ಒಂದಿಷ್ಟು ಹನಿಗಳು...
ಆನ್ಲೈನ್-ಆಫ್ಲೈನ್...
ನಗರದಲೆಲ್ಲೆಲ್ಲೂ
ನಡೆಯುತಲಿದೆ
ಸದ್ದಿಲ್ಲದೆ
ಭರಾಟೆ
ಬಿಸ್ನೆಸ್-
ಆನ್ಲೈನ್...
ಅಯ್ಯೋ..ನಮ್ಮೂರ
ಪೇಟೆಗಳಿಂದು
ಸೊರಗಿ
ಬಾಡಿ ಹೋಗಿವೆ
ಆಗಿ ಸ್ವಿಚ್
ಆಫ್ಲೈನ್!
***
ಕುವೆಂಪು
ಜಗದ ಕವಿ...
ಯುಗದ ಕವಿ...
ಮಲೆನಾಡಿನ ಕವಿ...
ವಿಶ್ವಪಥದ ಕವಿ...
ಮನುಜ ಮತದ ಕವಿ...
ರಾಷ್ಟ್ರ ಕವಿ...
ಕನ್ನಡಾಭಿಮಾನಕೆ
ನಿಮಗೆ ಯಾರಿಲ್ಲ ಸರಿ
ಜ್ಞಾನ ಪೀಠಕೇ
ತಂದುಕೊಟ್ಟಿರಿ ಗರಿ
ವಿಶ್ವ ಮಾನವ ಸಂದೇಶ
ಸಾರಿದ ಚೇತನವೇ....
ನಿಮಗಿದೋ ಸಹಸ್ರ ನಮನ
***
ಸದಭಿಮಾನ....
ನನ್ನ ದೇಶ
ನನ್ನ ಧರ್ಮ
ನನ್ನ ಊರು
ನನ್ನ ಭಾಷೆ
ನನ್ನ ಹೆತ್ತವರು
ನನ್ನ ಸಂಸ್ಕೃತಿ...
ಎಂಬ
ಮೂಲಭೂತ
ಭಾವವಿರದವರು
ಯಾವ ಸಿದ್ಧಾಂತ
ಪ್ರತಿಪಾದಿಸಿದರೇನು?
ಅದು ಬರೀ ವಿಕೃತಿ!
***
ಓ ಸೃಷ್ಟಿಯೇ...
ಎಂತದ್ಭುತ
ವಿಸ್ಮಯದ
ಕೂತೂಹಲದ
ಸಂಕೀರ್ಣದ
ಸೋಜಿಗದ
ಜಗತ್ತಿದ್ದು...
ಓ ಸೃಷ್ಟಿಯೇ
ನಿನಗಿದೋ
ಅನಂತ
ಧನ್ಯವಾದಗಳು
ನೀನೀಜಗಕೆ
ನನ್ನ ತಂದಿದ್ದಕ್ಕೆ!
***
2024...
ಬಂದಿತು
ಹೊಸ ವರುಷ
ತರಲಿ
ಎಲ್ಲರ ಬಾಳಿಗು
ಹರುಷದ ಭಾವ
ಮರೆಸಲಿ ನೋವ....
ನಮ್ಮ ಬಾಳನು
ಹಸನು ಮಾಡಿ
ಬೆಳಗಿದ
ಕಳೆದ
ವರುಷಕಿರಲೊಂದು
ಕೃತಜ್ಞತಾ ಭಾವ!
***
ಜಗದ ಹಾದಿ...
ಮೂಲಭೂತ
ವಿಷಯಗಳಿಗೆ
ಈ ಜಗತ್ತು
ಅಷ್ಟು
ತಲೆ
ಕೆಡಿಸಿಕೊಳ್ಳುತ್ತಿಲ್ಲ...
ಪ್ರತಿಷ್ಠೆ
ಶ್ರೀಮಂತಿಕೆ
ಅಧಿಕಾರ
ದೌಲತ್ತುಗಳಿಗಾಗಿಯೇ
ಈ ಪ್ರಪಂಚ
ಪರಿತಪಿಸುತ್ತಿದೆ!
***
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
