ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಅಚ್ಛೇ/ಗ್ಯಾರಂಟಿ 

ಅವರದ್ದು

ಅಚ್ಛೇ ದಿನ್

ನಿಮ್ಮದು

ಗ್ಯಾರಂಟಿ ದಿನ್

ಮತದಾರನಿಗೆ ಬರೀ

ಹೇಳಿಕೆಯ ಫನ್...

 

ಇವರಿಬ್ಬರ

ಜಗಳದಲಿ

ಕರ್ನಾಟಕಕ್ಕೆ

ಯಾರೂ

ಕೊಡುತ್ತಿಲ್ವೇ

ಕುಡಿಯಲು ನೀರನ್!

***

ಖಾಲೀ ಚೊಂಬು! 

ಈಗ ಕರ್ನಾಟಕದ

ಓಟಿನ

ರಾಜಕೀಯದಲಿ

ಸ್ಟೀಲ್

ಚೊಂಬಿನದ್ದೇ

ಢಣ ಢಣ ಸದ್ದು...

 

ಹಣವನು

ತಿಜೋರಿಯಲಿ ತುಂಬಿ;

ಖಾಲಿ ಚೊಂಬ 

ತೋರಿಸುತ-

ಮತದಾರನಿಗೆ

ಅರೆಯುತಿಹರು ಮದ್ದು!

***

ಜಾದೂ...ಜಾದೂ...

ಚೊಂಬನ್ನೇ

ಅಕ್ಷಯ ಪಾತ್ರೆ

ಮಾಡ್ತೇವೆ-

ಹೊಸ ದಿವ್ಯಾಸ್ತ್ರ!

ರಾಜಕೀಯ ಭೀಷ್ಮ

ದೇವೇಗೌಡರು....

 

ಕರ್ನಾಟಕದ

ಚಾಣಾಕ್ಷ

ರಾಜಕಾರಣಿ...!

ಮಾಡಿದರೂ

ಮಾಡಬೌದು

ಛಲದಂಕ ಮಲ್ಲರು!

***

ಎಚ್ಚರಾ...

ಉದ್ವೇಗದ

ಮಾತುಗಳಿಂದ

ಈ ಜೀವನ

ನಡೆಯಲಾರದು

ರಾಜಕಾರಣಿಗಳೇ

ಎಚ್ಚರ...

 

ಸಹಜ

ಜೀವನದ

ಮಾತುಗಳರಳಿ

ಬರಲಿ ಆಗ-

ಎಲ್ಲರ ಬಾಳು

ಸುಂದರ!

***

ಗೆಲುವು-ಸೋಲು

ಮನುಷ್ಯ

ತಾನು ಯಾವ

ದುರ್ಗುಣಗಳಿಂದ

ಜಯಿಸಿದ್ದೇನೆ

ಎಂದು ಹೆಮ್ಮೆ

ಪಡುತ್ತಾನೋ....

 

ಅವಶ್ಯ

ಆ ಗುಣಗಳೇ

ಆತನನ್ನು-

ಕೊನೆಗಾಲದಲ್ಲಿ

ತಿರುಗುಬಾಣವಾಗಿ

ಮುಳುಗಿಸಿಬಿಡುತ್ತವೆ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್