಕರೆಯುವವರೇ
ಬಿಡಿ!
***
ಉಚಿತ-ಖಚಿತ
ಈ ಜಗದಲಿ
ತಂದೆ-ತಾಯಿಯ
ಮಹೋನ್ನತ ಪ್ರೀತಿ
ಮಾತ್ರವೇ
ನಿಮಗೆ-
ಉಚಿತ ಉಚಿತ ಉಚಿತ...
ಬೇರೆ ಎಲ್ಲಾ
ಸಂಬಂಧಗಳಿಗೆ
ನೀವು ದಂಡ
ತೆರಬೇಕಾದ್ದು
ಮಾತ್ರ-
ಖಚಿತ ಖಚಿತ ಖಚಿತ!
***
ವಿಶೇಷ ಸ್ಥಾನಮಾನ
ಹೆಣ್ಣು-
ಎಂಥವಳಾದರೂ
ಪಡೆದು
ಬಿಡುವಳು
ಶ್ರೇಷ್ಠ
ತಾಯಿಯ ಪಟ್ಟ...
ನಮ್ಮನೆಲ್ಲಾ
ಒಂಭತ್ತು ತಿಂಗಳು
ಹೊತ್ತು-ಹೆತ್ತು
ಕಷ್ಟಪಟ್ಟು
ಹತ್ತಿಬಿಡುವಳು-
ಸ್ವರ್ಗದ ಅಟ್ಟ!
***
ಸರಳ ಮೌಲ್ಯ...
ಈ ನಮ್ಮ
ಸುಗಮ
ಜೀವನದ
ನಿರ್ವಹಣೆಗೆ
ಬೇಕಿಲ್ಲ
ಅತಿ ತರ್ಕ...
ಸರಳ
ಸುಂದರ
ಮೌಲ್ಯಗಳಿಂದಲೇ
ಆಗುವುದು
ಜೀವನ
ಬಹು ಪಕ್ವ!
***
ಹಣವೇ ಜೀವ
ಕೋವಿಡ್
ಕಾಲದಲ್ಲೂ
ಕಾಸು ಬಿಡದ
ಬಿಬಿಎಂಪಿ
ಆರೋಗ್ಯ ಇಲಾಖೆ
ಮಹಾ ಭ್ರಷ್ಟರ್...
ಪ್ರಾಣವನ್ನೂ
ಲೆಕ್ಕಿಸದೆ
ಹಣವನ್ನು
ಮುಕ್ಕಿದ ಇವರು
ನಿಜಕ್ಕೂ
ಧೈರ್ಯಶಾಲಿಗಳ್!
***
ನಟ್ಟು-ಬೋಲ್ಟು
ಚಿತ್ರರಂಗದ
ಬೋಲ್ಟ್
ನಟ್ಗಳನ್ನು-
ಬಿಗಿ ಮಾಡಲು
ಹೊರಟ
ಡಿ ಸಿ ಎಂ...
ರಾಜಕೀಯದಲ್ಲೇ-
ಕೆಲವರಿಗೆ ಬೋಲ್ಟ್ ಇದ್ದರೆ
ಇನ್ನು ಕೆಲವರಿಗೆ
ನಟ್ಟೇ ಇಲ್ಲ;
ಇದ ಸರಿಪಡಿಸಿ
ತಪ್ಪಿಸಿ ಗುಳುಂ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
