ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

೧.

ಹಾರಾಡ ಬೇಡ

ಗೆದ್ದ ಖುಷಿಗೆ; ರೆಕ್ಕೆ

ಕತ್ತರಿಸುವರು!

 

೨.

ನಿನ್ನದೇನಿಲ್ಲ;

ದೇಣಿಗೆ ಕೊಟ್ಟವನು

ಮೇಲಿದ್ದಾನಲ್ಲ!

 

೩.

ಹುಟ್ಟು ಸಾವಿನ

ಲೆಕ್ಕ; ಶವ ಸುಡುವ

ಸ್ಮಶಾನ ಗುಟ್ಟು!

 

೪.

ಏರಿ ಬೀಳುವ

ಭಯಕೆ; ಹತ್ತದಿರೆ

ನೀನು ನಾಮರ್ಧ!

 

೫.

ಪಾದದಡಿಯ

ಬೇರು; ಎದೆಯ ನೀರು;

ಬದುಕು ತೇರು!

 

- ಕಾ.ವೀ.ಕೃಷ್ಣದಾಸ್

 

ಚಿತ್ರ್