ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಹೋಗೋ ಹೋಗೋ ಮಳೆರಾಯ...

ಹೋಗೋ ಹೋಗೋ

ಮಳೆರಾಯ

ಕೇರಳ ನಾಡಿಗೆ

ಬಿಸಿಲಿಲ್ಲ

ಗುಡ್ಡದ ಕುಸಿತಕೆ

ಬಲಿಯೆಲ್ಲಾ...

 

ಕೂಲಿಯ

ಮಾಡುವ

ಜನರನೆಲ್ಲಾ-

ಕರುಣೆಯಿಲ್ಲದೆ

ಮಣ್ಣಿನಡಿಯಲೇ

ಹೂತೆಯಲ್ಲಾ!

***

ಸೈನಿಕರಿಗೊಂದು ಹ್ಯಾಟ್ಸ್ ಆಫ್...

ಅಲ್ಲಿ-

ಯುದ್ಧದಲ್ಲಿ

ಶತ್ರುಗಳ

ಎದೆಗೇ ಗುಂಡು

ಹೊಡೆಯುವ

ದೇಶ ರಕ್ಷಕರೇ...

 

ಇಲ್ಲಿ-

ಗುಡ್ಡ ಕುಸಿತದಲಿ

ಕೊಚ್ಚಿ ಹೋಗುವ

ಜನರನುಳಿಸುವಿರೇ...

ಹ್ಯಾಟ್ಸ್ ಹಾಫ್

ನಮ್ಮ ಸೈನಿಕರೇ!

***

ಧಾಳೀ ಧಾಳೀ ಧಾಳೀ...

ಇಸ್ರೇಲ್-

ಬೈರೂತ್ 

ಮೇಲೆ ಧಾಳಿ;

ರಷ್ಯಾ-

ಉಕ್ರೇನ್ ಮೇಲೆ 

ಧಾಳಾಧೂಳಿ...

 

ಇತ್ತ ದೇವರ 

ನಾಡಲಿ ಭೂ 

ಕುಸಿತದ  ಧಾಳಿ;

ಧಾಳೀ ಧಾಳೀ ಧಾಳೀ...

ಭೂಮಿಯ ಮೇಲೆ

ಇನ್ನುಳಿಗಾಲವೆಲ್ಲೀ?

***

ಭೀಮನ ಅಮಾವಾಸ್ಯೆ

ಪ್ರತಿದಿನ

ಹೆಂಡತಿಯ

ಪೂಜೆ

ಮಂಗಳಾರತಿಗೆ

ಒಗ್ಗಿಹೋಗಿದ್ದ

ಗುಂಡ...

 

ಇಂದು

ಹೆಂಡತಿ-

ವಿನೀತಭಾವದಿ

ಬಗ್ಗಿ ನಮಸ್ಕರಿಸಿದ್ದಕ್ಕೆ

ಆದ ಬಾಲ ಸುಟ್ಟ

ಇಲಿ ಸುಂಡ!

***

ಮದ್ಯದ ಹಬ್ಬ 

ಹಬ್ಬಗಳಲಿ

ಮದ್ಯಬಂದ್-

ಸರ್ಕಾರಕೆ

ಐನೂರನ್ನೆರೆಡು

ಕೋಟಿ

ನಷ್ಟ...

 

ಮದ್ಯದ

ಹಬ್ಬಗಳನ್ನೇ

ಮಾಡಿದರೆ-

ತೊಲಗುವುದು

ಹಣದ

ಸಂಕಷ್ಟ!

***

ಅಧೋಗತಿ 

ಆದಿ ಶಂಕರ

ಉವಾಚ-

ತೇನಾ

ವಿನಾ

ತೃಣಮಪಿ

ನಚಲತಿ...

 

ಹಣದ

ಹಪಾಹಪಿ-

ಪ್ರಜಾಪ್ರಭುತ್ವ

ತಲುಪಿ

ಬಿಟ್ಟಿದೆ

ಅಧೋಗತಿ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್