ಒಂದಿಷ್ಟು ಹನಿಗಳು !

ಒಂದಿಷ್ಟು ಹನಿಗಳು !

ಕವನ

ಒಮ್ಮೆಯೆನ್ನ  ಅಪ್ಪಿಬಿಡೆ ಮುದ್ದು ಮುಖದ ಮೋಹಿನಿ

ಸೌಖ್ಯವಿಹುದು ಬಾಳಿನಲ್ಲಿ ಒಲುಮೆ ಸುಖದ ಮೋಹಿನಿ

 

ಜೀವದೊಲುಮೆ ತಾಣದಲ್ಲಿ ಪ್ರೀತಿ ಅರಳಿ ನಿಂತಿದೆ

ತನುವಿನಾಳ ಚೆಲುವು ಮೂಡೆ ಪ್ರೇಮ ಮನದ ಮೋಹಿನಿ

 

ಕನಸಿನಾಳ ನನಸು ಇರಲಿ ಖುಷಿಯ ತರಲಿ ಕಂಗಳು

ಚತುರನಾಟ ಸನಿಹ ಸಿಹಿಯು ಚೈತ್ರ ತನದ ಮೋಹಿನಿ

 

ಚಿತ್ರದೊಳಗೆ ಬಿಡಿಸಿದಂತ ಕಮಲದೊಳಗೆ ಸೊಬಗಿದೆ

ನಗುವಿನೊಳಗೆ ಬೆಸುಗೆ ಬರಲಿ ಮೈತ್ರಿ ಸೊಗದ ಮೋಹಿನಿ

 

ಈಶ ಬದುಕಿನೊಳಗೆ ಇರಲು ಸುತ್ತ ಹರುಷ ಚೆಲ್ಲಿದೆ 

ತಂಪಿನೊಸರು ಸ್ನೇಹದೊಳಗೆ ಬಂದ ವನದ ಮೋಹಿನಿ

***

ಹಾಯ್ಕುಗಳು

 

ಹೊತ್ತುತಲಿವೆ

ನಾಡಿನ ಚಿತೆಗಳು

ಜನ ಸಾಯುತ

 

ಚಿರುಟುತಲಿ

ಬದುಕಿನ ಕನಸು

ನನಸಾಗದೆ

 

ಉಪವಾಸದ

ಹಿಂಗಿದ ಕಣ್ಣಲ್ಲಿದೆ

ಪ್ರೇತದ ಕಳೆ

 

ಹೀಗೆ ಆದರೆ

ಮನುಷ್ಯನ ಪಯಣ

ಗೋರಿಗಳೆಡೆ

***

ಕಣ್ಣೀರು

ಪ್ರಜಾಪ್ರಭುತ್ವದಲ್ಲಿ

ಮಧ್ಯಮ 

ವರ್ಗದವರನ್ನು

ಕಡೆಗಣಿಸದಿರಿ !

ಹಾಗೇ

ಮಧ್ಯಮ

ಬರಹಗಾರರನ್ನು !!

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್