ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ನಿಜವಾದ ಸುಖ 

ಈ ಜಗತ್ತಿನಲ್ಲಿ

ಉಂಡು ಉಟ್ಟು

ಕೂಡಿ 

ನಲಿದದ್ದೇ

ನಿಜವಾದ

ಸುಖ...

 

ಉಳಿದೆಲ್ಲಾ

ಆಸ್ತಿ-ಅಂತಸ್ತು

ಅಧಿಕಾರ

ಜನಪ್ರಿಯತೆ-

ನಮ್ಮನ್ನು ಕಾಡುವ

ಮಿಕ!

***

ಗೂಡು-ಮಾಡು 

ಪ್ರತಿಯೊಂದೂ

ಹಕ್ಕಿಗಳು

ಕಟ್ಟುತ್ತವೆ

ತಮ್ಮ

ಮರಿಗಳಿಗೆ

ಗೂಡು...

 

ಇದು 

ಸ್ವಾರ್ಥವಲ್ಲ

ಗೆಳೆಯಾ

ಅವುಗಳ

ಕರ್ತವ್ಯದ

ಮಾಡು!

***

ಮರೀಚಿಕೆ 

ಹಣ-

ಎಂದೂ

ಅಳೆಯಲಾಗದು

ನಮ್ಮ ಮೌಲ್ಯ

ಹಾಗೂ

ಸ್ಥಾನಮಾನ....

 

ಅದು

ಎಂದಿದ್ದರೂ

ಅಪ್ಪಟ

ಮರಳುಗಾಡಿನ

ಮರೀಚಿಕೆಯೊಲು

ಭ್ರಮಾಧೀನ!

***

ಕಳ್ಳ ಬೆಕ್ಕು 

ಈ ರಾಜಕಾರಣಿಗಳು

ಕಳ್ಳ ಬೆಕ್ಕು-

ಕದ್ದು

ಹಾಲು

ಕುಡಿಯುತಿರುವುದೇ

ಪಕ್ಕಾ....

 

ಆದರೂ ಅವರು

ಮಾಡುತಿಹರಲ್ಲಾ

ಅದೆಷ್ಟು

ಮಿತಿ ಮೀರಿದ

ದರ್ಪಾ ಹಾಗೂ

ಸೊಕ್ಕಾ!

***

ಕಿಮ್ಮತ್ತು-ಗಮ್ಮತ್ತು 

ಈ ವೈದ್ಯ

ವೃತ್ತಿಯ

ಗೌರವವೂ ಹಾರಿತೇ-

ಅದು ಬರೀ

ಮೂರು ಲಕ್ಷ ರೂ

ಲಂಚದ ಕಿಮ್ಮತ್ತು...

 

ವೈದ್ಯರನೂ

ಬಿಡದೇ

ಕಾಡುತಿಹುದಲ್ಲ

ಏನಿರಬಹುದು

ಲಂಚ ರಾಕ್ಷಸನ

ಗಮ್ಮತ್ತು?

***

ವಾಮಾಚಾರ

ಗೆಲಲು

ಇರಬೇಕು

ಹೋರಾಟದ

ಛಲವು;

ಸುಸಂಸ್ಕೃತಿಯ

ಸದ್ಭಲವು...

 

ಇದೇನಿದು

ಕು-ಸಂಸ್ಕೃತಿ

ಕುರಿ-ಕೋಳಿಗಳ

ಬಲಿಯು?

ಕುಕೃತ್ಯ

ವಾಮಾಚಾರವು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್