ಒಂದಿಷ್ಟು ಹನಿಗಳು
ಕವನ
ಯಾರು ಬಂದರೂ
ಬದುಕಲರಿಯು ನೀ
ಮುಂದೆ ಸಾಗುತ !
ದ್ವೇಷ ಅಸೂಯೆ
ಉಬ್ಬರದಲೆಗಳು ,
ದಾಟಲೇ ಬೇಕು !
ಕನಸುಗಳ
ಜೊತೆಗೆ ಸಾಗಿದರೂ
ನನಸ ಕಾಣು !
ಮಾತುಗಳಲ್ಲಿ
ಹಿಡಿತವಿರಲೆಂದೂ
ಹಗೆಯು ಬೇಡ !
***
ಬರಹದಲ್ಲಿ
ಕಸವಿರಲಿಯೆಂದೂ
ಗುಡಿಸಬೇಕು !
ಹೆಗ್ಗಣವದು
ಇರುವಲ್ಲಿ ಸಾಹಿತ್ಯ
ಕಲಬೆರಕೆ !
ಕೆಲವರಿಂದು
ತಿಳಿದಿದ್ದೆಲ್ಲಾ ವಾಂತಿ
ಮಾಡುತ್ತಿದ್ದಾರೆ !
***
ಬೆಳಗು ಜಾವ
ಒಂದಷ್ಟಾದರೂ ನಡೆ
ದೇಹಕ್ಕೆ ಪುಷ್ಟಿ !
ಬೆತ್ತಲಾಗದೆ
ಇರಲು ಗೌರವಿಸು
ಹಿರಿಯರನು !
ನನ್ನದೇ ಸರಿ
ಎನದಿರು ಎಂದಿಗೂ
ಇಹ ಇನ್ನೊಬ್ಬ !
ಕೆಟ್ಟಿಹರೆಂದು
ದೂರ ಸರಿಯದಿರು
ರಿಪೇರಿ ಮಾಡು !
***
ಸಿಹಿ
ನನ್ನ
ವಿಚಾರಗಳು
ನನ್ನಂತೆ
ಹನಿ
ಹ
ನಿ
ಜೇನು !
***
-ಹಾ ಮ ಸತೀಶ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್