ಒಂದಿಷ್ಟು ಹನಿಗಳು…
ಕವನ
ಚಾಟಿ ಏಟು
ಅವಮಾನದ
ಚಾಟಿ
ಎಲ್ಲ ಕಡೆಯಿಂದಲೂ
ಬಂದು
ಎನ್ನನು
ಹೊಡೆಯಲಿ ಛಡಿ...
ಅಪರಿಪೂರ್ಣನಾದ
ನಾನು- ಒಬ್ಬ ಸಭ್ಯ
ಮನುಷ್ಯನಾದಾದರೂ ಆಗಿ
ಸಮಾಜಕೆ
ಸೂಕ್ತ ವ್ಯಕ್ತಿಯಾದರೂ
ಆದೇನು ಬಿಡಿ!
***
ಮಿಮಿಕ್ರಿ
ವಿದೇಶಗಳಲ್ಲಿ
ನಡೆಯುವುದು
ನಿಜವಾದ
ರಾಜಕೀಯ
ಹಾಗೂ ಮಿಲಿಟರಿ
ಕ್ರಾಂತಿ...
ನಮ್ಮಲ್ಲಿ
ನಡೆಯುವುದು-
ರಾಜಕಾರಣಿಗಳು
ಬೇಳೆ ಬೇಯಿಸಿಕೊಳ್ಳುವ
ಮಿಮಿಕ್ರಿಯ
ಭ್ರಾಂತಿ!
***
ಅಭಿನವ ಶ್ರೀಕೃಷ್ಣ!
ಎಲ್ಲ
ಪಕ್ಷದವರೂ
ಪ್ರೀತಿಸುವ
ಮಾನವೀಯ
ಸಜ್ಜನಿಕೆಯ
ರಾಜಕಾರಣೀ...
ಎಲ್ಲರ
ಹೃನ್ಮನಗಳ
ಗೆದ್ದು ಬೀಗಿದ
ಮಹಾಭಾರತದ
ಅಭಿನವ
ಶ್ರೀಕೃಷ್ಣ ನೀ!
***
ಮೌನ
ಹೌದು
'ಮೌನ'
ಜಗತ್ತಿನ
ಅತಿ
ಸುಂದರ
ಮಾತು...
ದಿನವೂ
ಇದನ್ನೇ
ಆಡುತ್ತಿದ್ದರೆ-
ಸಿಗಲಾರದೇನೋ
ತಿನ್ನಲು ಒಂದು
ತುತ್ತೂ!
***
ಮಾತು
ಕಚ್ಛಾ
ಪದಾರ್ಥಗಳವು-
ಕಾರ್ಖಾನೆಗಳಲಿ
ಸಂಸ್ಕರಣಗೊಂಡು
ಸುಂದರ ವಸ್ತುಗಳಾಗಿ
ಹೊರಬರುವಂತೆ...
ಮಾತುಗಳು-
ನಮ್ಮ
ಮನಸ್ಸೆಂಬ
ಕಾರ್ಖಾನೆಯೊಳಗೆ
ಮಥಿಸರಳಿ
ಹೊರಬರಲಿ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
