ಒಂದಿಷ್ಟು ಹನಿಗಳು...
ರಾಜಕೀಯ...
ತಮ್ಮ ತಮ್ಮ
ಪಕ್ಷದ
ಎಂ ಪಿ
ಎಂಎಲ್ಎ ಗಳಿಗೇ
ಭಾರೀ
ಅನುದಾನ...
ವಿರೋಧ
ಪಕ್ಷದ
ಪರಮ
ಪಾಪಿಗಳಿಗೆ
ಉಳಿದಿರುವುದು
ಬರೀ ರೋದನ!
***
ಬಿಸಿ-ಹಸಿ ಸುಳ್ಳು
ಬಿಸಿ ಬಿಸಿಯಾದ
ಹಸಿ ಹಸಿ ಸುಳ್ಳು-
ಈ ನಮ್ಮ
ಚುನಾವಣಾ
ಅಭ್ಯರ್ಥಿಗಳ
ಆಸ್ತಿ ಘೋಷಣೆ...
ಮೂಗು
ಮುಚ್ಚಿಕೊಂಡು
ನಕ್ಕು- ಓಟು
ಹಾಕುವುದೊಂದೇ
ನಮ್ಮ ಪಾಲಿಗಿರುವ
ವ್ಯರ್ಥ ಬವಣೆ!
***
ಜಾಣತನ
ರಾಜಕೀಯದಲಿ
ಹಣ ಮಾಡುವ
ವಿಷಯ
ಅಲ್ಲ
ಅಷ್ಟು
ದೊಡ್ಡತನ...
ಮಾಡಿದ
ಸಂಪತ್ತನು
ಉಳಿಸಿಕೊಳ್ಳಲು
ಅತ್ತಿಂದಿತ್ತ
ಹಾರಾಡುವುದೇ
ಜಾಣತನ!
***
ಇತಿಹಾಸ ಮತ್ತು ಸತ್ಯ!
ವರ್ತಮಾನ
ಎಂದೂ
ವಾಸ್ತವ
ಅಂಶಗಳನ್ನು
ಬಿತ್ತರಿಸಲಾರದು
ಬೆಪ್ಪರಾ...
ಸತ್ಯಕ್ಕಾಗಿ
ನೀವು
ಇತಿಹಾಸವನ್ನೇ
ಕಾಯ್ದು
ತತ್ತರಿಸಬೇಕಾದೀತು
ಎಚ್ಚರಾ!
***
ದ್ವಾರಕೀಶ್
ಕನ್ನಡದ
ಚಾರ್ಲಿ ಚಾಪ್ಲಿನ್;
ಸಿನಿಮಾರಂಗದ
ಹಾಸ್ಯ ನಟ-
ಕರ್ನಾಟಕದ ಕುಳ್ಳಾ
ದ್ವಾರಕೀಶಾ....
ದೇವತೆಗಳನು
ಮನರಂಜಿಸಲು
ಸ್ವರ್ಗ ಲೋಕಕೇ
ಪಯಣ...
ಅಲ್ಲೂ ಬಿಡಲಾರೆ
ನಿನ್ನ ತಮಾಶಾ!
***
ಜೋಡೆತ್ತು
ಜನರ
ಮುಂದೆ
ಮಾಜೀ
ಜೋಡೆತ್ತುಗಳ
ಜೋರು
ವಾಕ್ಸಮರಾ...
ಮುಂದೆ
ಒಂದೇ
ಬಂಡಿಯನ್ನು
ಎಳೆಯಲು
ಹೋದಾವು
ನೋಡಿ-ಬೆಪ್ಪರಾ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
