ಒಂದಿಷ್ಟು ಹನಿಗಳು...
ಅಧೋಗತಿ
ಆದಿ ಶಂಕರ
ಉವಾಚ-
ತೇನಾ
ವಿನಾ
ತೃಣಮಪಿ
ನಚಲತಿ...
ಹಣದ
ಹಪಾಹಪಿ-
ಪ್ರಜಾಪ್ರಭುತ್ವ
ತಲುಪಿ
ಬಿಟ್ಟಿದೆ
ಅಧೋಗತಿ!
***
ದೋಸ್ತಿಯಲಿ ತಂಟೆ!
ಒಲಂಪಿಕ್ಸ್ ನಲಿ-
ಚೀನಾ
ಅಮೇರಿಕಾ
ಫ್ರಾನ್ಸ್ ಗಳ
ಚಿನ್ನದ
ಬೇಟೆಯಂತೆ....
ನಮ್ಮಲ್ಲಿ-
ಬೆಂಗಳೂರಿನಿಂದ
ಮೈಸೂರಿಗೆ
ಪಾದಯಾತ್ರೆ
ಮಾಡಲೂ
ಬಲು ತಂಟೆಯಂತೆ!
***
ಬದ್ಧರಾಮಯ್ಯ
ಮೂಡಾ
ವಿಚಾರದಲ್ಲಿ
ನಾನು
ಯಾವುದೇ
ತಪ್ಪು ಮಾಡಿಲ್ಲ-
ಸಿದ್ಧರಾಮಯ್ಯ
ಮಾಡಿದ
ತಪ್ಪನು
ಒಪ್ಪಿಕೊಂಡವರು-
ಆಗಿ
ಮೆರೆಯುವರು
ಬದ್ಧ-ರಾಮಯ್ಯ!
***
ನಿಶ್ಚಿಂತರಾಗಿರಿ ಪ್ರಜಾ ಪ್ರಭುಗಳೇ...
ಅವರ ವಿರುದ್ಧ
ಇವರು;
ಇವರ ವಿರುದ್ಧ
ಅವರೇ
ನಿಂದನೆಯ ಗನ್ನನು
ಹಿಡಿದಿರುವಾಗ...
ನಿಮ್ಮದೇನಿದೆ
ಅವರಿವರನು
ಹಳಿಯುವ
ಕೆಲಸ...?
ನಿಶ್ಚಿಂತನಾಗಿರಿ
ಪ್ರಜಾ ಪ್ರಭುಗಳೇ!
***
ರಾಜಕಾರಣಿಗಳೇ ನಿಮಗೇಕೆ ಕೊಡಬೇಕು ಓಟು...?
ನೀವೇನು
ಒಲಂಪಿಕ್ಸ್ ಪದಕ
ತಂದಿರುವಿರೇ?
ವಯನಾಡಿನಲ್ಲಿ
ಸಂತ್ರಸ್ಥರನು
ರಕ್ಷಿಸಿದಿರೇ...?
ನಿಮಗೇಕೆ
ಕೊಡಬೇಕು
ಓಟು?
ಬರೀ ಹಣವನು
ಕೊಳ್ಳೇ ಹೊಡೆಯುವ
ಖದೀಮರೇ!
***
ಎಚ್ಚರ...
ರಾಜಕಾರಣಿಗಳೇ
ನಿಮ್ಮ
ವೈಯಕ್ತಿಕ
ದ್ವೇಶ;ದೂರು
ದುಮ್ಮಾನಗಳು
ನಮಗೆ ಬೇಕಿಲ್ಲ...
ನಾವು
ನಿಮ್ಮನಾರಿಸಿ
ಕಳಿಸಿರುವುದು
ಆಡಳಿತ ನಡೆಸಲು
ಎಂಬುದು
ನೆನಪಿರಬೇಕಲ್ಲ?
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ