ಒಂದಿಷ್ಟು ಹನಿಗಳು...
ಕವನ
ಸೆಲೆಬ್ರಿಟಿ
ನನಗೇಕೆ
ಬೇಕು
ಆಡಂಬರದ
ಸೆಲೆಬ್ರಿಟಿಯ
ಎತ್ತರದ
ಈ ಪಟ್ಟ...?
ನನ್ನ
ಸ್ವೇಚ್ಛೆಯ
ಸ್ವಾತಂತ್ರ್ಯವನೇ
ಕಸಿಯುವ
ದೌಲತ್ತಿನ
ಆ ಚುಟ್ಟ!
***
ಹುಟ್ಟು-ಸಾವು
ಏನೀ
ಮಾನವನ
ಹುಟ್ಟು
ಸಾವಿನ
ನಿಗೂಢ
ಧಾಳಾಧೂಳೀ...
ಹುಟ್ಟಿದಾಗ
ಮಗುವಿನ
ಮುಖದಲಿ ದೈವತ್ವ;
ಸಾವಿನಲಿ
ಪರಮ ನರಕದ
ಮಹಾ ಸುಳಿ!
***
ವೈಪರೀತ್ಯ
ಪ್ರಕೃತಿಯ
ಗುಲಾಬಿಯ
ಗಿಡದಲ್ಲೇ
ಹೂವು-ಮುಳ್ಳು
ವೈಪರೀತ್ಯಗಳ
ವಿಚಿತ್ರ ವಿಶೇಷಣ...
ಇಂತಿರಲು
ನಮ್ಮನಡುವಿನ
ಸಣ್ಣ ಪುಟ್ಟ
ಭಿನ್ನಾಭಿಪ್ರಾಯಗಳ
ಮರೆತು ಆನಂದದಲಿ
ಬಾ ತೇಲೋಣ!
***
ಹೊಗಳಿಕೆ-ತೆಗಳಿಕೆ
ಹೊಗಳಿಕೆಯಿಂ
ಆ ಕಲ್ಲಿನ
ದೇವನೂ
ಗುಡಿಯಿಂ
ಕುಣಿಯುತಲಿ
ಬರುವ...
ತೆಗಳಿಕೆಯಿಂ
ಎಂತಹ
ಪೆದ್ದನೂ
ಕೆರಳಿ
ಕೆಂಡವಾಗಿ
ಬಿಡುವ!
***
ಮತ್ತದೇ ಹಾದಿ
ಪ್ರತಿ ದಿನವೂ
ಬೆಳಗ್ಗೆ ಎದ್ದಾಗ-
ನಾನಿಂದು ಹೊಸ
ಮನುಷ್ಯನಾಗಲೇ
ಬೇಕೆಂಬ ಹಠ
ತೊಡುತ್ತೇನೆ...
ಆದರೆ...
ಹಾಗೆಂದುಕೊಂಡಷ್ಟೂ-
ದಿನವೂ ಅದೇ ಹಾದಿ
ತುಳಿದದ್ದಕ್ಕಾಗಿ ರಾತ್ರಿ
ಭ್ರಮನಿರಸನಗೊಂಡು
ಮಲಗಿ ಬಿಡುತ್ತೇನೆ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್