ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಗೆದ್ದಾಗ-ಸೋತಾಗ 

ಗೆದ್ದಾಗ ಎಲ್ಲರೂ

ನಮ್ಮ ಸುತ್ತ

ಸೇರಿ

ಜೈಕಾರ ಹಾಕಿ

ಮಾಡುವರು

ದುಂದು...

 

ಸೋತಾಗ

ಬಂದು

ನಮ್ಮ

ಕಣ್ಣೊರೆಸುವವರೇ

ನಿಜವಾದ

ಬಂಧು!

***

ಸಮಾಧಾನ 

ಆಯ್ಕೆಯಾದ

ಇನ್ನೂರೈವತ್ತೊಂದು

ಸಂಸದರು

ಕ್ರಿಮಿ-ನಲ್

ಅಪರಾಧದ

ಹಿನ್ನೆಲೆ...

 

ಸಮಾಧಾನ ಬಿಡಿ;

ಇನ್ನೂ ಇದೆಯಲ್ಲಾ

ಇನ್ನೂರಾತೊಂಭತ್ತೆರೆಡು

ಸೀಟುಗಳಲ್ಲಿ

ಸಭ್ಯಸ್ಥರ

ಮುನ್ನೆಲೆ!

***

ಚುನಾವಣಾ ಭವಿಷ್ಯ

ತಲೆ ಕೆಳಗಾದ

ಚುನಾವಣಾ

ಸಮೀಕ್ಷೆ-

ಚುನಾವಣಾ

ತಂತ್ರಗಾರ ಪ್ರಶಾಂತ್

ತಪ್ಪೊಪ್ಪಿಗೆ...

 

ಅದಕ್ಕೇ-

ನಮ್ಮಟಿವಿ

ಢೋಂಗೀ

ಭವಿಷ್ಯಕಾರರೆಲ್ಲಾ

ಮರೆಯಾಗಿದ್ದರು

ಹೊರಗೆ!

***

ಎಚ್ಚರಾ 

ಧರ್ಮವನ್ನು

ವ್ಯಾಪಾರ

ಮಾಡಿಕೊಂಡು

ಅಕ್ರಮವಾಗಿ

ಗಳಿಸುತಿರುವ

ದುಷ್ಟರಾ...

 

ಕೊನೆಯಲ್ಲಿ

ಆ ಧರ್ಮವೇ

ನಿಮ್ಮನ್ನು

ತುಳಿದು

ಮುಗಿಸುವುದು

ಎಚ್ಚರಾ!

***

ಇತಿಹಾಸ ವೀರ 

ನಮ್ಮದು

ನಿಮ್ಮದು

ಅವರ

ಸಾಧನೆಗಳೆನಿತೋ

ನೋಡಿಹನು

ಭಾನು...

 

ಆ ಇತಿಹಾಸ

ವೀರನ

ಮುಂದೆ

ಎಲ್ಲರದೂ

ತೃಣ

ಮಾತ್ರವೇನು?

***

ಡೈವೋರ್ಸ್ 

ಯಾವ

ಪ್ರತಿಷ್ಠೆಯ

ಮೋಹ

ಒಡೆಯಿತೋ

ನಿಮ್ಮ ಸಂಸಾರದ

ಕೋಟೆಯಾ...

 

ಎಲ್ಲಾ

ಕೋಟೆಗಳೂ

ಕಟ್ಟಿರುವುದು

ಕಲ್ಲಿನಿಂದಲೆ

ಎಂಬುದನು

ನೀನರಿಯೆಯಾ?

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್