ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಸ್ಮಾರಕ 

ಈ ಮನುಜ-

ಇರುವಾಗ

ಬದ್ಧತೆ

ಹೋರಾಟ

ತರ್ಕಗಳ

ತಾರಕ...

 

ಅವನು 

ಅಳಿದ

ಮೇಲೆಯೇ-

ಅವನಿಗೊಂದು

ಮೌನದ

ಸ್ಮಾರಕ!

***

ಕೆರೆಯ ನೀರನು....

ಜಯಲಲಿತಾ

ಆಭರಣ

ಪಡೆಯಲು

ತಮಿಳುನಾಡು

ಸರ್ಕಾರ ಸೂಚನೆಯ

ನೋಡಿರೋ...

 

ಕೆರೆಯ ನೀರನು

ಕೆರೆಗೆ ಚೆಲ್ಲಿ

ವರವ

ಪಡೆದ

ರಾಜಕಾರಣಿಗಳಿವರು

ಕಾಣಿರೊ!

***

ಮಾನವೀಯತೆ 

ಕಾನೂನಿನಂತೆ

ನಡೆಯುತ್ತೇನೆ

ಎಂದು

ಎದೆಯುಬ್ಬಿಸಿ

ಹೋಗದಿರಿ

ಕೈಕೊಟ್ಟುಬಿಡುತ್ತೆ...

 

ಮಾನವೀಯತೆಯ

ನೆಲೆಗಟ್ಟಿನ

ಮೇಲೇ

ನಡೆದುಬಿಡಿ-

ಇತಿಹಾಸ

ನೆನಪಿಟ್ಟುಕೊಳ್ಳುತ್ತೆ!

***

ಲೂಟೀ-ಪಲ್ಟೀ 

ಎಲ್ಲ ಪಕ್ಷಗಳೂ

ಇಂದು

ಎಗ್ಗಿಲ್ಲದೆ

ಮಾಡುತಿಹವು

ರಾಜ್ಯದ

ಲೂಟೀ...

 

ಪ್ರತೀ

ಪಕ್ಷಕ್ಕೂ

ಮತದಾರ ಮಾತ್ರ

ಆಗಾಗ್ಗೆ

ಹೊಡೆಸುತಿರುವ

ಪಲ್ಟೀ!

***

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ವಿಜ್ಞಾನ

ಎಂಬುದು

ಪ್ರಕೃತಿಯಲಿ

ದೊರಕುವ

ವಸ್ತುಗಳಿಂದ

ಮಾಡಿದ ಅಡುಗೆ...

 

ಈ ಅಡುಗೆ

ಸದಾ ನಮ್ಮ 

ಆರೋಗ್ಯ

ಕಾಪಾಡುವಂತೆ

ಇರಲಿ

ನಮ್ಮ ನಡಿಗೆ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್