ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಕಾತರ....

ಎಲ್ಲಾ

ಪಕ್ಷದವರೂ

ಕಾತರದಿಂದ

ಕಾಯುತಿರುವರು

ಅಭ್ಯರ್ಥಿಗಳ

ಪಟ್ಟಿ ಪಟ್ಟಿ....

 

ಆಯ್ಕೆ

ಆದವರೇ

ಮುಂದಿನ

ರೋಚಕ

ರಾಜಕಾರಣಕೆ

ಗಟ್ಟಿ-ಗಟ್ಟಿ!

***

ಜೀವನ ಪಾಠ....

ನೀವು ಅನುಭವಿಸಿದ

ನೋವು-ಅವಮಾನ

ಒಂದು ಶಿಕ್ಷೆ

ಎಂದು- ನೊಂದರೆ

ಅದು ನಿಮ್ಮ

ಸೋಲು...

 

ಅವುಗಳನ್ನೇ-

ವಿದ್ಯಾರ್ಥಿಯಾಗಿ

ಜೀವನದ  ಪಾಠ

ಎಂದುಕೊಂಡರೆ

ಅದೇ ನಿಮ್ಮ 

ಗೆಲುವು!

***

ನುಡಿದರೆ- ಹೈಕಮಾಂಡ್ ಅಹುದಹುದೆನಬೇಕು....

ರಾಜಕಾರಣಿಗಳೇ-

ನೀವು ಬರೀ

ಜನಪ್ರಿಯರಾದರೆ

ಸಾಲದು;

ಆಗಿರಿ ಮೃದು 

ಮಾತಿನ ಒಡೆಯ...

 

ಆಗ ನೋಡಿ-

ಜಗ ನಿಮ್ಮ

ಮೆಚ್ಚುವುದಲ್ಲದೆ;

ಟಿಕೆಟ್ ತಾನಾಗಿ

ಒಲಿದು ಬರುವ

ಕಮಾಲ್ ಪರಿಯ!

***

ದುಷ್ಮನ್ ಬಗಲ್ ಮೆ ಹೈ....

ದೇಶದಲ್ಲಿ

ಭಯೋತ್ಪಾದಕರು

ಸಾರ್ವಜನಿಕ

ಸ್ಥಳಗಳಲ್ಲಿ

ಇಡುತ್ತಾರೆ

ಟೈಂ ಬಾಂಬ್...

 

ಆದರೆ

ರಾಜಕೀಯದಲ್ಲಿ

ಸ್ವಂತ ಪಕ್ಷದವರೆ

ಕುರ್ಚಿ ಕೆಳಗೆ

ಇಟ್ಟು ಬಾರಿಸುವರು

ಡುಮ್ ಡುಮ್!

***

ಅಳಿಯನಲ್ಲ; ಮಗಳ ಗಂಡ!

ರಾಜ್ಯದಲ್ಲಿ

ಒಂದೇ

ಕುಟುಂಬದ

ವ್ಯವಸ್ಥೆ

ಬೇಡವೆಂದು

ಅವರ ಸ್ಫರ್ಧೆ...

 

ಏನು ಮಾಡುವುದು

ಅದೇ ಆಶಯಕೆ

ಹೈಕಮಾಂಡ್ 

ಟಿಕೆಟ್ ಕೊಡದೆ

ಅವರ ಬೆನ್ನಿಗೂ

ಹಾಕಿತು ಗುದ್ದೇ?

***

ಸ್ವಾರ್ಥವೇ ಶ್ರೇಷ್ಠ 

ಟಿಕೆಟ್

ಸಿಕ್ಕರೆ

ಪಕ್ಷನಿಷ್ಠೆ

ಬಲವಾಗಿ ಹೆಚ್ಚಿ

ತೋರುವರು

ಅಭಿಮಾನ...

 

ಸಿಕ್ಕದಿದ್ದರೆ

ಸ್ವಾರ್ಥ ಹೆಚ್ಚಿ

ತಿರಸ್ಕಾರದ

ಬಾಲ ಬೆಳೆದು

ಪಕ್ಷಾಂತರದ

ದುರಭಿಮಾನ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್