ಒಂದಿಷ್ಟು ಹನಿಗಳು…
ಮಹಿಳಾ ಐಪಿಎಸ್ ಗಳ ಶೀತಲ ಸಮರ...
ಮಹಿಳೆಯರು
ಸಾಮಾನ್ಯ
ಜೀವನದಲ್ಲೇ
ಮಾಡುವರು
ನಯವಾದ
ಯುದ್ಧ...
ಇನ್ನು
ಅಧಿಕಾರ
ಕೊಟ್ಟರೆ
ಬಿಡುವರೇನೋ-
ಶೀತಲ-ಬಿಸಿ
ಸಮರದ ಗುದ್ದಾ!
***
ವಿಧಾನ ಸಭೆಯಲ್ಲೊಂದು ಡ್ರಾಮಾ....
ಮದ್ಯ
ಅಕ್ರಮ
ಮಾರಾಟ
ನಿಲ್ಸಿ-
ವಿಧಾನ ಸಭೆಯಲ್ಲಿ
ಗಂಭೀರ ಚರ್ಚೆ...
'ನಾನು ಹೊಡದಂಗೆ
ಮಾಡ್ತೀನಿ;
ನೀನು
ಅತ್ತಂಗೆ ಮಾಡು'
ಎಂದರೆ ಇದೇನಾ?-
ಎಂಥಾ ವಿಮರ್ಶೆ!
***
ಛಲಗಾರ
ನುಡಿದಂತೆ
ನಡೆದ
ಛಲಗಾರ
ನಮ್ಮ
ಮುಖ್ಯಮಂತ್ರಿ
ಸಿದ್ದರಾಮಣ್ಣ...
ಎಲ್ಲಾ ಫ್ರಿ.. ಫ್ರೀ.. ಫ್ರೀ..
ಎಂದು-
ಬೊಕ್ಕಸ ಖಾಲಿ
ಮಾಡಿಕೊಂಡು
ಬಿಡುತಿರುವರೇ
ಮೇಲುಗಣ್ಣ?
***
ನಿರುಪದ್ರವಿಗಳು
ಕರುನಾಡಿನ
ರಾಜಕಾರಣಿಗಳು-
ಸರ್ವಾಧಿಕಾರಿಗಳಷ್ಟು
ಕ್ರೂರರಲ್ಲ ಬಿಡಿ;
ಹಸುವಿನಂತಹ
ಸಾಧು ಪ್ರಾಣಿಗಳು...
ಮುಂದೆ ಬಂದರೆ ಹಾಯರು;
ಹಿಂದೆ ಹೋದರೆ ಒದೆಯರು
ಏಕೆಂದರೆ ಅವರು-
ಸದಾ ತಮ್ಮ ಆರ್ಥಿಕ
ಸ್ಥಿತಿಯನ್ನೇ ಚಿಂತಿಸುವ
ನಿರುಪದ್ರವಿಗಳು!
***
ಮಾಯಾಮೃಗ
ಜಗತ್ತಿನಲ್ಲಿ
ರಾಜಕೀಯ
ಎಂಬುದು-
ಅರ್ಧ ಸತ್ಯ
ಅರ್ಧ ಸುಳ್ಳಿನ
ಮೇಲೋಗರ....
ಅದಕ್ಕೇ
ಇರಬೇಕು ಇದು-
ಮಾಯಾಮೃಗದಂತೆ
ಸೆಳೆವುದು
ಲೋಕದಿ
ಬಹು ಜನರ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
